ಪತಿಯ ಗುಂಡೇಟಿಗೆ ಬಲಿಯಾದ ಪಾಕಿಸ್ತಾನದ ಖ್ಯಾತ ಗಾಯಕಿ ರೇಷ್ಮಾ

ಇಸ್ಲಾಮಾಬಾದ್, ಶುಕ್ರವಾರ, 10 ಆಗಸ್ಟ್ 2018 (14:42 IST)

ಇಸ್ಲಾಮಾಬಾದ್ : ಕೌಟುಂಬಿಕ ಕಲಹದ  ಹಿನ್ನೆಲೆಯಲ್ಲಿ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ಅವರ ಪತಿಯೇ  ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನೌಶೇರಾ ಕಲಾನ್‌ ಪ್ರದೇಶದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.


ಆರೋಪಿಯ ನಾಲ್ಕನೇ ಪತ್ನಿಯಾಗಿರುವ ರೇಷ್ಮಾ ಅವರಿಗೆ  ಪತಿಯ ಜೊತೆ ಮೈಮನಸ್ಸು ಉಂಟಾಗಿದ್ದ  ಕಾರಣ ಅವರು ತನ್ನ ಸಹೋದರನ ಮನೆಯಲ್ಲೇ ವಾಸಿಸುತ್ತಿದ್ದಳು. ನಂತರ ಅಲ್ಲಿಗೆ ಬಂದ ಪತಿ ರೇಷ್ಮಾ ಮೇಲೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.


ರೇಷ್ಮಾ ‘ಪಾಶ್ತೋ’ ಹಾಡಿನಿಂದ ಹೆಚ್ಚು ಜನಪ್ರಿಯಗೊಂಡಿದ್ದು, ‘ಜೋಬಲ್ ಗೋಲುನಾ’ ಚಿತ್ರದಲ್ಲಿ ನಟಿಸಿದ್ದರು. ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆಯುತ್ತಿರುವ ಹಿಂಸಾಚಾರದ 15ನೇ ಪ್ರಕರಣ ಇದಾಗಿದ್ದು, ಈ ಹಿಂದೆ ಫೆಬ್ರವರಿ 3 ರಂದು ವೇದಿಕೆಯ ನಟಿ ಸನ್ಬುಲ್ ರನ್ನು ಗುಂಡು ಹಾರಿಸಲಾಯಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ

ಒಂದೇ ಹುಡುಗಿಯ ವಿಷಯವಾಗಿ ಮೂವರು ಯುಕವರು ಕಿತ್ತಾಡಿಕೊಂಡಿದ್ದಾರೆ. ಮೂವರ ಜಗಳದಲ್ಲಿ ಒಬ್ಬ ಕೊಲೆಯಾಗಿ ...

news

ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ಹಲವು ಯೋಜನೆ ಜಾರಿ

ರೈತರು ಜೀವನದಲ್ಲಿ ಬದಲಾವಣೆ ತರಬೇಕಾದರೆ ಅವರು ಸ್ವಾವಲಂಬಿಗಳಾಬೇಕು. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ...

news

ಕೋಟೆನಾಡಿನಿಂದ ರಣಕಹಳೆ ಊದಲು ಕೈಪಾಳೆಯ ರೆಡಿ

ಲೋಕಸಭಾ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ರಣಕಹಳೆ ಜೋರಾಗಿದೆ. ಗಡಿನಾಡಿನಿಂದ ...

news

ದೇಶಕ್ಕೆ ನೆಹರೂ ಮನೆತನ ಶಾಪವಾಯ್ತು ಎಂದ ಬಿಜೆಪಿ ಶಾಸಕ

ಕಾಂಗ್ರೆಸ್, ಆಡಳಿತ ಹಾಗೂ ನೆಹರೂ ಮನೆತನದ ಆಡಳಿತ ಈ ದೇಶಕ್ಕೆ ವರವಾಗಿಲ್ಲ ಶಾಪವಾಯ್ತು. ಹೀಗಂತ ಬಿಜೆಪಿ ...

Widgets Magazine