ಪ್ರಧಾನಿ ಮೋದಿ ಮೈತ್ರಿಯೇ ನವಾಜ್ ಷರೀಫ್‌ ಪದಚ್ಯುತಿಗೆ ಕಾರಣ: ಹಫೀಜ್

ಲಾಹೋರ್, ಶುಕ್ರವಾರ, 24 ನವೆಂಬರ್ 2017 (18:34 IST)

ನೆರೆಯ ಶತ್ರುರಾಷ್ಟ್ರವಾದ ಭಾರತದೊಂದಿಗೆ ಮೈತ್ರಿಗೆ ಮುಂದಾಗಿದ್ದರಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಮುಂಬೈ ಉಗ್ರರ ದಾಳಿ ರೂವಾರಿ ಹಫೀಜ್ ಸಯೀದ್ ಹೇಳಿದ್ದಾನೆ.
 
11 ತಿಂಗಳುಗಳ ಕಾಲ ಗೃಹ ಬಂಧನದಲ್ಲಿದ್ದು ಇಂದು ಬೆಳಿಗ್ಗೆ ಗೃಹಬಂಧನದಿಂದ ಬಿಡುಗಡೆಗೊಂಡ ಹಫೀಜ್, ಪ್ರಾರ್ಥನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಬಂಧಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತಿರುಗೇಟು ನೀಡಿದ್ದಾನೆ.
 
ನವಾಜ್ ಷರೀಫ್ ಪ್ರಧಾನಿಯಾಗಿದ್ದಾಗ ಜನವೆರಿಯಿಂದ ಗೃಹಬಂಧನದಲ್ಲಿದ್ದ ಹಫೀಜ್, ಪ್ರಧಾನಿ ಮೋದಿಯೊಂದಿಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಮೈತ್ರಿಗೆ ಮುಂದಾಗಿದ್ದರಿಂದ ಅವರನ್ನು ಪ್ರಧಾನಿ ಸ್ಥಾನದಿಂದ ಕಿತ್ತುಹಾಕಬೇಕಾದ ಅನಿವಾರ್ಯತೆಯಿತ್ತು ಎಂದು ತಿಳಿಸಿದ್ದಾನೆ.
 
ಸಾವಿರಾರು ಮುಸ್ಲಿಮರನ್ನು ಕೊಂದ ಪ್ರಧಾನಿ ಮೋದಿಯೊಂದಿಗೆ ಷರೀಫ್ ಆತ್ಮಿಯ ಗೆಳೆಯರಾಗಲು ಪ್ರಯತ್ನಿಸುತ್ತಿದ್ದರಿಂದ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಬೊಗಳಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿ.ಕೆ.ರವಿ ಸಾವಿನ ಪ್ರಕರಣದ ಮರು ತನಿಖೆಗೆ ಅರ್ಜಿ ಸಲ್ಲಿಸಲು ವರದಿಯಾದರೂ ನೀಡಿ- ತಾಯಿಯ ಅಳಲು

ಡಿ.ಕೆ ರವಿ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖಾ ವರದಿಯ ಪ್ರತಿ ನೀಡಿದರೆ ಮರು ತನಿಖೆ ನಡೆಸುವಂತೆ ಅರ್ಜಿ ...

news

ಅನೈತಿಕ ಸಂಬಂಧ: ಪತ್ನಿಯ ಪ್ರಿಯಕರನನ್ನು ನಗ್ನಗೊಳಿಸಿ ಮರಕ್ಕೆ ಕಟ್ಟಿ ಹತ್ಯೆಗೈದ ಪತಿ

ಯಾದಗಿರಿ: ಆಘಾತಕಾರಿ ಘಟನೆಯೊಂದರಲ್ಲಿ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ...

news

ಅನೆಯೊಂದಿಗೆ ಸೆಲ್ಫಿ ತೆಗೆಯುಲು ಹೋಗಿ ಜೀವತೆತ್ತ ಭೂಪ(ವಿಡಿಯೋ ನೋಡಿ)

ಪಶ್ಚಿಮ ಬಂಗಾಳ: ಸೆಲ್ಫಿ ಮಾಡುವಂತಹ ಅವಾಂತರ ಒಂದಲ್ಲ ಎರಡಲ್ಲ ಸಾವಿರಾರು. ಸೆಲ್ಫಿ ತೆಗೆಯುವಾಗ ...

news

2019ರೊಳಗೆ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

ಉಡುಪಿ: ಮುಂಬರುವ 2019ರೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಪೇಜಾವರ ಶ್ರೀಗಳು ...

Widgets Magazine
Widgets Magazine