Widgets Magazine

ಪಾಕಿಸ್ತಾನ- ಚೀನಾ ನಡುವೆ ನೇರ ರೈಲು ಸಂಪರ್ಕ ಆರಂಭ

ಬೀಜಿಂಗ್/ಕರಾಚಿ, ಗುರುವಾರ, 1 ಡಿಸೆಂಬರ್ 2016 (19:34 IST)

Widgets Magazine

ಚೀನಾ ಮತ್ತು ಪಾಕಿಸ್ತಾನದ ನಡುವೆ ನೇರ ಆರಂಭವಾಗಿದ್ದು, ಇಂದು ಚೀನಾದ ಯುನಾನ್ ಪ್ರಾಂತ್ಯದಿಂದ ಹೊರಟ ರೈಲು ಕರಾಚಿಯನ್ನು ತಲುಪಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
 
ಚೀನಾದ ಆಗ್ನೇಯ ಭಾಗದಲ್ಲಿರುವ ಯುನಾನ್ ಪ್ರಾಂತ್ಯದ ಕುನ್ಮಿಂಗ್ ನಗರದಿಂದ 500 ಟನ್ ಸರಕು ಹೊತ್ತ ರೈಲು, ಪಾಕಿಸ್ತಾನದ ಕರಾಚಿಯನ್ನು ನಿಗದಿತ ಅವಧಿಯಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ. 
 
ಚೀನಾ ಮತ್ತು ಪಾಕಿಸ್ತಾನದ ನಡುವೆ ಕುನ್ಮಿಂಗ್-ಕರಾಚಿ ನೇರ ರೈಲು ಸಂಪರ್ಕ ಆರಂಭದಿಂದಾಗಿ ಶೇ.50 ರಷ್ಟು ಸಾಗಾಣೆ ವೆಚ್ಚ ಕಡಿತವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
46 ಬಿಲಿಯನ್ ಡಾಲರ್ ವೆಚ್ಚದ ಚೀನಾ-ಎಕಾನಾಮಿಕ್ ಕಾರಿಡಾರ್ ಪ್ರೊಜೆಕ್ಟ್‌ನ ಒಂದು ಭಾಗವೇ ಕುನ್ಮಿಂಗ್-ಕರಾಚಿ ನಡುವಿನ ರೈಲು ಸಂಪರ್ಕವಾಗಿದೆ ಎಂದು ಚೀನಾ ಪತ್ರಿಕೆ ವರದಿ ಮಾಡಿದೆ. 
 
ಉಭಯ ದೇಶಗಳ ನಡುವೆ ವಾಣಿಜ್ಯ ವಹಿವಾಟು ಆರಂಭವಾಗಿದ್ದು, ಚೀನಾ ಪಾಕಿಸ್ತಾನದ ಮೂಲಕ ಯುರೋಪ್ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ಸರಕು ಸಾಗಣೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಎಚ್.ಸಿ.ಮಹಾದೇವಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ: ಕೋಟಿ ಕೋಟಿ ಹೊಸ ನೋಟುಗಳ ಪತ್ತೆ

ಬೆಂಗಳೂರು: ಬೆಂಗಳೂರಿನ ಸಂಜಯ ನಗರದಲ್ಲಿರುವ ಸಚಿವ ಎಚ್.ಸಿ.ಮಹಾದೇವಪ್ಪ ಆಪ್ತ ಅಧಿಕಾರಿ ನಿವಾಸದ ಮೇಲೆ ಐಟಿ ...

news

ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಆಸ್ಪತ್ರೆಗೆ ದಾಖಲು

ಚೆನ್ನೈ: ಡಿಎಂಕೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ...

news

ಅಗ್ನಿ ಅವಗಢ: 20ಕ್ಕೂ ಹೆಚ್ಚು ಜನರ ಸಾವು, ಹಲವರಿಗೆ ಗಾಯ

ತಿರುಚಿರಾಪಳ್ಳಿ: ನಗರದಿಂದ 40 ಕಿ.ಮೀ ದೂರದಲ್ಲಿರುವ ಮುರುಗಾಪಟ್ಟಿಯಲ್ಲಿರುವ ಸ್ಫೋಟಕ ತಯಾರಿಕೆ ಘಟಕದಲ್ಲಿ ...

news

ಫೇಸ್‌ಬುಕ್‌ನಲ್ಲಿ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದವನಿಗೆ ಬಿತ್ತು ಗೂಸಾ

ದಾವಣಗೆರೆ: ಫೇಸ್‌ಬುಕ್‌ನಲ್ಲಿ ಅಶ್ಲೀಲ ಮ್ಯಾಸೇಜ್‌ ಕಳುಹಿಸುತ್ತಿದ್ದವನಿಗೆ ಇಂದು ಮಹಿಳಾ ಸಂಘಟನೆಯ ...

Widgets Magazine Widgets Magazine