ಯುಎಇ ಬೀಚ್ ಗಳಲ್ಲಿ ಹೊಸ ಕ್ರಮ ಜಾರಿ ; ನಿಯಮ ಉಲ್ಲಂಘಿಸಿದರೆ ದಂಡ

ಫುಜೈರಾ, ಶನಿವಾರ, 23 ಜೂನ್ 2018 (14:59 IST)

 
ಫುಜೈರಾ(ಯುಎಇ) : ಕಿನಾರೆಗೆ ಹೋಗುವ ಸುರಕ್ಷತೆಗಾಗಿ ಫುಜೈರಾ ಪೊಲೀಸರು ಹೊಸ ರೀತಿಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.


ಅದೇನೆಂದರೆ ನೆರಳಿಗಾಗಿ ಸಾಲಾಗಿ ಕೊಡೆಗಳನ್ನು ಅಳವಡಿಸಲಾಗಿರುವ ಯುಎಇ ಸಮುದ್ರ ಕಿನಾರೆಯಲ್ಲಿ ವಾಹನಗಳು ಮತ್ತು ಮೋಟರ್ ಸೈಕಲ್‌ಗಳನ್ನು ಚಲಾಯಿಸಬಾರದು. ಒಂದು ವೇಳೆ  ಈ ನಿಯಮವನ್ನು ಉಲ್ಲಂಘಿಸುವವರಿಗೆ 1,000 ದಿರ್ಹಮ್ (ಸುಮಾರು 18,500 ರೂಪಾಯಿ) ದಂಡ ವಿಧಿಸಲಾಗುವುದು ಹಾಗೂ 8 ಋಣಾತ್ಮಕ ಅಂಕಗಳನ್ನು ನೀಡಲಾಗುವುದು. ಅಂಥವರ ವಾಹನಗಳನ್ನು 7 ದಿನಗಳ ಅವಧಿಗೆ ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಹಾಗೇ ಈ ನಿಯಮವನ್ನು ಜಾರಿಗೊಳಿಸುವುದಕ್ಕಾಗಿ ಪೊಲೀಸ್ ಗಸ್ತು ತಂಡಗಳನ್ನು ಕಳುಹಿಸಲಾಗುವುದು ಎಂಬುದಾಗಿ ಪೊಲೀಸರು ತಮ್ಮ 'ಇನ್‌ಸ್ಟಾಗ್ರಾಂ' ಖಾತೆಯಲ್ಲಿ ಹಾಕಿದ ಸಂದೇಶದ ಮೂಲಕ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ಚಲಮೇಶ್ವರ್ ರಾಜಕೀಯ ಪ್ರವೇಶಿಸುತ್ತಾರಾ?

ನವದೆಹಲಿ : ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಚಲಮೇಶ್ವರ್ ಅವರು ಶುಕ್ರವಾರ (ಜೂನ್ 22) ರಂದು ತಮ್ಮ ...

news

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ಕರ್ನಾಟಕ ಹೊತ್ತಿ ಉರಿಯುತ್ತೆ: ಕೆಜಿ ಬೋಪಯ್ಯ

ಬೆಂಗಳೂರು: ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಮತ್ತೆ ರಾಜಕೀಯ ಕೆಸರೆರಚಾಟಕ್ಕೆ ...

news

ಜುಲೈ 5 ಕ್ಕೆ ರಾಜ್ಯ ಬಜೆಟ್: ಸಿಎಂ ಎಚ್ ಡಿಕೆ ತಯಾರಿ ಶುರು!

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಸಿಎಂ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಜುಲೈ 5 ...

news

ಹಜ್ ಭವನಕ್ಕೆ ಟಿಪ್ಪು ಹೆಸರು ಬೇಡ, ‘ಉಮ್ಮಾ’ ಎಂದು ನಾಮಕರಣ ಮಾಡಿ!

ಬೆಂಗಳೂರು: ಮತ್ತೆ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಫೈಟ್ ...

Widgets Magazine
Widgets Magazine