ಬ್ರಿಟನ್ ಮಿಲಿಟರಿಯಲ್ಲಿ ಸೆಕ್ಸ್ ಕಿರುಕುಳ: ಫೋಟೋ ಬಯಲಿಗಿಟ್ಟ ದಿಟ್ಟ ಮಹಿಳೆ

ಲಂಡನ್, ಮಂಗಳವಾರ, 1 ಆಗಸ್ಟ್ 2017 (16:21 IST)

ಬ್ರಿಟನ್ ಮಿಲಿಟರಿಯಲ್ಲೂ ಲೈಂಗಿಕ ಕಿರುಕುಳದಂತಹ ಸಮಸ್ಯೆ ಇದೆಯಾ..? ಹೌದು ಎನ್ನುತ್ತಿವೆ ಇತ್ತೀಚೆಗೆ ಮಾಜಿ ಮಹಿಳಾ ಅಧಿಕಾರಿಯೊಬ್ಬರು ಬಿಚ್ಚಿಟ್ಟಿರುವ ಶಾಕಿಂಗ್ ಫೋಟೋಗಳು. ಈ ಫೋಟೋದಲ್ಲಿ ಆರ್`ಎಎಫ್`ಗೆ ಸೇರಿದ ಯುವತಿಯನ್ನ ಬೆತ್ತಲಾದ ಯೋಧರು ಟಾಸ್ ಮಾಡುತ್ತಾ.. ಅವಳ ಅಂಗಾಂಗದ ಬಗ್ಗೆ ಕಾಮೆಂಟ್ ಮಾಡುತ್ತಾ ಲೈಂಗಿಕವಾಗಿ ಕಿರುಕುಳ ನೀಡಿರುವುದು ಸಾಬೀತಾಗಿದೆ.
 


2001ರಲ್ಲಿ ಸೇನೆ ಸೇರಿದಾಗ 28 ಪುರುಷ ಯೋಧರಿದ್ದ ಬೆಟಾಲಿಯನ್`ನಲ್ಲಿದ್ದ ಏಕೈಕ ಮಹಿಳೆ ಮಿಸ್ ರೆಬೆಕ್ಕಾ ಕ್ರೂಕ್ ಶಾಂಕ್ ಅಂದು ತನ್ನ ಮೇಲಾದ ಲೈಂಗಿಕ ಕಿರುಕುಳದ ಫೋಟೋಗಳನ್ನ ಹೊರಗಿಟ್ಟಿದ್ದಾಳೆ.  ಮೌಂಟ್ ಅಲೀಸ್`ನ ಆರ್`ಎಎಫ್ ಮಿಲಿಟರಿಗೆ ಸೇರಲು ಬಂದಾಗ ಅಲ್ಲಿನ ಪುರುಷ ಯೋಧರು ಬೆತ್ತಲಾಗಿ ಸುತ್ತುವರೆದು ನಡೆದುಕೊಂಡಿದ್ದ ಅಶ್ಲೀಲ ಫೋಟೊಗಳನ್ನ ರಿಲೀಸ್ ಮಾಡಿದ್ದಾರೆ. ಈ ಮೂಲಕ ಮಿಲಿಟರಿಯ ಲೈಂಗಿಕ ಕಿರುಕುಳದ ಕರಾಳ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಇದಾದ ಬಳಿಕ ಆಕೆಯ ಬೆಡ್ ರೂಮ್`ಗೆ ಬಂದಿದ್ದ ಅಧಿಕಾರಿ ಈ ಘಟನೆಗಳನ್ನ ಬಹಿರಂಗಪಡಿಸದಿದ್ದರೆ ಒಳ್ಳೆಯ ಹುದ್ದೆ ಕೊಡುವುದಾಗಿ ಒಡ್ಡಿದ್ದನಂತೆ.
 
ಈಗ 35 ವರ್ಷದವಳಾಗಿರುವ ಕ್ರೂಕ್ ಸಾಂಕ್ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕ್ರೂಕ್ ಶಾಂಕ್, ಸಮಾನತೆ ಇರಬೇಕಾದಲ್ಲೇ ಅಸಮಾನತೆ ಕಾಡುತ್ತಿದೆ. ಲೈಂಗಿಕ ಕಿರುಕುಳವನ್ನ ನಾನು ಸಹಿಸುವುದಿಲ್ಲ. ಈ ಪ್ರಕರಣ ನನ್ನ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರಿದೆ ಎಂದು ಹೇಳಿದ್ಧಾರೆ. ಸದ್ಯ, ನಟಿ ಕಮ್ ಲೇಖಕಿಯಾಗಿರುವ ಕ್ರೂಕ್ ಶಾಂಕ್ ಮಿಲಿಟರಿ ಕರ್ಮಕಾಂಡವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬ್ರಿಟನ್ ಸೇನೆ ಲೈಂಗಿಕ ಕಿರುಕುಳ ಸೆಕ್ಸ್ Britain Soldier Sexual Harassment

ಸುದ್ದಿಗಳು

news

ಗೈರುಹಾಜರಿ: ಬಿಜೆಪಿ ಸಂಸದರಿಗೆ ಅಮಿತ್ ಶಾ ಎಚ್ಚರಿಕೆ

ನವದೆಹಲಿ: ಸಂಸತ್ತಿನ ಅಧಿವೇಶನದಲ್ಲಿ ಕಲಾಪಕ್ಕೆ ಗೈರುಹಾಜರಾಗುವ ಸಂಸದರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ...

news

ಮಗಳ ಜತೆ ಜಗಳ: ಅಳಿಯನನ್ನೇ ಸಜೀವವಾಗಿ ದಹಿಸಿದ ಮಾವ

ನಂಜನಗೂಡು: ಮಗಳ ಜೊತೆ ಜಗಳವಾಡಿದ್ದಾನೆ ಎನ್ನುವ ಆಕ್ರೋಶದಿಂದ ಅಳಿಯನನ್ನು ಸಜೀವವಾಗಿ ದಹಿಸಿದ ಘಟನೆ ...

news

ಬಿಹಾರ್ ಸಿಎಂ ನಿತೀಶ್ ಕುಮಾರ್ ಶಾಸಕ ಸ್ಥಾನ ರದ್ದತಿ ಕೋರಿ ಪಿಐಎಲ್

ನವದೆಹಲಿ: ನೆನೆಗುದಿಯಲ್ಲಿದ್ದ ಅಪರಾಧ ಪ್ರಕರಣವನ್ನು ಕೇಂದ್ರ ಚುನಾವಣೆ ಆಯೋಗದ ಮುಂದೆ ಮುಚ್ಚಿಟ್ಟಿದ್ದ ...

news

ಸಿಎಂ ಮೇಲೆ ಗೂಬೆ ಕೂರಿಸೋದು ಸರಿಯಲ್ಲ: ಹೊರಟ್ಟಿ

ಬೆಂಗಳೂರು: ವೀರಶೈವ ಪ್ರತ್ಯೇಕ ಲಿಂಗಾಯುತ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮೇಲೆ ಗೂಬೆ ...

Widgets Magazine