ಬ್ರಿಟನ್ನಿನಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಮಹಿಳೆಯರು ಸೇರಿ 8 ಭಾರತೀಯರ ಸಾವು

ಲಂಡನ್, ಸೋಮವಾರ, 28 ಆಗಸ್ಟ್ 2017 (19:35 IST)

ಇಬ್ಬರು ಮಹಿಳೆಯರು ಸೇರಿ 8 ಮಂದಿ ಭಾರತೀಯರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. ಕಳೆದ 25 ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ಅಪಘಾತವಿದು ಎನ್ನಲಾಗಿದೆ.


ಬಕಿಂಗ್ ಹ್ಯಾಮ್ ಶೇರ್`ನ ನ್ಯೂ ಪೋರ್ಟ್ ಪಗ್ನೆಲ್`ನಲ್ಲಿ ಶನಿವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ವಿಪ್ರೋ ಐಟಿ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರನ್ನ  ಕರೆದೊಯ್ಯುತ್ತಿದ್ದ ಮಿನಿ ಬಸ್ ಎರಡು ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಮೂವರು ವಿಪ್ರೋ ಉದ್ಯೋಗಿಗಳು ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಡ್ರೈವರ್ ಸಹ ಭಾರತ ಮೂಲದವನೆಂದು ತಿಳಿದು ಬಂದಿದೆ. ಇಬ್ಬರು ಲಾರಿ ಡ್ರೈವರ್`ಗಳನ್ನ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಬಂಧಿತ ಒಬ್ಬ ಡ್ರೈವರ್ ಮೇಲೆ ಅತ್ಯಂತ ವೇಗದ ಚಾಲನೆ, ವೇಗದ ಚಾಲನೆಯಿಂದ ಸಾವಿಗೆ ಕಾರಣವಾದ ಕೇಸ್ ದಾಖಲಿಸಲಾಗಿದೆ, ಮತ್ತೊಬ್ಬನ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಲಾಗಿದೆ. ಸೋಮವಾರ ಿಬ್ಬರನ್ನೂ ಕೋರ್ಟ್`ಗೆ ಹಾಜರುಪಡಿಸಲಾಗುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಸ್ತೆ ಅಪಘಾತ ಭಾರತೀಯರ ಸಾವು ಬ್ರಿಟನ್ Britain Raod Accident 8 Indians Dead

ಸುದ್ದಿಗಳು

news

ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರಿಕೆ: ಜಾರ್ಜ್

ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದು ನಗರಾಭಿವೃದ್ಧಿ ಖಾತೆ ...

news

ನನ್ನ ಪರಿಸ್ಥಿತಿ ಅಡ್ವಾಣಿಯಂತಾಗಿದೆ: ಮಾಜಿ ಸಚಿವ ಖಾಡ್ಸೆ

ಮುಂಬೈ: ಕಳೆದ ವರ್ಷ ಭ್ರಷ್ಟಾಚಾರ ಆರೋಪಗಳ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಮುಖಂಡ ...

news

ಎಸಿಬಿ ಎಫ್‌ಐಆರ್ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು: ಶಿವರಾಮ್ ಕಾರಂತ ಬಡಾವಣೆ ಡಿನೋಟಿಫಿಕೇಶನ್‌ ಕುರಿತಂತೆ ಎಸಿಬಿ ಸಲ್ಲಿಸಿದ ಎಫ್‌ಐಆರ್ ...

news

ಬಾಬಾಗೆ ಕೇವಲ 10 ವರ್ಷ ಸಜೆ: ಮೇಲ್ಮನವಿ ಸಲ್ಲಿಸಲಿರುವ ಸಂತ್ರಸ್ಥೆ

ರೋಹ್ಟಕ್: ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್‌ಗೆ ಸಿಬಿಐ ಕೋರ್ಟ್ ನೀಡಿದ 10 ವರ್ಷಗಳ ಶಿಕ್ಷೆ ತೃಪ್ತಿ ...

Widgets Magazine