ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಪತ್ನಿಯ ಮೇಲೆ ವಂಚನೆ ಆರೋಪ

ಇಸ್ರೇಲ್, ಶುಕ್ರವಾರ, 22 ಜೂನ್ 2018 (14:58 IST)

ಇಸ್ರೇಲ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ  ಪತ್ನಿ ಸಾರಾ ನೆತನ್ಯಾಹು ಅವರ  ವಿರುದ್ಧ  ಸರಕಾರಿ ಬೊಕ್ಕಸದ ಹಣವನ್ನು ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಸಾರಾ ನೆತನ್ಯಾಹು ಅವರು  ಪ್ರಧಾನಿಯ ನಿವಾಸದಲ್ಲಿ ನಡೆದ ಊಟ ಉಪಚಾರದ ಖರ್ಚಿಗೆ ಸರಕಾರದಿಂದ 1,00,000 ಡಾಲರ್ ಮೊತ್ತವನ್ನು ಪಾವತಿಸಿದ್ದಾರೆ ಎಂದು ಆರೋಪಿಸಿ ಜೆರುಸಲೇಮ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ ಸಾರಾ ನೆತನ್ಯಾಹು ಖಾಸಗಿ ಅಡುಗೆಯವರಿಗೆ ಸುಮಾರು 10,000 ಡಾಲರ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 2012ರ ಎಪ್ರಿಲ್‌ನಲ್ಲಿ ಕುಟುಂಬವು 7,100 ಡಾಲರ್‌ಗೂ ಹೆಚ್ಚಿನ ಮೊತ್ತದ ಉಪಾಹಾರವನ್ನು ತರಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ 'ಉಪಹಾರ ಆದೇಶ ಪ್ರಕರಣ' ಎಂದು ಹೆಸರಾಗಿದ್ದು ಅಪರಾಧ ಸಾಬೀತಾದರೆ ಗರಿಷ್ಟ 8 ವರ್ಷದ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿಯನ್ನು ಮಾನಸಿಕ ಅಸ್ವಸ್ಥ ಎಂದು ಕರೆದವರು ಯಾರು ಗೊತ್ತೇ?

ಛತ್ತೀಸ್ ಗಢ : ರಾಷ್ಟ್ರೀಯ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಕೋಕಾ ಕೋಲಾ ಕಂಪನಿ ...

news

ಐಟಿ ಸೆಲ್ ಚುರುಕುಗೊಳಿಸಲು ರಾಜ್ಯ ಬಿಜೆಪಿಗೆ ಆರ್ ಎಸ್ಎಸ್ ನಿರ್ದೇಶನ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ತಯಾರಾಗುವ ನಿಟ್ಟಿನಲ್ಲಿ ಮತ್ತೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ...

news

ಶಿಕ್ಷಣ ಇಲಾಖೆಗೆ ಸಲಹೆಗಾರ ಯಾಕೆ ಎಂದಿದ್ದಕ್ಕೆ ಸಚಿವ ಜಿಟಿಡಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಕೊನೆಗೂ ಮುನಿಸು ಮರೆತು ವಿಧಾನಸೌಧದ ತಮ್ಮ ಕಚೇರಿಗೆ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದ ಉನ್ನತ ...

news

ನಾನು ಡಿಕೆಶಿ ಚೆನ್ನಾಗಿಯೇ ಇದ್ದೀವಿ: ಎಚ್ ಡಿ ರೇವಣ್ಣ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ನ ಎಚ್ ...

Widgets Magazine
Widgets Magazine