ಮಗುವಿನ ಪ್ರಾಣ ರಕ್ಷಿಸಿ ದೇಶದ ಪೌರತ್ವ ಪಡೆದ ಮುಮೌಡ್‌ ಗಸ್ಸಮ್‌

ಪ್ಯಾರಿಸ್, ಮಂಗಳವಾರ, 29 ಮೇ 2018 (17:20 IST)

ಪ್ಯಾರಿಸ್: ಪ್ಯಾರಿಸ್ ನಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವಿನ ಪ್ರಾಣ ರಕ್ಷಿಸಿದ ಪರ ದೇಶದ ನಿರಾಶ್ರಿತ ವ್ಯಕ್ತಿಯೊಬ್ಬ ಈ ಮೂಲಕ ಇದೀಗ ಫ್ರಾನ್ಸ್‌ ದೇಶದ ಪೌರತ್ವವನ್ನು ಪಡೆದಿದ್ದಾನೆ.


ಶನಿವಾರ ರಾತ್ರಿ ಪ್ಯಾರಿಸ್ ನ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಕಂಬಿಯಲ್ಲಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಮಾಲಿ ದೇಶದ ನಿರಾಶ್ರಿತ ಮುಮೌಡ್‌ ಗಸ್ಸಮ್‌ ಎಂಬಾತ ತನ್ನ ಪ್ರಾಣವನ್ನು ಲೆಕ್ಕಿಸದೇ ರಕ್ಷಿಸಿ 'ಫ್ರಾನ್ಸ್‌ನ ಸ್ಪೈಡರ್‌ಮ್ಯಾನ್‌’ ಎನಿಸಿಕೊಂಡಿದ್ದಾನೆ. ಇವನ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.


ಇವನ ಈ ಕಾರ್ಯಕ್ಕೆ ಫ್ರಾನ್ಸ್‌ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿ ಆತನನ್ನು ಅರಮನೆಗೆ ಕರೆಸಿಕೊಂಡು ಶೌರ್ಯಪ್ರಶಸ್ತಿ ಪ್ರಕಟಿಸಿ, ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಮತ್ತು ದೇಶದ ಪೌರತ್ವ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಮ್ಮಿಶ್ರ ಸರ್ಕಾರಕ್ಕೆ ಬಿಗ್ ಶಾಕ್! ಬಿಜೆಪಿ ಸೇರಲು ಸಿದ್ಧರಾಗಿರುವ 11 ಶಾಸಕರು?!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ತಲೆನೋವಿನ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಮತ್ತೊಂದು ...

news

ಪ್ರಧಾನಿ ಮೋದಿ ಕಾರ್ಯಕ್ರಮದ ಬಗ್ಗೆ ತಪ್ಪು ಮಾತನಾಡಿದ್ದಕ್ಕೆ ಕ್ಷಮೆ ಕೋರಿದ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ: ಪ್ರಧಾನಿ ಮೋದಿ ನೇಪಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಗ್ಗೆ ತಪ್ಪಾಗಿ ಟ್ವೀಟ್ ...

news

ನಿನ್ನೆಯಿಡೀ ದೆಹಲಿಯಲ್ಲಿ ಬ್ಯುಸಿಯಾಗಿದ್ದ ಸಿಎಂ ಕುಮಾರಸ್ವಾಮಿ!

ನವದೆಹಲಿ: ರಾಷ್ಟ್ರ ರಾಜಧಾನಿಗೆ ತೆರಳಿ ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ ಮೈಸೂರು ಪೇಟ, ಹಾರ ...

news

ಮೊಹಮ್ಮದ್ ನಲಪಾಡ್ ಪ್ರಕರಣಕ್ಕೆ ಮತ್ತೆ ಜೀವ

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ...

Widgets Magazine