ಸರ್ಜಿಕಲ್ ಸ್ಟ್ರೈಕ್ ಮಾಡಿದ್ರೆ ತಕ್ಕ ಶಾಸ್ತಿ: ಭಾರತಕ್ಕೆ ಪಾಕ್ ಎಚ್ಚರಿಕೆ

ವಾಷಿಂಗ್ಟನ್, ಶುಕ್ರವಾರ, 6 ಅಕ್ಟೋಬರ್ 2017 (19:07 IST)

Widgets Magazine

ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸುವುದಾಗಲಿ ಅಥವಾ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಲ್ಲಿ ಇಸ್ಲಾಮಾಬಾದ್‌ನಿಂದ ಸಂಯಮವನ್ನು ನಿರೀಕ್ಷಿಸಬಾರದು. ದಾಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ರಾಯಭಾರಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 
ಭಾರತದ ವಾಯು ಮುಖ್ಯಸ್ಥ ಮಾರ್ಷಲ್ ಬಿ. ಧನೊವಾ ಸಂಪೂರ್ಣ ಸ್ಪೆಕ್ಟ್ರಂ ಕಾರ್ಯಾಚರಣೆಗೆ ಸಿದ್ಧವಾಗಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್, ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕಲು ಬಯಸುತ್ತದೆ ಎಂದು ತಿಳಿಸಿದ್ದಾರೆ.
 
ಒಂದು ವೇಳೆ, ಪಾಕಿಸ್ತಾನ ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸುವುದಾಗಲಿ ಅಥವಾ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಲ್ಲಿ ಇಸ್ಲಾಮಾಬಾದ್‌ನಿಂದ ಸಂಯಮವನ್ನು ನಿರೀಕ್ಷಿಸಬಾರದು ಎಂದು ಎಚ್ಚರಿಸಿದ್ದಾರೆ.
 
ವಾಷಿಂಗ್ಟನ್ ಮೂಲದ ಚಿಂತಕರ ತಂಡವಾದ ಯು.ಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್‌ ಸಭೆಯಲ್ಲಿ ಮಾತನಾಡಿದ ಆಸಿಫ್, ಪ್ರಸ್ತುತ ಭಾರತದೊಂದಿಗಿನ ಸಂಬಂಧವು ಅತ್ಯಂತ ಕ್ಷೀಣ ಮಟ್ಟದಲ್ಲಿದೆ" ಎಂದು ಹೇಳಿದರು.
 
ಸಂಬಂಧವನ್ನು ಸುಧಾರಿಸಲು ಮಾಡಿದ ಪಾಕಿಸ್ತಾನದ ಪ್ರಯತ್ನಗಳಿಗೆ ಭಾರತ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
 
ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಉಭಯ ದೇಶಗಳ ಮಾತುಕತೆಗೆ ಪ್ರಮುಖ ಅಡ್ಡಿಯಾಗಿವೆ ಎಂದು ಪಾಕಿಸ್ತಾನದ ವಿದೇಶಾಂಗ ಖಾತೆ ಸಚಿವ ಖ್ವಾಜಾ ಆಸೀಫ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪಾಕಿಸ್ತಾನ ಸರ್ಜಿಕಲ್ ಸ್ಟ್ರೈಕ್ ಇಸ್ಲಾಮಾಬಾದ್ ಪರಮಾಣ ಸ್ಥಾವರ ಖ್ವಾಜಾ ಆಸೀಫ್ ಭಾರತ Pakistan Islamabad India Nuclear Installation Khawaja Asif Surgical Strike

Widgets Magazine

ಸುದ್ದಿಗಳು

news

ಸಚಿವ ಯು.ಟಿ.ಖಾದರ್ ಕಾರಿನ ಮೇಲೆ ಕಲ್ಲು ತೂರಾಟಕ್ಕೆ ಯತ್ನ

ಮಂಗಳೂರು: ಕಳೆದ ಮಂಗಳವಾರದಂದು ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ಜುಬೈರ್ ನಿವಾಸಕ್ಕೆ ಭೇಟಿ ನೀಡಲು ...

news

ಪಕ್ಷ ಬಿಡದಂತೆ ಮಾಜಿ ಸಚಿವ ವಿಜಯ್ ಶಂಕರ್‌ಗೆ ಬಿಜೆಪಿ ಮುಖಂಡರ ಮನವಿ

ಮೈಸೂರು: ಬಿಜೆಪಿ ವರಿಷ್ಠರ ನಡೆಗೆ ಅಸಮಾಧಾನಗೊಂಡು ಬಿಜೆಪಿ ಪಕ್ಷವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ...

news

ಮತದಾರರ ಓಲೈಕೆಗೆ ಬಿಜೆಪಿಯಿಂದ ಸೀರೆ ಹಂಚಿಕೆ ಶುರು

ಹಾಸನ: ಬಿಜೆಪಿ ಮಹಿಳಾ ಮೋರ್ಚಾ ಬಾಗಿನದ ನೆಪದಲ್ಲಿ ಮತದಾರರನ್ನು ಸೆಳೆಯಲು ಮಹಿಳಾ ಮತದಾರರಿಗೆ ಸೀರೆ ಹಂಚಿಕೆ ...

news

ಪ್ರಧಾನಿ ಮೋದಿ ಧುರ್ಯೋದನರಂತೆ, ಜೇಟ್ಲಿ ದುಶ್ಯಾಸನ: ಯಶ್ವಂತ್ ಸಿನ್ಹಾ ಪರೋಕ್ಷ ವಾಗ್ದಾಳಿ

ನವದೆಹಲಿ: ಬಿಜೆಪಿ ನಾಯಕತ್ವದಲ್ಲಿ ಪ್ರಧಾನಿ ಮೋದಿ ಧುರ್ಯೋದನನಂತಾಗಿದ್ದರೆ ವಿತ್ತಸಚಿವ ಅರುಣ್ ಜೇಟ್ಲಿ ...

Widgets Magazine