ಈಜಲು ಹೋದವನ ಮರ್ಮಾಂಗಕ್ಕೆ ಮೀನು ಕಚ್ಚಿ ಅವಾಂತರ!

ಬೀಜಿಂಗ್, ಶುಕ್ರವಾರ, 7 ಸೆಪ್ಟಂಬರ್ 2018 (11:04 IST)

ಬೀಜಿಂಗ್: ರಜಾ ಮಜಾ ಮಾಡಲು ಬಂದಿದ್ದ ವ್ಯಕ್ತಿ ಬೀಚ್ ನಲ್ಲಿ ಈಜಾಡುತ್ತಾ ಜಾಲಿ ಮಾಡುತ್ತಿದ್ದಾಗ ಮರ್ಮಾಂಗಕ್ಕೆ ಮೀನು ಕಚ್ಚಿ ಅವಾಂತರ ಸೃಷ್ಟಿಸಿದ ಘಟನೆ ಚೀನಾದಲ್ಲಿ ನಡೆದಿದೆ.
 
ಚೀನಾದ ಸನ್ಯಾ ನಗರದ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿಗೆ ಬಂದಿದ್ದ ವ್ಯಕ್ತಿ ಸುಂದರ ಬೀಚ್ ನಲ್ಲಿ ಈಜಾಡುತ್ತಿದ್ದಾಗ ಆತನಿಗೇ ಗೊತ್ತಾಗದಂತೆ ಪ್ಯಾಂಟ್ ಒಳಗೆ ಸ್ಟಿಂಗ್ ರೇ ಜಾತಿಯ ಮೀನು ಸೇರಿಕೊಂಡಿದೆ. ಮೀನು ಕಚ್ಚಿ ಈತ ನೋವಿನಿಂದ ನರಳಾಡುತ್ತಿದ್ದರೆ ನೆರವಿಗೆ ಬಂದ ವೈದ್ಯಕೀಯ ಪಡೆ ಹೇಗೋ ಸಾಹಸ ಮಾಡಿ ಅದನ್ನು ಹೊರ ತೆಗೆದಿದ್ದಾರೆ.
 
ಈತನ ನರಳಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟಿಂಗ್ ರೇ ಮೀನು ಅಪಾಯಕಾರಿಯಾಗಿದ್ದು, ಇದು ಈತ ಈಜಾಡುತ್ತಿದ್ದ ಪ್ರದೇಶದಲ್ಲಿ ಸಮುದ್ರದಾಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಳಗಾವಿ ಕಾಂಗ್ರೆಸ್ ಫೈಟ್: ಲಕ್ಷ್ಮೀ ಹೆಬ್ಬಾಳ್ಕರ್ ಡಿಮ್ಯಾಂಡ್ ಏನು ಗೊತ್ತಾ?

ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ನಾಯಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಫೈಟ್ ...

news

ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ 5 ಲಕ್ಷ ಬಹುಮಾನ ಕೊಡುತ್ತೇನೆ ಎಂದ ಕಾಂಗ್ರೆಸ್ ನಾಯಕ

ಮುಂಬೈ: ಹುಡುಗ ಇಷ್ಟಪಟ್ಟರೆ, ಆತ ಪ್ರೀತಿಸುವ ಹುಡುಗಿಯನ್ನು ಅಪಹರಿಸಿಯಾದರೂ ಮದುವೆ ಮಾಡಿಸುತ್ತೇನೆ ಎಂದು ...

news

ಪ್ರಧಾನಿ ಮೋದಿ ತಾಯಿ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ಫೋಟೋ ಹಾಕಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ...

news

ಮಾರುವೇಷದಲ್ಲಿ ಬಂದು ಕೇರಳ ಸಂತ್ರಸ್ತರಿಗೆ ನೆರವಾದ ಆ ವ್ಯಕ್ತಿ ಯಾರು ಗೊತ್ತಾ?!

ತಿರುವನಂತಪುರಂ: ಇತ್ತೀಚೆಗಿನ ದಿನಗಳಲ್ಲಿ ಅಧಿಕಾರ ಸಿಕ್ಕಿತೆಂದರೆ ತಾನು ನಿಂತ ನೆಲ ಮರೆಯುವವರೇ ಹೆಚ್ಚು. ...

Widgets Magazine