ನೈಟ್‌ಕ್ಲಬ್‌ನಲ್ಲಿ ಹಾಟ್ ಮಾಡೆಲ್ ಮೇಲೆ ಲೈಂಗಿಕ ಕಿರುಕುಳ

ರಾಮಕೃಷ್ಣ ಪುರಾಣಿಕ 

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (19:39 IST)

ನೈಟ್‌ಕ್ಲಬ್‌ನಲ್ಲಿ ಸ್ವೀಡಿಷ್ ಮಾಡೆಲ್ ಮೇಲೆ ದಾಳಿ ಮಾಡಲಾಗಿದೆ, ಅವಳು ನಿರಾಕರಿಸಿದಾಗ ಕಾಮುಕನು ಅವಳನ್ನು ಎಳೆದಾಡಿದ್ದಾನೆ. ಈ ಘಟನೆಯು ವಿಕೋಪಕ್ಕೆ ಹೋದಾಗ, ಮಾಡೆಲ್‌ನ ಮುಖವನ್ನು ತೀವ್ರವಾಗಿ ರಕ್ತಸಿಕ್ತಗೊಳಿಸಲಾಗಿತ್ತು ಮತ್ತು ಘಟನೆಯ ಚಿತ್ರಗಳು ವೈರಲ್ ಆಗಿವೆ.
ಶನಿವಾರ ರಾತ್ರಿ ಈ ಘಟನೆಯು ನಡೆದಾಗ 19 ವರ್ಷದ ಸೋಫಿ ಜೋಹಾನ್ಸನ್ ಮಾಲ್ಮೋನಲ್ಲಿರುವ ಬಾಬೆಲ್‌ನಲ್ಲಿದ್ದಳು. ಡ್ಯಾನ್ಸ್ ಫ್ಲೋರ್ ಮೇಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅವಳ ಕೈಚೀಲವನ್ನು ಎಳೆದಿದ್ದಾನೆ ಮತ್ತು ಅವಳು ತಿರುಗಿ ನೋಡಿದಾಗ, ಅವಳ ಅಂಗಾಂಗಳನ್ನು ಮುಟ್ಟುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ. ಅವನು ಮುಂದುವರಿಯುವುದನ್ನು ಅವಳು ನಿರಾಕರಿಸಿದ ಕಾರಣ ಅವಳ ಮುಖದ ಮೇಲೆ ಅವನು ತೀವ್ರವಾಗಿ ಹೊಡೆದಿದ್ದಾನೆ.
 
ಹೆಚ್ಚಿನ ಅಪಾಯವನ್ನು ತಪ್ಪಿಸಲು ಮಿಸ್ ಜೋಹಾನ್ಸನ್ ಮತ್ತು ಅವಳ ಸ್ನೇಹಿತೆ ಕ್ಲಬ್ ತೊರೆಯಲು ನಿರ್ಧರಿಸುತ್ತಾರೆ ಆದರೆ ಅವರು ಅಲ್ಲಿಂದ ಬರುವಾಗ ಆ ವ್ಯಕ್ತಿಯು ಅವಳಿಗೆ ಬಾಟೆಲ್‌ನಿಂದ ತಲೆಗೆ ಹೊಡೆದಿರುವುದಾಗಿ ಹೇಳುತ್ತಾಳೆ. ಈ 19 ವರ್ಷ ವಯಸ್ಸಿನ ಹುಡುಗಿ ಅವಳ ಮುಖವು ಬಾಟಲಿಯಲ್ಲಿದ್ದ ದ್ರವದಿಂದ ಮುಚ್ಚಲಾಗಿತ್ತು ಎಂದು ಭಾವಿಸಿರುತ್ತಾಳೆ ಆದರೆ ಅವಳ ಗೆಳತಿ ಅದು ರಕ್ತ ಎಂಬುದನ್ನು ಖಚಿತಪಡಿಸುತ್ತಾಳೆ. "ನನಗೆ ಆಘಾತವಾಯಿತು" ಎಂದು ಅವಳು ಪತ್ರಿಕೆಗೆ ತಿಳಿಸಿದ್ದಾಳೆ.
 
