ಲಂಡನ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಬ್ಯಾಂಕುಗಳಿಗೆ ಕೋರ್ಟ್ ಆದೇಶ

ಲಂಡನ್, ಶುಕ್ರವಾರ, 6 ಜುಲೈ 2018 (07:07 IST)

ಲಂಡನ್ : ವಿಜಯ್ ಮಲ್ಯಾ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಕೋರ್ಟ್ ಭಾರತದ 13 ಬ್ಯಾಂಕ್ ಗಳ ಪರವಾಗಿ ಜಾರಿ ಆದೇಶ ಹೊರಡಿಸುವುದರ ಮೂಲಕ ಬ್ಯಾಂಕುಗಳಿಗೆ ಸಾಲ ಮರಳಿ ಪಡೆಯುವ ವಿಶ್ವಾಸ ಮೂಡಿಸಿದೆ.


ಮದ್ಯದ ದೊರೆ ವಿಜಯ್ ಮಲ್ಯಾ ಭಾರತದ ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟು ರೂ, ಸಾಲ ಪಡೆದು ಪಲಾಯನ ಮಾಡಿದ್ದರು. ಸಾಲ ವಸೂಲಾತಿಗಾಗಿ ಭಾರತದ 13 ಬ್ಯಾಂಕ್ ಗಳು ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ನಲ್ಲಿ ಮನವಿ ಮಾಡಿದ್ದವು.

ಈಗ ಭಾರತೀಯ ಬ್ಯಾಂಕ್ ಗಳ ಮನವಿ ಪುರಸ್ಕರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಮಲ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಭ್ಯಂತರ ಇಲ್ಲ ಎಂದು ಆದೇಶ ನೀಡಿದೆ. ಕೋರ್ಟ್ ಜಾರಿ ಆದೇಶ ನೀಡಿದೆಯಾದರೂ, ಸುಮಾರು 1.145 ಬಿಲಿಯನ್ ಪೌಂಡ್ ಗಳಷ್ಟು ಹಣವನ್ನು ಮರಳೀಪಡೆಯುವುದಕ್ಕೆ ಭಾರತೀಯ ಬ್ಯಾಂಕ್ ಗಳಿಗೆ ನೇರವಾಗಿ ಅವಕಾಶ ಇರುವುದಿಲ್ಲ.


ಬ್ರಿಟನ್ ನ ಹೈಕೋರ್ಟ್ ಜಾರಿ ಅಧಿಕಾರಿ ಹಾಗೂ ಆತನ ವ್ಯಾಪ್ತಿಗೆ ಬರುವ ಅಧಿಕಾರಿಗಳು ಲಂಡನ್ ಬಳಿ ಇರುವ ವಿಜಯ್ ಮಲ್ಯ ಅವರ ಲೇಡಿವಾಕ್, ಕ್ವೀನ್ ಹೂ ಲೇನ್, ಟಿವಿನ್, ವೆಲ್ವಿನ್ ಮತ್ತು ಬ್ರಾಂಬಲ್ ಲಾಡ್ಜ್, ಕ್ವೀನ್ ಹೂ ಲೇನ್, ಟೆವಿನ್ ನ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯವಹರಿಸಬಹುದಾಗಿದ್ದು, ವಶಕ್ಕೆ ಪಡೆಯಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನ್ಯಭಾಗ್ಯ ಕಡಿತದಿಂದ ಬಡಜನತೆಗೆ ತೊಂದರೆ: ಸಂಸದ ಡಿಕೆ ಸುರೇಶ್

ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಕಡಿತ ಮಾಡಿದ್ದರಿಂದ ಬಡಜನತೆಗೆ ತೊಂದರೆಯಾಗಲಿದೆ ಎಂದು ಸಂಸದ ...

news

ಯುವತಿಯರಿಗೆ ಚುಡಾಯಿಸುತ್ತಿದ್ದ ಪೋಲಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸರು!

ಕೆಲ ಬಸ್ , ಬಸ್ಟಾಂಡ್, ಕಾಲೇಜು ಮುಂಭಾಗ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರಿಗೆ, ಯುವತಿಯರಿಗೆ ...

news

ನಗರ ಸಾರಿಗೆ ಬಸ್ ಸೀಜ್: ಕೋರ್ಟ್ ಆದೇಶ

ಅಪಘಾತ ಪರಿಹಾರ ವಿಳಂಬಕ್ಕಾಗಿ ನಗರಸಾರಿಗೆ ಬಸ್ ನ್ನು ಸೀಜ್ ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.

news

ಭೀಮಾ ತೀರದ ಹಂತಕನ ಕೊಲೆ ಪ್ರಕರಣ: ಆರೋಪಿ ಅಂದರ್

ಭೀಮಾತೀರದ ಗ್ರಾಮಗಳಲ್ಲೇ ರಾಜ್ಯದಲ್ಲಿಯೇ ಹೆಚ್ಚು ಸುದ್ದಿ ಮಾಡಿದ ಭೀಮಾತೀರದ ಹಂತಕ ಗಂಗಾಧರ ಚಡಚಣ ಕೊಲೆ ...

Widgets Magazine