Widgets Magazine
Widgets Magazine

ಭಾರತ ಉಗ್ರನನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದೆ: ಪಾಕ್ ವಿದೇಶಾಂಗ ಸಚಿವ

ಕರಾಚಿ, ಮಂಗಳವಾರ, 3 ಅಕ್ಟೋಬರ್ 2017 (15:58 IST)

Widgets Magazine

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ರಾಜತಾಂತ್ರಿಕರ ನಡುವೆ ವಿಶ್ವಸಂಸ್ಥೆಯಲ್ಲಿ ಎದುರಾದ ಹಣಾಹಣಿಯ ಕೆಲ ದಿನಗಳ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್, ಭಾರತದ ಜನತೆ ಉಗ್ರನನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ. ಯಾಕೆಂದರೆ ಭಾರತವನ್ನು ಉಗ್ರನೊಬ್ಬ ಆಳುತ್ತಿದ್ದಾನೆ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
 
ಆರೆಸ್ಸೆಸ್ ಭಯೋತ್ಪಾದಕ ಸಂಘಟನೆಯಾಗಿದ್ದು ದೇಶವನ್ನೇ ಆಳುತ್ತಿದೆ. ಬಿಜೆಪಿ, ಆರೆಸ್ಸೆಸ್ ಸಂಘಟನೆಯ ಕೇವಲ ಒಂದು ಭಾಗವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಉಗ್ರನನ್ನೇ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡುವಂತಹ ದೇಶದ ಬಗ್ಗೆ ನಾನು ಏನೂ ಹೇಳಲಿ? ಗೋರಕ್ಷಣೆಯ ನೆಪದಲ್ಲಿ ಮುಸ್ಲಿಮರು ದಲಿತರನ್ನು ಹತ್ಯೆ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.
 
ವಿಶ್ವಸಂಸ್ಥೆಯಲ್ಲಿ ಭಾರತದ ರಾಜತಾಂತ್ರಿಕ ಇನಮ್ ಗಂಭೀರ್ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಕೆಲ ದಿನಗಳ ನಂತರ ಆಸೀಫ್ ಹೇಳಿಕೆ ಹೊರಬಿದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರವಾಸಿ ತಾಣದ ಪಟ್ಟಿಯಿಂದ ತಾಜ್‌ಮಹಲ್‌ಗೆ ಕೊಕ್: ಸಿಎಂ ಯೋಗಿ ವಿರುದ್ಧ ರಾಹುಲ್ ವಾಗ್ದಾಳಿ

ಲಕ್ನೋ: ಶದ ಮಹತ್ವದ ಸ್ಮಾರಕವಾದ ತಾಜ್ ಮಹಲ್‌ನ್ನು ಪ್ರವಾಸೋದ್ಯಮ ಯೋಜನೆಗಳ ಪಟ್ಟಿಯಲ್ಲಿ ಸ್ಥಾನ ನೀಡದಿರುವ ...

news

ಸಿಗರೇಟು ಸೇದಬೇಡಿ ಎಂದಿದ್ದಕ್ಕೆ ಯುವಕನನ್ನು ಹತ್ಯೆಗೈದ ದುರುಳರು

ಬೆಂಗಳೂರು: ಮನೆಯ ಬಳಿ ಗಲಾಟೆ ಮಾಡುತ್ತಾ ಸಿಗರೇಟು ಸೇದುತ್ತಿರುವುದಕ್ಕೆ ಸಿಗರೇಟು ಸೇದಬೇಡಿ ಎಂದು ...

news

ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರ ದುರ್ಮರಣ

ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರು ರೈಲಿಗೆ ಸಿಲುಕಿ ಭೀಕರವಾಗಿ ...

news

ರಸ್ತೆ ಗುಂಡಿಯಿಂದಲೇ ಅಪಘಾತವಾಗಿದೆ ಅಂತ ಹೇಳಕ್ಕಾಗಲ್ಲ ಅಂದ್ರು ಸಚಿವ ಕೆಜೆ ಜಾರ್ಜ್

ಬೆಂಗಳೂರು: ಮೈಸೂರು ರಸ್ತೆಯಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಸಾವಿಗೀಡಾದ ದಂಪತಿ ...

Widgets Magazine Widgets Magazine Widgets Magazine