Widgets Magazine
Widgets Magazine

ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಗೆ ಹೀಗೊಬ್ಬಳು ಅಭಿಮಾನಿ!

NewDelhi, ಬುಧವಾರ, 15 ಮಾರ್ಚ್ 2017 (10:24 IST)

Widgets Magazine

ನವದೆಹಲಿ:  ಪಂಚ ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಹಲವೆಡೆಯಿಂದ ಶುಭಾಷಯ ಹರಿದುಬರುತ್ತಿದೆ. ಆದರೆ ಪಾಕಿಸ್ತಾನದ ಈ ಬಾಲಕಿ ಮಾತ್ರ ಮೋದಿ ಅಭಿಮಾನಿಗಳ ಸಾಲಲ್ಲಿ ವಿಶೇಷವಾಗಿ ನಿಲ್ಲುತ್ತಾಳೆ.


 
11 ವರ್ಷದ ಅಖೀದತ್ ನವೀದ್ ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾಳೆ.  ಅಷ್ಟೇ ಅಲ್ಲ, ಉಭಯ ದೇಶಗಳ ನಡುವೆ ಸೇತುವೆಯಾಗಿದ್ದು, ಶಾಂತಿ ನೆಲೆಗೊಳ್ಳುವಂತೆ ಮಾಡಿ ಎಂದೂ ಮನವಿ ಮಾಡಿದ್ದಾಳೆ.
 
“ಬಹುಶಃ ನೀವು ಭಾರತೀಯರ ಹೃದಯ ಗೆದ್ದಿದ್ದೀರಿ. ಅದಕ್ಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ. ಅದೇ ರೀತಿ ಪಾಕಿಸ್ತಾನಿಯರ ಹೃದಯ ಗೆಲ್ಲಿ. ಎರಡೂ ದೇಶಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸಿ. ನಾವು ಬುಲೆಟ್ ಗಳಿಗಿಂತ, ಬುಕ್ ಖರೀದಿಸುವಂತಾಗಲಿ,  ನಾವು ಗನ್ ಖರೀದಿಸುವುದು ಬೇಡ. ಬಡವರಿಗೆ ಔಷಧಿ ಖರೀದಿಸೋಣ” ಎಂದು ಈ ಪುಟ್ಟ ಪೋರಿ ತನ್ನದೇ ರೀತಿಯಲ್ಲಿ ಪತ್ರ ಬರೆದಿದ್ದಾಳೆ. ಇದಕ್ಕೆ ಪ್ರಧಾನಿ ಮೋದಿ ಹೇಗೆ ಸ್ಪಂದಿಸುತ್ತಾರೆ ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಸೂಚಿಸಿದ ಭಾರತದ ಮುಂದಿನ ರಾಷ್ಟ್ರಪತಿ ಯಾರು ಗೊತ್ತಾ?

ನವದೆಹಲಿ: ಪ್ರಣಬ್ ಮುಖರ್ಜಿ ಅಧಿಕಾರಾವಧಿ ಮುಗಿಯುತ್ತಾ ಬರುತ್ತಿದ್ದಂತೆ ಭಾರತಕ್ಕೆ ಮುಂದಿನ ರಾಷ್ಟ್ರಪತಿ ...

news

ಅತ್ಯಾಚಾರ ಆರೋಪಿ ಮಾಜಿ ಸಚಿವ ಪ್ರಜಾಪತಿ ಅರೆಸ್ಟ್!

ಲಕ್ನೋ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸೋಲುತ್ತಿದ್ದಂತೆ ಅಖಿಲೇಶ್ ಯಾದವ್ ಸಂಪುಟದಲ್ಲಿದ್ದ ...

news

ಕಾವೇರಿ ನದಿ ವಿವಾದ ಪರಿಹಾರ ಇನ್ನು ಸುಲಭ

ನವದೆಹಲಿ: ದೇಶದ ನದಿ ವ್ಯಾಜ್ಯಗಳನ್ನು ಸುಲಭವಾಗಿ ಪರಿಹರಿಸಲು ಕೇಂದ್ರ ಸರ್ಕಾರ ಹೊಸ ನ್ಯಾಯಾಧಿಕರಣ ...

news

ಸದನಕ್ಕೆ ಹಾಜರಾಗದಿದ್ರೆ ಶಾಸಕರು, ಸಚಿವರ ಮರ್ಯಾದೆ ಕಳೀತಾರೆ ಸ್ಪೀಕರ್!

ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಗೈರು ಹಾಜರಾಗುವ ಶಾಸಕರು ಮತ್ತು ಸಚಿವರಿಗೆ ಬಿಸಿ ಮುಟ್ಟಿಸಲು ಸ್ಪೀಕರ್ ...

Widgets Magazine Widgets Magazine Widgets Magazine