21 ರ ಹರೆಯದ ಈಕೆ ಜಗತ್ತಿನ ಸೆಕ್ಸಿಯಸ್ಟ್ ಕಳ್ಳಿ

ramkrishna puranik 

ಬೆಂಗಳೂರು, ಶುಕ್ರವಾರ, 5 ಜನವರಿ 2018 (19:56 IST)

21 ರ ಹರೆಯದ ಸ್ಟಿಫೇನಿ ಬ್ಯೂಡಾಯಿನ್‌ನನ್ನು 2014 ರಲ್ಲಿ 42 ಮನೆಗಳಿಗೆ ಕನ್ನ ಹಾಕಿದ್ದಕ್ಕಾಗಿ ಹಾಗೂ 58,000 ಡಾಲರ್ ಮೌಲ್ಯದ ವಸ್ತುಗಳನ್ನು ಕಳುವು ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. ಅವಳಿಂದ ಮೂರು ಅಕ್ರಮ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು ಹಾಗೂ ಕಳ್ಳತನಕ್ಕೆ ನೆರವಾಗಲು 11, 13 ಮತ್ತು 17 ರ ವಯಸ್ಸಿನ ಅಪ್ರಾಪ್ತ ಸಹಚರರನ್ನು ಹೊಂದಿದ್ದಕ್ಕಾಗಿ ಬಂಧಿಸಲಾಗಿತ್ತು. 
ಸಾಮಾಜಿಕ ಮಾಧ್ಯಮಗಳಲ್ಲಿ ಅವಳ ಚಿತ್ರಗಳು ವೈರಲ್ ಆಗಿ ಹರಿದಾಡುತ್ತಿದದಂತೆಯೇ ಅವಳು ವಿಶ್ವದ ಅತ್ಯಂತ ಸುಂದರ ಕಳ್ಳಿಯಾದಳು. ಆಕೆಯ ಅಪರಾಧಗಳು ಸಾಬೀತಾದ ನಂತರ, ಅವಳು ವಾರಾಂತ್ಯದಲ್ಲಿ ಮಾತ್ರ ಸೇವೆ ಸಲ್ಲಿಸಬೇಕಾದ 90 ದಿನಗಳ ಜೈಲು ಶಿಕ್ಷೆಗೆ ಒಳಗಾದಳು. ಆದರೆ ಕೆಲವೇ ದಿನಗಳಲ್ಲಿ ಅವಳು ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಅವಳು ಮಾಡೆಲಿಂಗ್ ಕ್ಷೇತ್ರಕ್ಕೆ ಸೇರಿಕೊಂಡಿದ್ದಾಳೆ.
 
ಸ್ಟಿಫೇನಿ ತನ್ನ ಬಂಧನದ ಮೊದಲು ಸೀಮಿತವಾದ ಮಾಡೆಲಿಂಗ್ ವೃತ್ತಿ ಜೀವನವನ್ನು ಹೊಂದಿದ್ದಳು ಹಾಗೂ ಕೆಲವು ಕ್ಯಾಲೆಂಡರ್‌ಗಳಿಗೆ ಮಾತ್ರ ಮಾಡೆಲಿಂಗ್ ಭಂಗಿಯನ್ನು ನೀಡುತ್ತಿದ್ದಳು. ಆದರೆ ಅವಳ ಚಿತ್ರಗಳು ವೈರಲ್ ಆದ ನಂತರ, ಅವಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದಳು, ಅವಳ ಮಾಡೆಲಿಂಗ್‌ಗೆ ಆಗ ಬೇಡಿಕೆ ಸಿಕ್ಕಿತು.
ಅವಳನ್ನು ಬಂಧಿಸಿದ ನಂತರ, ಅವಳು ಫೇಸ್‌ಬುಕ್‌ನಿಂದ ಅವಳ ಕೆಲವು ಅತ್ಯಾಕರ್ಷಕ ಚಿತ್ರಗಳನ್ನು ಅಳಿಸಲು ಪೊಲೀಸ್ ಅಧಿಕಾರಿಗೆ ತನ್ನ ಮೊಬೈಲ್ ಅನ್ನು ನೀಡುವಂತೆ ಕೇಳಿಕೊಂಡಿದ್ದಳು.
 
ಅವಳು ಸ್ಥಳೀಯ ಪುರುಷರ ಪತ್ರಿಕೆಯ ಮುಖಪುಟದಲ್ಲಿಯೂ ಸಹ ಕಾಣಿಸಿಕೊಂಡಳು. ಅವಳನ್ನು ಮಾಡೆಲಿಂಗ್ ಏಜೆನ್ಸಿ ಸಹ ನೇಮಕ ಮಾಡಿಕೊಂಡಿತ್ತು.
 
ಒಟ್ಟಿನಲ್ಲಿ, ತನ್ನ ವ್ಯಕ್ತಿತ್ವವನ್ನು ಕ್ರಿಮಿನಲ್ ನಡವಳಿಕೆಯನ್ನು ಉತ್ತೇಜಿಸಲು ಬಳಸದಿದ್ದಲ್ಲಿ ಮಾತ್ರ ಅವಳು ಮಾಡೆಲ್ ಆಗಿ ಮುಂದುವರಿಯಬಹುದು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ– ಅನಂತಕುಮಾರ್

ತ್ರಿವಳಿ ತಲಾಕ್ ವಿಧೇಯಕ ಅಂಗೀಕಾರಕ್ಕೆ ಅಸಹಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಮುಸ್ಲಿಂ ಮಹಿಳೆಯರಿಗೆ ...

news

ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮಸೇನೆ ನಿಷೇಧಿಸಲಿ– ಮುತಾಲಿಕ್ ಸವಾಲು

ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮ ಸೇನೆ ಸಂಘಟನೆ ನಿಷೇಧ ಮಾಡಿ, ಪರಿಣಾಮ ಎದುರಿಸಲಿ ಎಂದು ...

news

ಯಡಿಯೂರಪ್ಪ ಅವರ ಬಳಿ ಎಷ್ಟು ರಕ್ತವಿದೆ– ಸಿದ್ದರಾಮಯ್ಯ ಪ್ರಶ್ನೆ

ಹೋದ ಕಡೆಯಲ್ಲೆಲ್ಲಾ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳುವ ಬಿಎಸ್ ಯಡಿಯೂರಪ್ಪ ಅವರಲ್ಲಿ ಎಷ್ಟು ...

news

ಶಬರಿಮಲೆ ದೇವಾಲಯಕ್ಕೆ ತೆರಳುವ ಮಹಿಳೆಯರಿಗೆ ವಯಸ್ಸಿನ ದಾಖಲೆ ಕಡ್ಡಾಯ

ಪತನಮ್‌ತಿಟ್ಟ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಇನ್ನು ಮುಂದೆ ವಯಸ್ಸಿನ ...

Widgets Magazine