Widgets Magazine

ಅಭಿನಂದನ್ ಫೋಟೋದೊಂದಿಗೆ ಪಾಕಿಸ್ತಾನ್ ಚಾಯ್‌ವಾಲಾ ... ವ್ಯಾಪಾರ ಬೊಂಬಾಟಾಗಿದೆ!

ಬೆಂಗಳೂರು| Rajesh patil| Last Modified ಗುರುವಾರ, 14 ಮಾರ್ಚ್ 2019 (15:30 IST)
ಪಾಕಿಸ್ತಾನ್ ಸೆರೆಯಿಂದ ಬಿಡುಗಡೆಯಾದ ಐಎಎಫ್ ಪೈಲಟ್ ಅಭಿನಂದನ್ ಈಗ ಇಡೀ ದೇಶಕ್ಕೆ ಸೆಲೆಬ್ರಿಟಿಯಾಗಿದ್ದಾರೆ. ಅಲ್ಲಿ ಚಾಯ್ (ಟೀ) ಕುಡಿದು ಮಾತನಾಡಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸಂಗತಿ ನಿಮಗೆ ತಿಳಿದಿದೆ. 
ಈ ಹಿನ್ನೆಲೆಯಲ್ಲಿ ಕರಾಚಿಗೆ ಸಂಬಂಧಿಸಿದ ಒಬ್ಬ ಚಾಯ್‌ವಾಲದವನು ಅಭಿನಂದನ್ ಚಾಯ್ ಕುಡಿಯುತ್ತಿರುವ ಫೋಟೋವನ್ನು ಬ್ಯಾನರ್ ಮಾಡಿಸಿ ತನ್ನ ಚಾಯ್ ಗಾಡಿಗೆ ಹಾಕಿಕೊಂಡು ಕಸ್ಟಮರ್‌ಗಳನ್ನು ಆಕರ್ಷಿಸುತ್ತಿದ್ದಾನೆ.
 
ಈ ಬ್ಯಾನರ್‌ನಲ್ಲಿ ಅಭಿನಂದನ್ ಫೋಟೋದೊಂದಿಗೆ ‘ಐಸಿ ಚಾಯ್ ಕಿ ದುಷ್ಮನ್ ಕೋ ಬಿ ದೋಸ್ತ್ ಬನಾಯೆ’ (ಈ ಚಾಯ್ ಶತ್ರುವನ್ನು ಕೂಡಾ ಮಿತ್ರನನ್ನಾಗಿ ಬದಲಾಯಿಸುತ್ತದೆ) ಎಂದು ಉರ್ದುವಿನಲ್ಲಿ ಬರೆದಿದೆ. 
 
ಇದರೊಂದಿಗೆ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜೊತೆಗೆ ಆ ಚಾಯ್‌ವಾಲನ ಬುದ್ದಿವಂತಿಕೆಗೂ ಜನರು ಅಷ್ಟೇ ಫಿದಾ ಆಗಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :