ಎಂಎಂಎಲ್ ಪಕ್ಷದ ನಾಯಕ ಹಫೀಜ್ ಸಯೀದ್ ಗೆ ಫೇಸ್ ಬುಕ್ ನೀಡಿದೆ ಬಿಗ್ ಶಾಕ್

ಸೋಮವಾರ, 16 ಜುಲೈ 2018 (09:21 IST)

ಲಾಹೋರ್ : ಜು.25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಎಂಎಂಎಲ್ (ಇಸ್ಲಾಮಿಸ್ಟ್ ಮಿಲ್ಲಿ ಮುಸ್ಲಿಂ ಲೀಗ್) ಪಕ್ಷದ ನಾಯಕ ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ಅವರಿಗೆ ಫೇಸ್ ಬುಕ್ ಬಿಗ್ ಶಾಕ್ ವೊಂದನ್ನು ನೀಡಿದೆ.


ಇತ್ತೀಚೆಗಷ್ಟೇ ಪಾಕಿಸ್ತಾನ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದ ಫೇಸ್ ಬುಕ್, ಜು.25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿವಿಧ ರಾಜಕೀಯ ಪಕ್ಷಗಳ ನಕಲಿ ಖಾತೆಗಳನ್ನು ತೆಗೆದುಹಾಕಲು ಸ್ಥಳೀಯ ಸಂಸ್ಥೆಗಳಿಗೆ ನೆರವು ನೀಡುವುದಾಗಿ ಹೇಳಿದ್ದು. ಆ ಮೂಲಕ ಎಂಎಂಎಲ್ ಪಕ್ಷಕ್ಕೆ ಸೇರಿದ ಫೇಸ್ ಬುಕ್ ನ ಹಲವು ಪೇಜ್ ಹಾಗೂ ಖಾತೆಗಳನ್ನು ಫೇಸ್ ಬುಕ್ ನಿಷ್ಕ್ರಿಯಗೊಳಿಸಿದೆ.


ಸಕಾರಾತ್ಮಕ ಚರ್ಚೆಗಳನ್ನು ಉತ್ತೇಜಿಸುವುದು ತಮ್ಮ ಸಮಾಜಿಕ ಜಾಲತಾಣದ ಆದ್ಯತೆಯಾಗಿದೆ. ಯಾವುದೇ ಸಮಾಜಘಾತುಕ ಸಂಘಟನೆಗಳು ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವಂತೆ ಎಚ್ಚರಿಕೆ ವಹಿಸುವುದು ತಮ್ಮ ಉದ್ದೇಶವಾಗಿದೆ ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಪ್ರಧಾನಿ ಮೋದಿಗೆ ಇತಿಹಾಸದ ಮೇಲೆ ಗೌರವವಿಲ್ಲ: ಕಾಂಗ್ರೆಸ್ ಟೀಕೆ

ನವದೆಹಲಿ: ಪ್ರಧಾನಿ ಮೋದಿಗೆ ಇತಿಹಾಸದ ಬಗ್ಗೆ ಗೌರವವಿಲ್ಲ. ಅದು ಸಾಲದೆಂಬಂತೆ ತಮಗೆ ತೋಚಿದ ಹಾಗೆ ಇತಿಹಾಸ ...

ಚುನಾವಣೆಯಲ್ಲಿ ಗೆದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂದ ಶಾಸಕ ಯಾರು?

ವಿಧಾನಸಭೆ ಚುನಾವಣೆ ಮುಗಿದು ಸಮ್ಮಿಶ್ರ ಸರಕಾರ ರಚನೆಯಾಗಿ ತಿಂಗಳುಗಳೇ ಕಳೆಯುತ್ತಿವೆ. ಆದರೆ ಇಲ್ಲೊಬ್ಬ ...

ಕಣ್ಣೀರಿಟ್ಟ ಸಿಎಂ; ಹೊರಟ್ಟಿ ಹೇಳಿದ್ದೇನು?

ಸರಕಾರದ ಹೊಂದಾಣಿಕೆಯಲ್ಲಿ ಮುಖ್ಯಮಂತ್ರಿಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೀಗಂತ ಸಭಾಪತಿ ಬಸವರಾಜ ...

ಶಾಸಕ ಹಾಲಾಡಿ ಪರ ಕೋಟ ಶ್ರೀನಿವಾಸ ಪೂಜಾರಿ ಬ್ಯಾಟಿಂಗ್

ಶಾಸಕ ಹಾಲಾಡಿ ಮಾತು ಬೆಂಬಲಿಸಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬ್ಯಾಟಿಂಗ್ ...