ಪ್ಯಾರಡೈಸ್ ಪೇಪರ್ಸ್ ಲೀಕ್! ತೆರಿಗೆ ವಂಚಕರ ಪಟ್ಟಿಯಲ್ಲಿ ಭಾರತದ ಪ್ರಮುಖರು!

ನವದೆಹಲಿ, ಮಂಗಳವಾರ, 7 ನವೆಂಬರ್ 2017 (08:49 IST)

ನವದೆಹಲಿ: ಪನಾಮಾ ಪೇಪರ್ಸ್ ನಂತಹದ್ದೇ ಮತ್ತೊಂದು ಪ್ಯಾರಾಡೈಸ್ ಪೇಪರ್ಸ್ ಮೂಲಕ ತೆರಿಗೆ ವಂಚಕರ ಪಟ್ಟಿ ಬಿಡುಗಡೆ ಮಾಡಿರುವ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಇದರಲ್ಲಿ ಭಾರತದ ಪ್ರಮುಖರ ಹೆಸರನ್ನೂ ಉಲ್ಲೇಖಿಸಿದೆ.


 
ಪನಾಮಾ ಪೇಪರ್ಸ್ ನಿಂದ ಪಾಕ್ ಪ್ರಧಾನಿ ನವಾಜ್ ಶರೀಫ್ ಅಧಿಕಾರ ಕಳೆದುಕೊಂಡಿದ್ದರು. ಪನಾಮಾ ಪೇಪರ್ಸ್ ಬಹಿರಂಗಗೊಂಡಾಗ ಬಾಲಿವುಡ್, ಭಾರತದ ರಾಜಕೀಯ ನಾಯಕರು ಸೇರಿದಂತೆ ತೆರಿಗೆ ವಂಚನೆ ಮಾಡಿದ ಹಲವು ಅಂತಾರಾಷ್ಟ್ರೀಯ ನಾಯಕರ ಹೆಸರು ಬಹಿರಂಗಗೊಂಡಿತ್ತು.
 
ಇದೀಗ ಅದೇ ಮಾದರಿಯಲ್ಲಿ ಪ್ಯಾರಡೈಸ್ ಪೇಪರ್ಸ್ ಲೀಕ್  ಆಗಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕೇಂದ್ರ ಸಚಿವ ಜಯಂತ್ ಸಿನ್ಹಾ, ಆರ್ ಕೆ ಸಿನ್ಹಾ, ಅಶೋಕ್ ಗೆಹ್ಲೆಟ್, ನೀರಾ ರಾಡಿಯಾ, ಸಂಜಯ್ ದತ್ ಪತ್ನಿ ಮಾನ್ಯತಾ ದತ್, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ವಯಲಾರ್ ರವಿ ಪುತ್ರ ರವಿ ಕೃಷ್ಣಾ, ಹರ್ಷಾ ಮೊಯ್ಲಿ, ಮದ್ಯ ದೊರೆ ವಿಜಯ್ ಮಲ್ಯಾ ಹೆಸರುಗಳು ಪಟ್ಟಿಯಲ್ಲಿ ಇವೆ.
 
ಈ ಗಣ್ಯರು ತೆರಿಗೆದಾರರ ಸ್ವರ್ಗ ಎನಿಸುವಂತಹ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟು 714 ಮಂದಿ ಭಾರತೀಯರ ಹೆಸರೂ ಇದರಲ್ಲಿರುವುದು ಆತಂಕಕಾರಿಯಾಗಿದೆ. ಪ್ಯಾರಡೈಸ್ ಪೇಪರ್ಸ್ ಎಂದರೆ ತನಿಖಾ ವರದಿಗಳ ಸಮಗ್ರ ಮಾಹಿತಿಯನ್ನೊಳಗೊಂಡ 13.4 ದಶಲಕ್ಷ ದಾಖಲೆಗಳ ಸಂಗ್ರಹವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಭಗವದ್ಗೀತೆಯನ್ನೇ ತಿರುಚಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

ಎನ್ ಕೌಂಟರಲ್ಲಿ ಗಾಯಗೊಂಡ ಪಿಎಸ್ಐಗೆ ಸ್ಪರ್ಶದಲ್ಲಿ ಚಿಕಿತ್ಸೆ: ನೋಡಲು ಬಾರದ ಅಧಿಕಾರಿಗಳು

ಬೆಂಗಳೂರು: ವಿಜಯಪುರ ಜಿಲ್ಲೆಯ ಕೊಂಕಣಗಾಂವ್ ಬಳಿ ಭೀಮಾತೀರದ ಹಂತಕನ ಎನ್ ಕೌಂಟರ್ ಪ್ರಕರಣದಲ್ಲಿ ಗುಂಡೇಟಿಗೆ ...

news

ಜಿಸ್‌ಟಿ ಅಂದ್ರೆ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್: ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನರೇಂದ್ರ ಮೋದಿ ಸರಕಾರವನ್ನು ಸರಕು ಮತ್ತು ...

news

ಪರಿವರ್ತನಾ ಯಾತ್ರೆ ವಿಫಲಕ್ಕೆ ಅಶೋಕ್ ಕಾರಣ: ವರದಿ ಕೇಳಿದ ಅಮಿತ್ ಷಾ

ಬೆಂಗಳೂರು: ಬಿಜೆಪಿಯ ಮಹತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಾದ ಗೊಂದಲಗಳಿಗೆ ಮಾಜಿ ...

Widgets Magazine
Widgets Magazine