ಸಮುದ್ರದಲ್ಲಿ ಸಿಕ್ಕಿತು ರಹಸ್ಯಮಯ ಜೀವಿ

ಕೆಪ್‌ಟೌನ್, ಮಂಗಳವಾರ, 7 ಮಾರ್ಚ್ 2017 (13:38 IST)

Widgets Magazine

ಸಮುದ್ರ, ಸಾಗರ ಜನರಿಗೆ ಸದಾ ರಹಸ್ಯಮಯವಾಗಿಯೇ ಕಂಡಿದೆ. ಕೇವಲ ಸಮುದ್ರವಷ್ಟೇ ಅಲ್ಲ, ಅಲ್ಲಿನ ಜೀವಗಳು ಸಹ ನಿಗೂಢಮಯವಾಗಿಯೇ ಕಾಡುತ್ತಿವೆ. ಆಗಾಗ ಸಿಗುವ ಅಪರಿಚಿತ ಜೀವಿಗಳು ಮನುಷ್ಯನ ಕುತೂಹಲವನ್ನು ಹೆಚ್ಚಿಸುತ್ತಲೇ ಇವೆ. 
ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದದ್ದು ಅದೇ. ಸಮುದ್ರದ ಆಳದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರಿಗೆ ಒಂದು ವಿಚಿತ್ರ ಜೀವಿ ಸಿಕ್ಕಿದ್ದು ಅದು ಯಾವ ಜೀವಿ ಎಂಬುದು ಯಾರಿಗೂ ತಿಳಿದಿಲ್ಲ. 
ಈ ಜೀವಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಸಮುದ್ರದ 300ಮೀಟರ್ ಆಳದಲ್ಲಿ ಮೀನು ಹಿಡಿಯುವಾಗ ಈ ಜೀವಿ ಬಲೆಗೆ ಸಿಕ್ಕಿದ್ದು ಇದಕ್ಕಿಂತ ಮೊದಲು ಇಂತಹ ಜೀವಿಯನ್ನು ನೋಡಿರಲಿಲ್ಲ ಎಂದು ಮೀನುಗಾರರು ಹೇಳುತ್ತಿದ್ದಾರೆ.
 
ಆದರೆ, ಸಾಗರ ತಜ್ಞರು ಹೇಳುವ ಪ್ರಕಾರ, ಇದು ಮೀನಿನ ಜಾತಿಗೆ ಸೇರಿದ ಪ್ರಾಣಿಯಾಗಿದ್ದು, ಸಮುದ್ರದ ಆಳದಲ್ಲಿ ಕಡುಬರುತ್ತದೆ. ಇದೊಂದು ಅಪರೂಪದ ಜೀವಿಯಾಗಿದ್ದು, ಅವುಗಳ ಸಂಖ್ಯೆ ಸಾಕಷ್ಟು ಕ್ಷೀಣಿಸಿದೆ.
 
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಿತ್ರ ಜೀವಿಯ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಇದು ಯಾವ ಜೀವಿ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಪಕ್ಷಕ್ಕೆ ನೆಗಡಿಯಷ್ಟೆ ಬಂದಿದೆ, ಕ್ಯಾನ್ಸರ್ ರೋಗ ಬಂದಿಲ್ಲ: ಈಶ್ವರಪ್ಪ

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ನೆಗಡಿಯಷ್ಟೆ ಬಂದಿದೆಯೇ ಹೊರತು ಬೇರೆ ರೋಗ ಬಂದಿಲ್ಲ ಎಂದು ಪಕ್ಷದಲ್ಲಿರುವ ...

news

ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆ: ಐ ಡೋಂಟ್ ರಿಯಾಕ್ಟ್ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ನನಗೆ ...

news

ಪತಿ ಗಂಡಸಲ್ಲವೆಂದು ಪತ್ನಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಭೂಪ

ಮೈಸೂರು: ಪತಿ ಗಂಡಸಲ್ಲವೆಂದು ಪತ್ನಿ ಹೇಳಿದ್ದರಿಂದ ಮನನೊಂದ ಪತಿಯೊಬ್ಬ ವಾಟರ್ ಟ್ಯಾಂಕ್‌ ಏರಿ ...

news

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯಾಕೆ ಮಾತಾಡಿಲ್ಲ ಗೊತ್ತಾ?!

ನವದೆಹಲಿ: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೆಚ್ಚು ಮಾತನಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ...

Widgets Magazine Widgets Magazine