ಹೌದು ನಾವು ಭಯೋತ್ಪಾದಕರನ್ನ ರಕ್ಷಿಸುತ್ತಿದ್ದೇವೆ: ಪಾಕಿಸ್ತಾನದ ಗುಪ್ತಚರ ಅಧಿಕಾರಿ ಹೇಳಿಕೆ

ಇಸ್ಲಾಮಾಬಾದ್, ಮಂಗಳವಾರ, 26 ಸೆಪ್ಟಂಬರ್ 2017 (16:05 IST)

Widgets Magazine

ಭಯೋತ್ಪಾದಕರನ್ನ ಹುಟ್ಟು ಹಾಕುತ್ತಿದೆ ಮತ್ತು ಅವರನ್ನ ಪೋಷಿಸುತ್ತಿದೆ ಎಂದು ಭಾರತ ಹೇಳುತ್ತಲೇ ಬಂದಿದ್ದರೂ ಕಪಟಿ ಪಾಕಿಸ್ತಾನ ಮಾತ್ರ ನಿರಾಕರಿಸುತ್ತಲೇ ಇತ್ತು. ಆದರೆ, ಇದೀಗ, ಪಾಕಿಸ್ತಾನವು ಉಗ್ರರನ್ನ ಪೋಷಿಸುತ್ತಿರುವುದಕ್ಕೆ ಬಹುದೊಡ್ಡ ಸಾಕ್ಷಿ ಸಿಕ್ಕಿದೆ.
 


ಹೌದು, ಸ್ವತಃ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬ ಭಯೋತ್ಪಾದಕರನ್ನ  ರಕ್ಷಿಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲ, ಇಸ್ಲಾಮಾಬಾದ್ ಹೈಕೋರ್ಟ್`ಗೆ ದೂರು ನೀಡಿದ್ದಾನೆ. ಪಾಕಿಸ್ತಾನದ ಇಂಟೆಲಿಜೆನ್ಸ್ ಬ್ಯೂರೋದ ಸಬ್ ಇನ್ಸ್`ಪೆಕ್ಟರ್ ಮಲಿಕ್ ಮುಖ್ತಾರ್ ಅಹಮ್ಮದ್ ಶಹಜಾದ್ ದೂರು ನೀಡಿದ್ದು, ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳು ಶಂಕಿತ ಭಯೋತ್ಪಾದಕರ ಮೇಲೆ ಕ್ರಮ ಜರುಗಿಸಲಿಲ್ಲ ಎಂದು ಆರೋಪಿಸಿದ್ದಾನೆ.
 
ದೇಶದ ಹಲವು ಭಯೋತ್ಪಾದಕ ಸಂಘಟನೆಗಳ ಬಗ್ಗೆ ನಾನು ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಸೂಕ್ತ ಸಾಕ್ಷ್ಯಾಧಾರಗಳನ್ನೂ ನೀಡಿದರೂ ಹಿರಿಯ ಅಧಿಕಾರಿಗಳು ನಿರ್ಲಕ್ಷವಹಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಈ ವಿಷಯವನ್ನ ಗುಪ್ತಚರ ಡಿಜಿ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿ ಆರೋಪಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತೆಲಂಗಾಣ ಎಸ್ಪಿ ಮಗ ಆತ್ಮಹತ್ಯೆಗೆ ಶರಣು

ಹೈದರಾಬಾದ್: ತೆಲಂಗಾಣ ಪೊಲೀಸ್ ಅಕಾಡೆಮಿ ಡೆಪ್ಯುಟಿ ಡೈರೆಕ್ಟರ್ ಎಸ್ಪಿ ರತ್ನಕುಮಾರಿ ಮಗ ಆತ್ಮಹತ್ಯೆಗೆ ...

news

ಉಗ್ರರನ್ನು ಎರಡುವರೆ ಅಡಿ ಆಳದಲ್ಲಿ ಹೂತು ಹಾಕ್ತೇವೆ: ಸೇನಾ ಮುಖ್ಯಸ್ಥ

ನವದೆಹಲಿ: ನೆರೆಯ ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲು ದೇಶದ ಗಡಿಗಳಲ್ಲಿ ...

news

ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದ: ಕಮಲ್ ಹಾಸನ್ ಘೋಷಣೆ

ಚೆನ್ನೈ: ಒಂದು ವೇಳೆ ಅಗತ್ಯವಾದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದ ಎಂದು ತಮಿಳು ಚಿತ್ರರಂಗದ ಮೆಗಾ ...

news

ಶ್ರೀರಾಮ ದೇವರಲ್ಲ, ರಾಮಮಂದಿರ ಕಟ್ಟುವ ಮುನ್ನ ಯೋಚಿಸಿ: ಭಗವಾನ್

ಬೆಂಗಳೂರು: ವಾಲ್ಮಿಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ವಾಲ್ಮಿಕಿ ರಾಮಾಯಾಣದಲ್ಲಿ ಎಲ್ಲಿಯೂ ...

Widgets Magazine