ತನ್ನದೇ ವಾಂಟೆಡ್ ಕಾಲಂ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅತ್ಯಾಚಾರಿ ಆರೋಪಿ!

Washington, ಶನಿವಾರ, 8 ಜುಲೈ 2017 (10:35 IST)

ವಾಷಿಂಗ್ಟನ್: ಅತ್ಯಾಚಾರ ಆರೋಪಿ ಈಗ ತಲೆ ಮರೆಸಿಕೊಂಡಿದ್ದಾನೆ. ಪತ್ತೆ ಮಾಡಿ ಪೊಲೀಸರಿಗೆ ತಿಳಿಸಿ ಎಂದು ಫೇಸ್ ಬುಕ್ ನಲ್ಲಿ ವಾಂಟೆಡ್ ಪೋಸ್ಟ್ ಕೆಳಗೆ ಸಾಮಾನ್ಯವಾಗಿ ಸಾಮಾನ್ಯ ಜನರು ಕಾಮೆಂಟ್ ಮಾಡುತ್ತಾರೆ. ಆದರೆ ಅಮೆರಿಕಾದಲ್ಲಿ ಅಪರಾಧಿಯೇ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾನೆ!


 
ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಡೆರೆಕ್ ಎನ್ನುವ 28 ವರ್ಷದ ಯುವಕ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದ. ಈತನ ಬಗ್ಗೆ ಸುಳಿವು ನೀಡುವಂತೆ ಪೊಲೀಸರು ಫೇಸ್ ಬುಕ್ ನಲ್ಲಿ ವಿವರಣೆ ಪ್ರಕಟಿಸಿದ್ದರು. ಇದರ ಕೆಳಗೆ ವ್ಯಕ್ತಿಯೊಬ್ಬರು ಈತನನ್ನು ಗೊತ್ತು. ಈತ ಒಳ್ಳೆಯ ವ್ಯಕ್ತಿ ಎಂದು ಕಾಮೆಂಟ್ ಮಾಡಿದ್ದರು.
 
ಈ ಕಾಮೆಂಟ್ ನೋಡಿ ಅಪರಾಧಿ ಆತನಿಗೆ ಧನ್ಯವಾದ ತಿಳಿಸಿದ್ದಲ್ಲದೆ, ತಾನು ನಿರಪರಾಧಿ. ಸದ್ಯದಲ್ಲೇ ಸತ್ಯ ಹೊರಬೀಳಲಿದೆ ಎಂದು ಪ್ರತಿಕ್ರಿಯಿಸಿದ್ದಾನೆ. ಇದನ್ನು ಕಂಡ ಪೊಲೀಸರೂ ಕಾಮೆಂಟ್ ಮಾಡಿದ್ದು, ನೀನು ಸದ್ಯದಲ್ಲೇ ನಮ್ಮ ಬಲೆಗೆ ಬೀಳಲೇಬೇಕು ಎಂದಿದ್ದಾರೆ!
 
ಇದನ್ನೂ ಓದಿ.. ‘ಬಾಹುಬಲಿ ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೂಂಛ್ ಸೆಕ್ಟರ್ ಮತ್ತು ಬಂಡಿಪೋರಾದಲ್ಲಿ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ; ಮೂರು ಸೈನಿಕರಿಗೆ ಗಾಯ

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ಸೆಕ್ಟರ್‌ನಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ದಾಳಿ ...

news

ಬೌ..ಬೌ..! ಈ ನಾಯಿ ಮನುಷ್ಯರು ಮಾಡಬೇಕಾದ ಕೆಲಸ ಮಾಡುತ್ತದೆ!

ಬೀಜಿಂಗ್: ಪರಿಸರವಾದಿಗಳು, ಕಾರ್ಯಕರ್ತರು ನಮ್ಮ ಸುತ್ತಮುತ್ತಲ ಪ್ರದೇಶ ಶುಚಿಯಾಗಿರಬೇಕು ಎಂದು ಏನೇನೋ ...

news

‘ಅಣ್ಣನ ಮಗನನ್ನೇ ಬಿಡದ ಕುಮಾರಸ್ವಾಮಿ ನಮ್ಮನ್ನು ಬಿಡ್ತಾರಾ?’

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ...

news

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವು: ಬಂಟ್ವಾಳ ಮತ್ತೆ ಉದ್ವಿಗ್ನ

ಮಂಗಳೂರು: ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ...

Widgets Magazine