ಸಾನಿಯಾ ಮಿರ್ಜಾರನ್ನು ಚುಡಾಯಿಸಿ ನಿಷೇಧಕ್ಕೆ ಒಳಗಾಗಿದ್ದ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ರೆಹಮಾನ್‍

ಢಾಕಾ, ಸೋಮವಾರ, 3 ಸೆಪ್ಟಂಬರ್ 2018 (06:31 IST)

ಢಾಕಾ : ಈಗಾಗಲೇ ಖಾಸಗಿ ಹೋಟೆಲ್‍ಗೆ ಅನುಮತಿ ಇಲ್ಲದೆ ಮಹಿಳೆಯನ್ನು ಕರೆದುಕೊಂಡು ಹೋಗಿ ಕೊಠಡಿಯಲ್ಲಿರಿಸಿಕೊಂಡಿದ್ದಕ್ಕೆ 6 ತಿಂಗಳು ನಿಷೇಧಕ್ಕೆ ಒಳಗಾಗಿದ್ದ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ರೆಹಮಾನ್‍ ಆ ಶಿಕ್ಷೆ ಪ್ರಮಾಣ ಮುಗಿಯುವುದರೊಳಗೆ ಇದೀಗ ಮತ್ತೊಂದು ಶಿಕ್ಷೆಗೆ ಗುರಿಯಾಗಿದ್ದಾರೆ.


2014 ರಲ್ಲಿ ಸಾನಿಯಾ ಮಿರ್ಜಾ ತಮ್ಮ ಪತಿ ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲ್ಲಿಕ್ ಜೊತೆ ಬಾಂಗ್ಲಾ ದೇಶಕ್ಕೆ ಪಂದ್ಯವೊಂದಕ್ಕೆ ಆಗಮಿಸಿದ್ದರು. ಆ ವೇಳೆ ಅವರು ಮೈದಾನವನ್ನು ಪ್ರವೇಶಿಸುತ್ತಿರುವಾಗ ಶಬ್ಬೀರ್ ರೆಹಮಾನ್ ಸಾನಿಯಾರವನ್ನು ಚುಡಾಯಿಸಿದ್ದರು. ಇದರಿಂದ ಕೋಪಗೊಂಡ ಶೋಯಬ್ ಮಲ್ಲಿಕ್ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಾಗೂ ಢಾಕಾ ಮೆಟ್ರೋ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದರು.


ಶಬ್ಬೀರ್ ರೆಹಮಾನ್ ಮಾಡಿದ ಈ ಕೆಲಸದಿಂದ ಮುಜುಗರಕ್ಕೀಡಾದ ಬಾಂಗ್ಲಾ ಕ್ರಿಕೆಟ್ ಮಂಡಳಿ ಶಿಸ್ತು ಪಾಲನಾ ಸಮಿತಿಯನ್ನು ನೇಮಿಸಿ ಈ ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿ ಇದೀಗ ಶಬ್ಬೀರ್ ರೆಹಮಾನ್‍ಗೆ 6 ತಿಂಗಳ ಕಾಲ ಎಲ್ಲಾ ಅಂತರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರೀಯ ಧರ್ಮ ಸಂಸದ್ ಸಡಗರ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಳಿಯ ಕನ್ಯಾಡಿಯಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ ಧರ್ಮ ಸಂಸದ್ ...

news

ದೇಶದಾದ್ಯಂತ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

ಬೆಂಗಳೂರು : ಇಂದು ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನ ದೇವಾಲಯಗಳಲ್ಲಿ ವಿಶೇಷ ಪೂಜಾ ...

news

ಫೇಸ್ ಬುಕ್ ಗೆಳತಿಯ ತಂದೆಯನ್ನು ಚಾಕುವಿನಿಂದ ಇರಿದ ಭೂಪ

ಪಶ್ಚಿಮ ಬಂಗಾಳ : ಪಶ್ಚಮ ಬಂಗಾಳದ ಫರೀದ್ಪುರ ಪ್ರದೇಶದಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಫೇಸ್ ಬುಕ್ ...

news

ಇನ್ಮುಂದೆ ಪಾನ್ ಕಾರ್ಡ್ ಗೆ ತಂದೆ ಹೆಸರು ಕಡ್ಡಾಯವಾಗಿ ನಮೂದಿಸಬೇಕಿಲ್ಲ

ನವದೆಹಲಿ : ಸಿಂಗಲ್ ಪೇರೆಂಟ್ ಬಳಿಯಲ್ಲಿ ಬೆಳೆದವರಿಗೆ ಇನ್ನು ಮುಂದೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋಕೆ ...

Widgets Magazine