ಮುಚ್ಚಿದ ಗಾಜಿನ ನಡುವೆ ಕುಟುಂಬದವರನ್ನು ಕಣ್ತುಂಬಿಕೊಂಡ ಕುಲಭೂಷಣ್ ಜಾದವ್

ಇಸ್ಲಾಮಾಬಾದ್, ಮಂಗಳವಾರ, 26 ಡಿಸೆಂಬರ್ 2017 (10:31 IST)

ಇಸ್ಲಾಮಾಬಾದ್: ಕೊನೆಗೂ ಪಾಕಿಸ್ತಾನ ಭಾರತೀಯ ಖೈದಿ ಕುಲಭೂಷಣ್ ಜಾದವ್ ಗೆ ಕುಟುಂಬದವರನ್ನು ಭೇಟಿಯಾಗಲು ಅವಕಾಶ ಕೊಟ್ಟಿದೆ.
 

ಮುಚ್ಚಿದ ಗಾಜಿನ ಬಾಗಿಲ ಮಧ್ಯೆ ಪಾಕ್ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಕುಲಭೂಷಣ್ ಜಾದವ್ ಮತ್ತು ಅವರ ಪತ್ನಿ, ತಾಯಿ ನಡುವೆ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಪಾಕ್ ಅಧಿಕಾರಿಗಳು ಕಚೇರಿ ಸುತ್ತ ಬಿಗಿ ಭದ್ರತೆ ಏರ್ಪಡಿಸಿದ್ದರು.
 
ಅಷ್ಟೇ ಅಲ್ಲದೆ, ಅಪಾರ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳೂ ಇಲ್ಲಿ ನೆರೆದಿದ್ದರು. ಭಾರತೀಯ ರಾಯಭಾರಿ ಕಚೇರಿಯ ಡೆಪ್ಯುಟಿ ಹೈಕಮಿಷನರ್ ಜೆಪಿ ಸಿಂಗ್ ಕುಲಭೂಷಣ್ ಪತ್ನಿ ಮತ್ತು ತಾಯಿಯನ್ನು ಕರೆದೊಯ್ದರು.
 
ಈ ಕ್ಷಣದ ಫೋಟೋವನ್ನು ಪಾಕ್ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ. ಹಲವು ವರ್ಷಗಳ ನಂತರ ಪತ್ನಿ, ತಾಯಿಯನ್ನು ನೋಡಿ ಕುಲಭೂಷಣ್ ಜಾದವ್ ಭಾವೋದ್ವೇಗಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ವಿರುದ್ದ ಕಿಕ್ ಬ್ಯಾಕ್ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೋಕೋಪಯೋಗಿ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿರುವ ಶಾಸಕ ತುಕಾರಾಂ ...

news

ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್

ನವದೆಹಲಿ: ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ...

news

ಶೀಲದ ಶಂಕೆ, ತಾಯಿಯನ್ನು ಕೊಲೆಗೈದ ತಂದೆಯನ್ನು ಬಂಧಿಸಲು ನೆರವಾದ ಮಗ

ಶೀಲದ ಶಂಕೆಯಿಂದ ತಾಯಿಯನ್ನು ತಂದೆಯೇ ಕೊಲೆ ಮಾಡಿದ್ದಾನೆ ಎಂದ ಮಗ ತಂದೆಯನ್ನು ಬಂಧಿಸಲು ಪೊಲೀಸರಿಗೆ ನೆರವು ...

news

9 ವರ್ಷದ ಬಾಲಕಿಗೆ ಚಾಕ್ಲೆಟ್ ಆಸೆತೋರಿಸಿ ಅತ್ಯಾಚಾರಕ್ಕೆ ಯತ್ನ

ಆಟವಾಡುತ್ತಿದ್ದ 9 ವರ್ಷದ ಬಾಲಕಿಗೆ ಚಾಕೊಲೇಟ್‌ ಕೊಡುವ ಆಸೆ ತೋರಿಸಿದ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ ...

Widgets Magazine