ಕರುಳ ಕುಡಿಯ ಬರುವಿಕೆಗಾಗಿ ಕಾಯುತ್ತಿರುವ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ

ವೆಲ್ಲಿಂಗ್ಟನ್, ಶನಿವಾರ, 20 ಜನವರಿ 2018 (12:08 IST)

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ ಆರ್ಡರ್ನ್ (37) ತಮ್ಮ ಚೊಚ್ಚಲ ಮಗುವಿನ ಪ್ರತೀಕ್ಷೆಯಲ್ಲಿದ್ದಾರೆ. ಇನ್ನೂ ಒಂದು ವಿಶೇಷ ಸಂಗತಿ ಏನೆಂದರೆ, ಜೆಸಿಂಡ ಆರ್ಡರ್ನ್  ಅವರು ಅಧಿಕಾರದಲ್ಲಿದ್ದಾಗ ಮಗುವಿಗೆ ಜನ್ಮ ನೀಡಿದ ದೇಶದ ಮೊದಲ ಪ್ರಧಾನಿ ಎನ್ನುವ ಗೌರವಕ್ಕೂ ಪಾತ್ರರಾಗಲಿದ್ದಾರೆ.


ಪತಿ ಕ್ಲಾರ್ಕ್ ಗೇಫೋರ್ಡ್ ಜೊತೆಗೂಡಿ ಈ ಖುಷಿಯ ವಿಷಯವನ್ನು ಹಂಚಿಕೊಂಡಿರುವ ಜೆಸಿಂಡ ಅವರು ಜೂನ್ ವೇಳೆಗೆ ನಮ್ಮ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ತಿಳಿಸಿದ್ದಾರೆ. ‘ಮಗುವಿನ ಜನನದ ನಂತರ ಆರು ವಾರ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೇನೆ. ಈ ಸಂದರ್ಭದಲ್ಲಿ  ಉಪ ಪ್ರಧಾನಿ ವಿನ್ಸ್ಟನ್ ಪೀಟರ್ಸ್ ಪ್ರಧಾನಿ ಹುದ್ದೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ.


ಮಗು ಹೊಂದುವ ಉದ್ದೇಶವಿದೆಯೇ ಎಂದು ಚುನಾವಣಾ ಪ್ರಚಾರ ವೇಳೆ ಜೆಸಿಂಡಾ ಅವರಿಗೆ ಕೇಳಿದ್ದ ಪ್ರಶ್ನೆಗೆ, ಗರ್ಭ ಧಾರಣೆ ಮಹಿಳೆಯ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಉತ್ತರಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಮಗು ಪ್ರತೀಕ್ಷೆ ಕ್ಲಾರ್ಕ್ ಖುಷಿಯ ವಿಷಯ ಸುದ್ದಿಗಳು ಅಂತರರಾಷ್ಟ್ರೀಯ Newzeland Jesinda Baby Waiting Clark News International Prime Minister Good News

ಸುದ್ದಿಗಳು

news

ಮೋದಿಯ 'ಅಪ್ಪುಗೆ'ಗೆ ಕಾಂಗ್ರೆಸ್ ನವರ ಲೇವಡಿ; ಪ್ರಧಾನಿ ಕೊಟ್ಟ ತಿರುಗೇಟು ಏನು ಗೊತ್ತಾ...?

ನವದೆಹಲಿ: ನಾನೊಬ್ಬ ಸಾಮಾನ್ಯ ಮನುಷ್ಯ, ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ...

news

ಪಾಕ್ ನ ಗುಂಡಿನ ದಾಳಿಗೆ ಯೋಧ ಹಾಗೂ ಇಬ್ಬರು ನಾಗರಿಕರ ಸಾವು

ಜಮ್ಮು: ಸಾಂಬಾ ವಲಯದಲ್ಲಿ ಶುಕ್ರವಾರ ಪಾಕಿಸ್ತಾನದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ...

news

ಕಮಲ್ ಹಾಸನ್ ಜತೆ ಮೈತ್ರಿ ಮಾಡ್ತಾರಾ ರಜನಿಕಾಂತ್? ಸೂಪರ್ ಸ್ಟಾರ್ ಹೇಳಿದ್ದೇನು?

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ರಜನೀಕಾಂತ್ ಮತ್ತು ಕಮಲ್ ಹಾಸನ್ ಪ್ರತ್ಯೇಕ ...

news

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕೊಟ್ಟ ಮೂರು ಐಡಿಯಾ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ತಾವು ಪ್ರತೀ ತಿಂಗಳ ಅಂತ್ಯಕ್ಕೆ ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾವ ...

Widgets Magazine
Widgets Magazine