Widgets Magazine
Widgets Magazine

ವಿಮಾನ ಹಾರುತ್ತಿದ್ದಾಗ ಕ್ಯಾಬಿನ್ ನಲ್ಲಿ ನಿದ್ದೆ ಮಾಡಿದ್ದ ಪೈಲಟ್!

Karachi, ಸೋಮವಾರ, 8 ಮೇ 2017 (10:23 IST)

Widgets Magazine

ಕರಾಚಿ: ವಿಮಾನ ಹಾರುವಾಗ ಪೈಲಟ್ ನಿದ್ದೆ ಮಾಡಿದರೆ ಏನಾಗುತ್ತದೆ? ಅದೂ 305 ಪ್ರಯಾಣಿಕರಿದ್ದ ವಿಮಾನದಲ್ಲಿ ಎರಡು ಗಂಟೆ ನಿದ್ದೆ ಮಾಡಿದರೆ? ಏನಾಗುತ್ತದೋ ಬಿಡುತ್ತದೋ ಆದರೆ ಆ ಪೈಲಟ್ ನನ್ನು ಮಾತ್ರ ಅಮಾನತುಗೊಳಿಸಲಾಗಿದೆ.


 
ಇದು ನಡೆದಿದ್ದು ಪಾಕಿಸ್ತಾನದಲ್ಲಿ. ಪಾಕಿಸ್ತಾನ ಏರ್ ಲೈನ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಖ್ತರ್ ಹಶ್ಮಿ ಎನ್ನುವ ಪೈಲಟ್ ಇಸ್ಲಾಮಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನದಲ್ಲಿ 2 ಗಂಟೆ ವಿಮಾನ ಹಾರುತ್ತಿರುವಾಗಲೇ ನಿದ್ದೆ ಹೋಗಿದ್ದು ಭಾರೀ ಸುದ್ದಿಯಾಗಿತ್ತು.
 
ವಯಸ್ಸಿನಲ್ಲಿ ಹಿರಿಯನಾಗಿದ್ದ ಹಶ್ಮಿ ತಮ್ಮ ಜ್ಯೂನಿಯರ್ ಪೈಲಟ್ ಗೆ ನಿರ್ದೇಶನ ನೀಡಬೇಕಿತ್ತು. ಆದರೆ ಅದರ ಬದಲು ಅವರು ಸ್ವಲ್ಪ ಸಮಯ ನಿದ್ದೆ ಮಾಡೋಣವೆಂದು ಮಲಗಿದವರು 2 ಗಂಟೆ ಏಳಲೇ ಇಲ್ಲ.
 
ಇದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪ್ರಕಟವಾಯ್ತು. ನಂತರ ಎಚ್ಚೆತ್ತುಕೊಂಡ ಪಾಕ್ ಏರ್ ಲೈನ್ಸ್ ಸಂಸ್ಥೆ ಪೈಲಟ್ ನನ್ನು ಸೇವೆಯಿಂದ ಮುಕ್ತಿಗೊಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪಾಕಿಸ್ತಾನ ಏರ್ ಲೈನ್ಸ್ ಪೈಲಟ್ ಅಂತಾರಾಷ್ಟ್ರೀಯ ಸುದ್ದಿಗಳು Pakisthan Airlines International News

Widgets Magazine

ಸುದ್ದಿಗಳು

news

ಸಿಎಂ ಕೇಜ್ರಿವಾಲ್ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ನವದೆಹಲಿ: 2 ಕೋಟಿ ರೂ. ಲಂಚ ಸ್ವೀಕಾರಿಸಿದ್ದಾರೆಂಬ ಆರೋಪಕ್ಕೆ ಸಿಲುಕಿಕೊಂಡಿರುವ ದೆಹಲಿ ಸಿಎಂ ಅರವಿಂದ್ ...

news

ಬಿಜೆಪಿ ನಾಯಕರೇ ಭ್ರಷ್ಟಾಚಾರದ ಜನಕರು: ಕುಮಾರಸ್ವಾಮಿ

ಶಿವಮೊಗ್ಗ: ಬಿಜೆಪಿ ನಾಯಕರೇ ಭ್ರಷ್ಟಾಚಾರದ ಜನಕರು. ಕಾಂಗ್ರೆಸ್ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ ...

news

ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು: ಬಿಎಸ್‌ವೈ

ಮೈಸೂರು: ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಇದರಿಂದ ನಾನು ಹೊರತಾಗಿಲ್ಲ. ಎಲ್ಲರು ಸೇರಿ ಸಂಘಟನೆ ...

news

ಜೈಲಿಗೆ ಹೋಗಿ ಬಂದವರು ಬಿಜೆಪಿಯಲ್ಲಿಯೇ ಇದ್ದಾರೆ: ಸಿಎಂ ವಾಗ್ದಾಳಿ

ಬೆಂಗಳೂರು: ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ವಿರುದ್ಧ ಗರಂ ಆದ ಸಿಎಂ, ಜೈಲಿಗೆ ಹೋಗಿ ಬಂದವರು, ...

Widgets Magazine Widgets Magazine Widgets Magazine