ಪುತ್ರಿಯ ಮೇಲೆ 600 ಬಾರಿ ರೇಪ್ ಎಸಗಿದ ತಂದೆಗೆ 12 ಸಾವಿರ ವರ್ಷ ಶಿಕ್ಷೆ

ಕೌಲಾಲುಂಪುರ್:, ಗುರುವಾರ, 10 ಆಗಸ್ಟ್ 2017 (19:28 IST)

15 ವರ್ಷದ ಪುತ್ರಿಯ ಮೇಲೆ 600 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿರುವುದು ಸಾಬೀತಾದಲ್ಲಿ ಮಲೇಷ್ಯಾ ಮೂಲದ ಆರೋಪಿ 12 ಸಾವಿರ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ
36 ವರ್ಷ ವಯಸ್ಸಿನ ವಿಚ್ಚೇದಿತ ಆರೋಪಿ ವಿರುದ್ಧ 626 ಆರೋಪಗಳನ್ನು ಓದಲು ನ್ಯಾಯಾಲಯದ ಅಧಿಕಾರಿಗಳು ಎರಡು ದಿನಗಳನ್ನು ತೆಗೆದುಕೊಂಡು ಇಂದು ಮಧ್ಯಾಹ್ನ ಅಂತ್ಯಗೊಳಿಸಿದರು. 15 ವರ್ಷ ವಯಸ್ಸಿನ ಬಾಲಕಿಯ ವಿರುದ್ಧದ ದುರ್ಬಳಕೆಯ 599 ಆರೋಪಗಳನ್ನು, ಹಾಗೆಯೇ ಸಂಭೋಗ, ಮತ್ತು ಇತರ ಲೈಂಗಿಕ ಅಪರಾಧಗಳ ಎಣಿಕೆಗಳು ಸೇರಿವೆ..
 
ಬೂದು ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್‌‍ ಧರಿಸಿದ್ದ ಆರೋಪಿ, ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳು ಆರೋಪಗಳನ್ನು ಓದಿ ತಪ್ಪಿತಸ್ಥ ಎಂದು ಘೋಷಿಸಿದಾಗಲೂ ಮೌನವಾಗಿರುವುದು ಅಚ್ಚರಿಗೆ ಕಾರಣವಾಯಿತು.  
 
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ವಿಚಾರಣೆಗಾಗಿ ಪುಟ್ಟರಾಜಾಯಾ ರಾಜಧಾನಿಯಲ್ಲಿ ನೂತನವಾಗಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ಸರಕಾರಿ ವಕೀಲರು ವಾದ ಮಂಡಿಸಿ, ಆರೋಪಗಳು ಸಾಬೀತಾದಲ್ಲಿ ಆರೋಪಿ 12,000 ಸಾವಿರ ವರ್ಷಗಳ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
 
15 ವರ್ಷದ ಬಾಲಕಿಯ ಮೇಲೆ ಆರೋಪಿ ಎಸಗಿದ ಪ್ರತಿ ಬಾರಿಯ ಅತ್ಯಾಚಾರಕ್ಕೆ 20 ವರ್ಷಗಳ ಶಿಕ್ಷೆ ನಿಗದಿಪಡಿಸಲಾಗಿದ್ದು, ಅದರಂತೆ ಆರೋಪಿಯ  600 ಲೈಂಗಿಕ ದೌರ್ಜನ್ಯ ಅಪರಾಧಗಳಿಗೆ 12 ಸಾವಿರ ವರ್ಷ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಾಸ್ತವತೆ ಅರಿಯಲು ಗ್ರಾಮಗಳಿಗೆ ಭೇಟಿ ನೀಡಿ: ಡಿಸಿಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್

ನವದೆಹಲಿ: ವಾಸ್ತವ ಸ್ಥಿತಿಗತಿಯನ್ನು ಅರಿಯಲು ಫೈಲ್‌ಗಳನ್ನು ದೂರವಿಟ್ಟು ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ...

news

ದೇಶವನ್ನು ಬಿಜೆಪಿ ಆಳುತ್ತಿರುವುದು ದುರದೃಷ್ಟಕರ ಸಂಗತಿ: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿ ನಾಯಕರ ಜಗಳ ಬಿಡಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬರ್ತಿದ್ದಾರೆ ...

news

ಐಟಿ ದಾಳಿಯನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ: ಸಿಎಂ ಕಿಡಿ

ಮೈಸೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಗೆ ಹೆದರೋದಿಲ್ಲ. ಅನಗತ್ಯವಾಗಿ ಐಟಿ ದಾಳಿಯನ್ನೇ ...

news

ವಿಚಿತ್ರ ಆದ್ರೂ ಸತ್ಯ: ದಿನದಲ್ಲಿ ಸರಕಾರಿ ಶಾಲೆ, ರಾತ್ರಿ ಡಾನ್ಸ್ ಬಾರ್

ಲಕ್ನೋ: ಗ್ರಾಮ ಪಂಚಾಯತಿಯ ಮುಖ್ಯಸ್ಥನ ಪುತ್ರನ ಜನ್ಮದಿನಾಚರಣೆಗಾಗಿ ಸರಕಾರಿ ಶಾಲೆಯಲ್ಲಿ ಯುವತಿಯರ ಅಶ್ಲೀಲ ...

Widgets Magazine