ತಕ್ಷಣವೇ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಗಾಯಕ್ಕೆ ಹೆಚ್ಚಿನ ಹೊಲಿಗೆಗಳನ್ನು ಹಾಕಲಾಯಿತು. ಸುಮಾರು 25 ವರ್ಷ ವಯಸ್ಸಿನವನಾಗಿದ್ದ, 5-ಅಡಿ 7-ಇಂಚು, ಕಟ್ಟುಮಸ್ತಾದ ದೇಹರಚನೆಯನ್ನು ಹೊಂದಿದ್ದಾನೆ ಎಂದು ಜೋಹಾನ್ಸನ್ ವಿವರಿಸಿದ್ದಾಳೆ, ಅವಳು ವಿವರಿಸಿದ ವ್ಯಕ್ತಿಯನ್ನು ಪೊಲೀಸರು ಹುಡುಕುತಿದ್ದಾರೆ. "ಘಟನೆಯು ಇನ್ನೂ ತೀವ್ರ ವಿಕೋಪಕ್ಕೆ ಹೋಗಲಿಲ್ಲ ಎಂಬುದಕ್ಕೆ ನಾನು ಖುಷಿಯಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ. ಆದರೆ ಆ ವ್ಯಕ್ತಿಯನ್ನು ಇನ್ನೂ ಕಂಡುಹಿಡಿಯದೆ ಇರುವುದಕ್ಕೆ ಸ್ವಲ್ಪಮಟ್ಟಿಗೆ ನನಗೆ ಅಸಮಾಧಾನವಿದೆ" ಎಂದು ಜೋಹಾನ್ಸನ್ ವರದಿಗಾರರಿಗೆ ಹೇಳಿದ್ದಾಳೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಾದಾಯಿ ವಿಚಾರದಲ್ಲಿ ದಂಗೆಯೆದ್ದಾಗ ಯಾರಿಂದಲೂ ತಡೆಯಲು ಆಗಲ್ಲ-ಹೊರಟ್ಟಿ

ಮಹಾದಾಯಿ ಕುಡಿಯುವ ನೀರಿನ ವಿಷಯದಲ್ಲಿ ಎಲ್ಲ ಮುಗಿದುಹೋದ ಮೇಲೆ ಬೆಂಕಿ ನಂದಿಸಿದರೆ ಪ್ರಯೋಜನವೇನು ಎಂದು ...

news

ಆರ್‌ಎಸ್ಎಸ್ ಸೇರದಿದ್ರೆ ನೀವು ಹಿಂದೂವೇ ಅಲ್ಲ ಎಂದ ಬಿಜೆಪಿ ಶಾಸಕ

ನವದೆಹಲಿ: ಆರ್‌ಎಸ್ಎಸ್ ಕೈಗೊಳ್ಳುವ ಪ್ರತಿದಿನದ ಸಭೆಗಳಾದ 'ಶಾಖೆಗಳಿಗೆ' ಹೋಗದವರು ಹಿಂದೂಗಳೇ ಅಲ್ಲ ಎಂದು ...

news

ಕಾನೂನು, ಸುವ್ಯವಸ್ಥೆ ಹದಗೆಟ್ಟ ದಾಖಲೆ ಬಹಿರಂಗಕ್ಕೆ ಸವಾಲು

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಸುಳ್ಳು ಆರೋಪ ಮಾಡುವ ಬಿಜೆಪಿಯವರು ದಾಖಲೆಗಳಿದ್ದರೆ ...

news

ತನ್ನ ಮುಂದೆ ಬೇರೊಬ್ಬಳನ್ನು ಹೊಗಳಿದಕ್ಕೆ "ಅದನ್ನೇ" ಕಚಕ್ ಎನ್ನಿಸಿದ ಪ್ರಿಯತಮೆ

ಕಝಕಿಸ್ತಾನ್ : ತನ್ನ ಪ್ರೇಯಸಿಯ ಎದುರಲ್ಲಿ ಇನ್ನೊಬ್ಬ ಮಹಿಳೆಯನ್ನು ಹೊಗಳಲು ಹೋಗಿ ತನ್ನ ವೃಷಣವನ್ನು ...

Widgets Magazine
Widgets Magazine