ಸೌದಿ ಅಧಿಕಾರಿಗಳಿಗೆ ಸವಾಲಾದ ಮಿನಿ ಸ್ಕರ್ಟ್ ಹುಡುಗಿ

ರಿಯಾದ್, ಬುಧವಾರ, 19 ಜುಲೈ 2017 (09:03 IST)

ಸೌದಿಯ ಐತಿಹಾಸಿಕ ಕೋಟೆಯೊಂದರಲ್ಲಿ ಮಿನಿ ಸ್ಕರ್ಟ್ ಧರಿಸಿರುವ ಮಾಡೆಲ್ ಓಡಾಡುತ್ತಿರುವ ವಿಡಿಯೋ ಸ್ನಾಪ್ ಚಾಟ್ ಮೂಲಕ ಬಹಿರಂಗವಾಗಿ ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೌದಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.


ಮಾಡೆಲ್ ಖುಲೂದ್ ಎಂಬುವವರ ಸ್ನಾಪ್ ಚಾಟ್ ಖಾತೆಯಲ್ಲಿ ಸರಣಿ ವಿಡಿಯೋಗಳು ಪೋಸ್ಟ್ ಆಗಿವೆ. ತುಂಡು ಲಂಗ ಧರಿಸಿರುವ ಯುವತಿ ಉಶೈಖರ್ ಪೋರ್ಟ್ ಒಳಗೆ ಓಡಾಡುತ್ತಿರುವ ದೃಶ್ಯ ಇದರಲ್ಲಿದೆ. ಮರಳಲ್ಲಿ ಆಟವಾಡುತ್ತಾ, ಕೂದಲನ್ನ ಕೆದರಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾಳೆ.  ಯೂಟ್ಯೂಬ್`ಗೂ ವಿಡಿಯೋ ಪೋಸ್ಟ್ ಆಗಿದ್ದು, ಹಲವರು ಟ್ವೀಟ್ ಮಾಡಿದ್ದಾರೆ.
ರಿಯಾದ್ ಸ್ಥಳೀಯ ಸರ್ಕಾರ ಈ ಬಗ್ಗೆ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಅಸಭ್ಯ ಉಡುಪು ತೊಟ್ಟು ಐತಿಹಾಸಿಕ ಸ್ಥಳದಲ್ಲಿ ನಡೆದಾಡಿರುವ ಯುವತಿಯನ್ನ ಪತ್ತೆ ಹಚ್ಚುವಂತೆ ಆದೇಶಿಸಿದೆ.  ಸೌದಿ ನಿಯಮಗಳ ಪ್ರಕಾರ, ಮಹಿಳೆಯರು ತುಂಡುಡುಗೆ ತೊಟ್ಟು ಓಡಾಡುವುದು ಕಾನೂನು ಬಾಹಿರ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವರ್ಗಾವಣೆ ನಂತರ ಎಲ್ಲಿ ಹೋದರು ಡಿಐಜಿ ರೂಪ?

ಬೆಂಗಳೂರು: ಕಾರಾಗೃಹ ಇಲಾಖೆಯ ಡಿಐಜಿ ಪೋಸ್ಟ್ ನಿಂದ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿ ರೂಪಾ ಈಗ ಸಂಚಾರ ಹಾಗೂ ...

news

(Viral Video) ಎಣ್ಣೆ ಹೊಡೆದಿದ್ದ ಪೈಲಟ್: ಗಿರಕಿ ಹೊಡೆದು ಕೆರೆಗೆ ಬಿದ್ದ ವಿಮಾನ

4 ಸೀಟಿನ ವಿಮಾನವೊಂದು ಗಿರಕಿ ಹೊಡೆಯುತ್ತಾ ಕೆರೆಗೆ ಬಿದ್ದಿರುವ ಘಟನೆ ಸೈಬೀರಿಯಾದಲ್ಲಿ ನಡೆದಿದೆ. ...

news

ಕಾರಾಗೃಹದಲ್ಲಿ ಚೂಡಿದಾರ್ ಧರಿಸಿ ಓಡಾಡುತ್ತಿರುವ ಶಶಿಕಲಾ..!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಅಣ್ಣಾಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ವಿಶೇಷ ಸೌಲಭ್ಯ ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಸಾಮ್ರಾಜ್ಯ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಣ್ಣಾಡಿಎಂಕೆ ನಾಯಕಿ ...

Widgets Magazine