ಪರ್ವೇಝ್ ಮುಶರ್ರಫ್‌ ವಿರುದ್ಧ ಹೊಸ ಆದೇಶವೊಂದನ್ನು ಹೊರಡಿಸಿದ ಪಾಕಿಸ್ತಾನ ಸರಕಾರ

ಪಾಕಿಸ್ತಾನ, ಶುಕ್ರವಾರ, 1 ಜೂನ್ 2018 (07:10 IST)

: ತನ್ನ ವಿರುದ್ಧದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಇದೀಗ  ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್‌ ಅವರ ರಾಷ್ಟ್ರೀಯ ಗುರುತು ಕಾರ್ಡ್ (ಎನ್‌ಐಸಿ) ಮತ್ತು ಪಾಸ್‌ಪೋರ್ಟ್ ರದ್ದುಮಾಡುವಂತೆ  ಪಾಕಿಸ್ತಾನ ಆಂತರಿಕ ಸಚಿವಾಲಯಕ್ಕೆ ಆದೇಶಿಸಿದೆ.


ಈ ಮೂಲಕ ದುಬೈಯಲ್ಲಿ ನೆಲೆಸಿರುವ ಮಾಜಿ ಸೇನಾ ಮುಖ್ಯಸ್ಥನ ಪ್ರಯಾಣವನ್ನು ನಿರ್ಬಂಧಿಸಲು ಮತ್ತು ಅವರಿಗೆ ಲಭಿಸುತ್ತಿರುವ ಇತರ ಹಲವು ಸವಲತ್ತುಗಳನ್ನು ತಡೆಹಿಡಿಯಲು ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಶನಲ್ ಡಾಟಾ ಬೇಸ್ ಆಯಂಡ್ ರಿಜಿಸ್ಟ್ರೇಶನ್ ಅಥಾರಿಟಿ ಹಾಗೂ ವಲಸೆ ಮತ್ತು ಪಾಸ್‌ಪೋರ್ಟ್ ನಿರ್ದೇಶನಾಲಯಕ್ಕೆ ಸೂಚನೆಗಳನ್ನು ನೀಡಿದೆ ಎನ್ನಲಾಗಿದೆ.


ಇದರಿಂದ ಮುಶರ್ರಫ್‌ ಅವರಿಗೆ  ವಿದೇಶ ಪ್ರಯಾಣ ಮಾಡಲು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಪಾಕಿಸ್ತಾನ ಮತ್ತು ವಿದೇಶಗಳಲ್ಲಿರುವ ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಕೂಡ ಅವರಿಗೆ ಸಾಧ್ಯವಾಗುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಕೆ ಶಿವಕುಮಾರ್ ಗೆ ಭಾರೀ ಆಫರ್ ನೀಡಿದ್ದರಂತೆ ಅಮಿತ್ ಶಾ!

ಬೆಂಗಳೂರು: ಗುಜರಾತ್ ಶಾಸಕರನ್ನು ರಾಜ್ಯದಲ್ಲಿ ರೆಸಾರ್ಟ್ ನಲ್ಲಿ ಇರಿಸಿದ್ದಾಗ ಕಾಂಗ್ರೆಸ್ ಶಾಸಕ, ಮಾಜಿ ...

news

ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ: ಸಿದ್ದರಾಮಯ್ಯ, ಎಚ್ ಡಿಕೆ ಹೇಳಿದ್ದೇನು?

ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ಮೇಲೆ ಸಿಬಿಐ ಸರ್ಚ್ ವಾರಂಟ್ ...

news

ಆರ್ ಆರ್ ನಗರ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ: ಮುನಿರತ್ನಗೆ ಭರ್ಜರಿ ಜಯ

ಬೆಂಗಳೂರು: ಆರ್ ಆರ್ ನಗರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸ್ಪಷ್ಟ ...

news

ಆರ್.ಆರ್. ನಗರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದಕ್ಕೆ ಬಿ.ಎಸ್.ವೈ ಪ್ರತಿಕ್ರಿಯೆ ಹೀಗಿದೆ

ಬೆಂಗಳೂರು : ಇಂದು ಆರ್.ಆರ್. ನಗರದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು. ಇದರಲ್ಲಿ ಕಾಂಗ್ರೆಸ್ ಶಾಸಕ ...

Widgets Magazine