Widgets Magazine

ಪ್ರೇಮ ವಿವಾಹಕ್ಕೆ ಬೆಂಬಲ: ಪತ್ರಕರ್ತನ ಹತ್ಯೆ

ಇಸ್ಲಾಮಾಬಾದ್| Jaya| Last Updated: ಗುರುವಾರ, 12 ಮೇ 2016 (19:32 IST)
ಪ್ರೇಮ ವಿವಾಹಕ್ಕೆ ನೀಡಿದನೆಂಬ ಕಾರಣಕ್ಕೆ ಪತ್ರಕರ್ತನನ್ನು ಹತ್ಯೆಗೈದ ಖಂಡನೀಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು ಮೃತನನ್ನು 30 ವರ್ಷದ ಅಜ್ಮಲ್ ಜೋಯಿಯಾ ಎಂದು ಗುರುತಿಸಲಾಗಿದೆ.

ಅಜ್ಮಲ್ ಪ್ರೇಮಿಗಳಿಬ್ಬರು ಮದುವೆಯಾಗಲು ಸಹಾಯ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಹುಡುಗಿಯ ಕಡೆಯವರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಕೆಲಸ ಮುಗಿಸಿ ತನ್ನ ಸಂಬಂಧಿಕನ ಜತೆ ಮೋಟಾರ್ ಬೈಕ್‌ನಲ್ಲಿ ಮನಗೆ ಮರಳುತ್ತಿದ್ದ ಅಜ್ಮಲ್ ಮೇಲೆ ಮೂವರು ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಅಜ್ಮಲ್ ಸಂಬಂಧಿ ಗಾಯಗೊಂಡಿದ್ದಾನೆ.

ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ.


ತನ್ನ ಸೇಹಿತೆಯೊಬ್ಬಳ ಪ್ರೇಮ ವಿವಾಹಕ್ಕೆ ಸಹಾಯ ಮಾಡಿದಳೆಂದು ಕಳೆದ ತಿಂಗಳು
ಅಬ್ಬೊಟಾಬಾದ್‌ನಲ್ಲಿ ಯುವತಿಯೋರ್ವಳನ್ನು ಕೊಂದು ಆಕೆಯ ದೇಹವನ್ನು ಸುಟ್ಟು ಹಾಕಲಾಗಿತ್ತು.ಇದರಲ್ಲಿ ಇನ್ನಷ್ಟು ಓದಿ :