ಪ್ರವಾಸಕ್ಕೆಂದು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಗೆ ಸಚಿವೆ ಸುಷ್ಮಾ ನೆರವು

ನವದೆಹಲಿ, ಗುರುವಾರ, 12 ಅಕ್ಟೋಬರ್ 2017 (08:37 IST)

ನವದೆಹಲಿ: ವಿದೇಶದಲ್ಲಿರುವ ಭಾರತೀಯರಿಗೆ ಅಥವಾ ಭಾರತದಲ್ಲಿ ಸಂಕಷ್ಟದಲ್ಲಿರುವ ವಿದೇಶಿಯರಿಗೆ ನೆರವು ನೀಡುವುದರಲ್ಲಿ ಸದಾ ಮುಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಅಂತಹದ್ದೇ ಮಾನವೀಯತೆ ಮೆರೆದಿದ್ದಾರೆ.


 
ಭಾರತ ಪ್ರವಾಸಕ್ಕೆ ಬಂದ ರಷ್ಯಾ ಯುವಕ ಇವಾಂಜೆಲಿನ್ ಮರಳಲು ಸಾಕಷ್ಟು ಹಣವಿಲ್ಲದೇ ತಮಿಳುನಾಡಿನ ದೇವಾಲಯದ ಎದುರು ಭಿಕ್ಷಾಟನೆ ಮಾಡುತ್ತಿದ್ದ. ಸೆಪ್ಟೆಂಬರ್ 24 ರಂದು ಭಾರತಕ್ಕೆ ಬಂದಿದ್ದ ಇವಾಂಜೆಲಿನ್ ಎಟಿಎಂ ಪಿನ್ ಅಕಸ್ಮಾತ್ತಾಗಿ ಲಾಕ್ ಆಗಿತ್ತು.
 
ಇದರಿಂದಾಗಿ ಹಣವಿಲ್ಲದೇ ಈತ ದೇವಾಲಯದ ಎದುರು ಭಿಕ್ಷಾಟನೆಗೆ ಕೂತಿದ್ದ. ಈ ವಿಷಯಕ್ಕೆ ಗಮನಕ್ಕೆ ಬಂದ ತಕ್ಷಣ ಆತನ ನೆರವಿಗೆ ಬಂದ ಸಚಿವೆ ಸುಷ್ಮಾ ತಮಿಳುನಾಡಿನಲ್ಲಿರುವ ಅಧಿಕಾರಿಗಳಿಗೆ ತಕ್ಕ ನೆರವು ನೀಡಲು ಸೂಚಿಸಿದ್ದಾರೆ. ನಿಮ್ಮ ರಷ್ಯಾ ನಮ್ಮ ಸ್ನೇಹಿತ ರಾಷ್ಟ್ರ. ಚೆನ್ನೈಯಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ನೆರವು ನೀಡುತ್ತಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಡಿಶಾದಲ್ಲಿ ಲಘು ಭೂಕಂಪನ

ನವದೆಹಲಿ: ಕಂದಮಾಲ್ ಜಿಲ್ಲೆಯ ಫುಲಬಾನಿ ಪ್ರದೇಶದಲ್ಲಿ ನಿನ್ನೆ ಲಘು ಭೂಕಂಪ ಸಂಭವಿಸಿದೆ.

news

ಸೋಲಾರ್ ಪ್ರಕರಣ: ವೇಣುಗೋಪಾಲ್ ವಿರುದ್ಧ ಅತ್ಯಾಚಾರ ಆರೋಪ..?

ಕೇರಳ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ...

news

ರಾಜ್ಯ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ

ಬೆಂಗಳೂರು: ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಿದ್ದು 213 ಪೊಲೀಸ್ ...

news

ಎಸ್‌.ಎಂ.ಕೃಷ್ಣ ವಿರುದ್ಧ ಸಿಎಂ ಪರೋಕ್ಷವಾಗಿ ವಾಗ್ದಾಳಿ

ಬೆಂಗಳೂರನ್ನು ಕೆಲವರು ಸಿಂಗಾಪೂರ್ ಮಾಡಲು ಹೊರಟಿದ್ದರು. ಆದ್ರೆ ಅದು ಆಗಲಿಲ್ಲ ಎಂದು ಮಾಜಿ ಸಿಎಂ ...

Widgets Magazine
Widgets Magazine