ಉದ್ಯಮಿ ನೀರವ್ ಮೋದಿ ವಂಚನೆಗೆ ಕೆನಡಾದ ಯುವಕನ ನಿಶ್ಚಿತಾರ್ಥವೇ ಮುರಿದುಬಿತ್ತು!

ನವದೆಹಲಿ, ಸೋಮವಾರ, 8 ಅಕ್ಟೋಬರ್ 2018 (10:35 IST)

ನವದೆಹಲಿ: ಭಾರತದಲ್ಲಿ ಸಾವಿರಾರು ಕೋಟಿ ರೂ. ಬ್ಯಾಂಕ್ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಂಚನೆಯಿಂದ ಕೆನಡಾದ ವ್ಯಕ್ತಿಯೊಬ್ಬನ ನಿಶ್ಚಿತಾರ್ಥ ಮುರಿದು ಬಿದ್ದಿದೆ.
 
ನೀರವ್ ಮೋದಿ ಕೆನಡಾದ ಯುವಕನೊಬ್ಬನಿಗೆ ಮಾರಾಟ ಮಾಡಿದ್ದ ವಜ್ರದ ಉಂಗುರ ನಕಲಿಯಾಗಿದ್ದು, ಇದರಿಂದಾಗಿ ಆತನ ವಿವಾಹವೇ ಮೊಟಕುಗೊಂಡಿದೆ.
 
2012 ರಲ್ಲಿ ನೀರವ್ ಮೋದಿಯನ್ನು ಭೇಟಿಯಾಗಿದ್ದ ಕೆನಡಾದ ಅಲ್ಫೋನ್ಸೋ ಎಂಬಾತ ಈತನ ಮಾತುಕತೆಯಿಂದ ಇಂಪ್ರೆಸ್ ಆಗಿ ಎರಡು ವಜ್ರದ ಉಂಗುರ ಖರೀದಿಸಿದ್ದನಂತೆ. ಆದರೆ ಈ ಉಂಗುರದ ಜತೆಗೆ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವ ವೇಳೆಗೆ ಇದು ನಕಲಿ ಎಂದು ಗೊತ್ತಾಗಿ ಮದುವೆ ಮುರಿದುಬಿದ್ದಿದೆಯಂತೆ. ಇದೇ ಕಾರಣಕ್ಕೆ ಇದೀಗ ಈತ ಖಿನ್ನತೆಗೊಳಗಾಗಿದ್ದಾನೆ ಎಂದು ವಿದೇಶೀ ಪತ್ರಿಕೆಯೊಂದು ವರದಿ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಕೈ ಕೊಡಲು ಎಂಎಲ್ ಸಿ ರಘು ಆಚಾರ್ ತೀರ್ಮಾನ

ಬೆಂಗಳೂರು: ಪಕ್ಷದ ನಾಯಕರು ಮತ್ತು ಸಿಎಂ ಎಚ್ ಡಿಕೆ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ...

news

ದೆಹಲಿ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪ: ಅಲ್ಪಸಂಖ್ಯಾತ ಆಯೋಗದ ಆಕ್ಷೇಪ

ನವದೆಹಲಿ: ದೆಹಲಿಯ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅಲ್ಪ ಸಂಖ್ಯಾತ ...

news

ಮದುವೆ ಮನೆಯಲ್ಲಿ ಕುಟುಂಬದವರ ಮುಂದೆ ಶೈನ್ ಆಗಲು ಕಾರು ಕದ್ದು ಸಿಕ್ಕಿಬಿದ್ದ ಕಳ್ಳಿ!

ನವದೆಹಲಿ: ಮದುವೆ ಮನೆಯಲ್ಲಿ ತನ್ನ ಕುಟುಂಬದವರ ಎದುರು ಮಿಂಚಬೇಕೆಂದು ಪ್ರಿಯಕರನ ಜತೆ ಸೇರಿ ಕಾರು ದರೋಡೆ ...

news

ಫೋನ್ ನಲ್ಲಿ ಕಿತ್ತಾಡಿದ ಮರುಕ್ಷಣವೇ ಗುಂಡೇಟಿಗೆ ಬಲಿಯಾದ!

ನವದೆಹಲಿ: ಸಹೋದರಿ ಜತೆಗೆ ಫೋನ್ ನಲ್ಲಿ ಕಿತ್ತಾಡಿ ಮನೆಯಿಂದ ಹೊರ ಬಂದ ತಕ್ಷಣ ಯುವಕನೊಬ್ಬ ಗುಂಡೇಟಿಗ ಬಲಿಯಾದ ...

Widgets Magazine