ಟ್ರಂಪ್- ಕಿಮ್ ಭೇಟಿ ; ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಕೊಂಡ ಕಿಮ್

ಸಿಂಗಾಪುರ, ಬುಧವಾರ, 13 ಜೂನ್ 2018 (13:00 IST)

Widgets Magazine

: ಸಿಂಗಾಪುರದಲ್ಲಿ ಮಂಗಳವಾರದಂದು ನಿಗದಿಯಾಗಿದ್ದ ಐತಿಹಾಸಿಕ ಶೃಂಗ ಸಮ್ಮೇಳನದಲ್ಲಿ  ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಭೇಟಿಯಾಗಿ ಮಾತುಕತೆ ನಡೆಸುವುದರ ಮೂಲಕ ಈ ಸಭೆ ಯಶಸ್ವಿಯಾಗಿದೆ.


ಈ ಸಭೆಯಲ್ಲಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಗೆ ನೀಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ.  ಈ ಸಭೆಯಲ್ಲಿ ಈ ಎರಡು ದೇಶಗಳ ನಾಯಕರು ಒಪ್ಪಂದಕ್ಕೆ ಸಹಿ ಹಾಕಿದ್ದು ಅದರ ಪ್ರಕಾರ ಕೊರಿಯ ಪರ್ಯಾಯದ್ವೀಪದಲ್ಲಿ ಸ್ಥಿರ ಮತ್ತು ನಿರಂತರ ಶಾಂತಿಯನ್ನು ಕಾಪಾಡುವ ಕುರಿತು ಎರಡೂ ದೇಶಗಳು ಭರವಸೆಯನ್ನು ನೀಡಿವೆ. ಜೊತೆಗೆ ಕೊರಿಯನ್ ಯುದ್ಧದ ಸಮಯದಲ್ಲಿ ನಾಪತ್ತೆಯಾಗಿರುವ ಮತ್ತು ಬಂಧಿಯಾಗಿರುವ ವ್ಯಕ್ತಿಗಳನ್ನು ತಾಯ್ನಾಡಿಗೆ ಮರಳಿಸುವ ಬಗ್ಗೆಯೂ ಒಪ್ಪಂದ ಮಾಡಲಾಗಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಟ್ರಂಪ್, ಕಿಮ್ ಜೊತೆ ಭವಿಷ್ಯದಲ್ಲಿ ಇನ್ನಷ್ಟು ಬಾರಿ ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು ಮತ್ತು ಉತ್ತರ ಕೊರಿಯ ನಾಯಕನನ್ನು ಶ್ವೇತಭವನಕ್ಕೆ ಆಹ್ವಾನಿಸುವುದಾಗಿಯೂ ತಿಳಿಸಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಕಿಮ್, ಇದೊಂದು ಐತಿಹಾಸಿಕ ಭೇಟಿಯಾಗಿದ್ದು ಹಳೆಯದನ್ನು ಹಿಂದೆ ಬಿಟ್ಟು ಮುನ್ನಡೆಯುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಜಯನಗರ ಚುನಾವಣೆ: ಸೌಮ್ಯಾ ರೆಡ್ಡಿಗೆ ಗೆಲುವು

ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಬಿಜೆಪಿಯ ಪ್ರಹ್ಲಾದ್ ...

news

ಜಯನಗರದಲ್ಲಿ ಜಯದತ್ತ ಸೌಮ್ಯಾ ರೆಡ್ಡಿ ದಾಪುಗಾಲು

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರ ಚುನಾವಣೆಯ 14 ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು ...

news

ಗುರು ಎಲ್ ಕೆ ಅಡ್ವಾಣಿಗೇ ಪ್ರಧಾನಿ ಮೋದಿ ಗೌರವ ಕೊಡಲ್ಲ: ರಾಹುಲ್ ಆರೋಪ

ನವದೆಹಲಿ: ತಮ್ಮ ರಾಜಕೀಯ ಗುರು ಎಂದೇ ಪರಿಗಣಿಸಲ್ಪಟ್ಟಿರುವ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೇ ಪ್ರಧಾನಿ ಮೋದಿ ...

news

ಸಿಎಂ ಕುಮಾರಸ್ವಾಮಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ ಪ್ರಧಾನಿ ಮೋದಿ

ನವದೆಹಲಿ: ಇತ್ತೀಚೆಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಶುರು ಮಾಡಿದ್ದ ಫಿಟ್ನೆಸ್ ಚಾಲೆಂಜ್ ...

Widgets Magazine