ಯುದ್ಧಕ್ಕೆ ನಾವೂ ರೆಡಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್

ನವದೆಹಲಿ, ಸೋಮವಾರ, 24 ಸೆಪ್ಟಂಬರ್ 2018 (09:20 IST)

ನವದೆಹಲಿ: ಇತ್ತೀಚೆಗೆ ನಡೆದ ಯೋಧರ ಹತ್ಯೆ ಪ್ರಕರಣದ ನಂತರ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ರಾವತ್ ಹೇಳಿಕೆಗೆ ಪಾಕ್ ತಿರುಗೇಟು ನೀಡಿದೆ.
 

ನಮ್ಮದೂ ಅಣ್ವಸ್ತ್ರ ಹೊಂದಿರುವ ಸಶಕ್ತ ರಾಷ್ಟ್ರ. ಯುದ್ಧಕ್ಕೆ ನಾವೂ ಸಿದ್ಧ. ಒಂದು ವೇಳೆ ನಡೆಯುವುದಿದ್ದರೆ ಅದಕ್ಕೆ ಸಂಪೂರ್ಣ ಸನ್ನದ್ಧರಾಗಿದ್ದೇವೆ’ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಗಫೂರ್ ಹೇಳಿಕೊಂಡಿದ್ದಾರೆ.
 
ಇತ್ತೀಚೆಗೆ ಬಿಎಸ್ ಎಫ್ ಯೋಧನ ಪೈಶಾಚಿಕ ಹತ್ಯೆ ಮತ್ತು ಮೂವರು ಪೊಲೀಸ್ ಅಧಿಕಾರಿಗಳ ಹತ್ಯೆಯ ನಂತರ ಪಾಕ್ ವಿರುದ್ಧ ತಿರುಗಿಬಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆಕ್ರಮಣಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಾವು ಶಾಂತಿ ಬಯಸುತ್ತೇವೆ ಎನ್ನುವುದನ್ನೇ ನಮ್ಮ ದೌರ್ಬಲ್ಯವಾಗಿ ಪರಿಗಣಿಸಬಾರದು. ನಾವೂ ಯುದ್ಧಕ್ಕೆ ರೆಡಿ ಎಂದು ಪಾಕ್ ಹೇಳಿಕೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಬೆನ್ನು ಬಿದ್ದ ಬಿಎಸ್ ಯಡಿಯೂರಪ್ಪ ಅಭಿಮಾನಿಗಳು!

ಬೆಂಗಳೂರು: ಕಾಂಗ್ರೆಸ್ ನ ಕೆಲವು ಶಾಸಕರನ್ನು ಬಿಜೆಪಿ ಆಪರೇಷನ್ ಕಮಲದ ಮೂಲಕ ತನ್ನತ್ತ ಸೆಳೆಯಲು ...

news

ಮಹಾ ಮೈತ್ರಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮೀಟಿಂಗ್

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಇಂದು ನವದೆಹಲಿಯಲ್ಲಿ ...

news

ಸೆಕ್ಸ್ ಗೆ ನಿರಾಕರಿಸಿದ್ದೇ ಈಕೆಯ ಪಾಲಿಗೆ ಮುಳುವಾಯಿತು!

ಚೆನ್ನೈ : ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆಗೆ ...

news

ಮೇಲ್ವರ್ಗದ ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ ಆಕೆಯ ಕುಟುಂಬದವರು ಬಾಲಕನಿಗೆ ಮಾಡಿದ್ದೇನು ಗೊತ್ತಾ?

ಮುಂಬೈ : ಮೇಲ್ವರ್ಗದ ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ 13 ವರ್ಷದ ದಲಿತ ಬಾಲಕನೊಬ್ಬನನ್ನು ಥಳಿಸಿ, ...

Widgets Magazine
Widgets Magazine