ಪಾರ್ಟಿಯ ಮೂಡಿನಲ್ಲಿ ತನ್ನ ಮಕ್ಕಳ ಜೀವ ತೆಗೆದ ತಾಯಿಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಅಮೇರಿಕಾ, ಗುರುವಾರ, 20 ಡಿಸೆಂಬರ್ 2018 (09:11 IST)

ಅಮೇರಿಕಾ : ತಾಯಿಯೊಬ್ಬಳು  ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತನ್ನ ಒಂದು ಹಾಗೂ ಎರಡು ವರ್ಷದ ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಅವರ ಸಾವಿಗೆ ಕಾರಣಳಾದ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.


ಅಮಂಡಾ ಹಾಕ್ಸಿನ್ ಎನ್ನುವ ಮಹಿಳೆ ಜೂನ್ 7ರಂದು ತನ್ನ ಒಂದು ಹಾಗೂ ಎರಡು ವರ್ಷದ ಮಕ್ಕಳನ್ನು ಕಾರಿನಲ್ಲಿಯೇ‌ ಬಿಟ್ಟು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು‌ ತೆರಳಿದ್ದಾಳೆ. ಈ ವೇಳೆ ಕಾರಿನೊಳಗೆ ಹೆಚ್ಚಾಗಿ, ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಮೊದಲು ಆಕೆ ಕೆರೆಯೊಂದರಲ್ಲಿ ಇಬ್ಬರು ಮಕ್ಕಳು‌ ಹೂವೊಂದರ ವಾಸನೆ ತೆಗೆದುಕೊಂಡಿದ್ದಕ್ಕೆ ಮೂರ್ಛೆ ಹೋಗಿದ್ದು ಬಳಿಕ‌ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಳು. ಆದರೆ ಪೊಲೀಸರ ತನಿಖೆಯ‌ ಬಳಿಕ,‌ ಮಕ್ಕಳು‌ ಕಾರಿನಲ್ಲಿ‌ ಉಸಿರುಗಟ್ಟಿ ಸಾವನ್ನಪಿದ್ದಾರೆ ಎಂದು ತಿಳಿದುಬಂದಿದೆ.


ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು  ತಾಯಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಪ್ರತಿ ಮಗುವಿನ ಸಾವಿಗೆ 20 ವರ್ಷ ಜೈಲು‌ ಶಿಕ್ಷೆಯೆಂದು ಆಕೆಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಚ್ಚರಿಕೆ! ಸಾಕ್ಸ್ ವಾಸನೆ ತೆಗೆದುಕೊಂಡರೆ ಈ ಖಾಯಿಲೆ ಬರುವುದು ಖಂಡಿತ

ಚೀನಾ : ಸಾಕ್ಸ್ ವಾಸನೆ ತೆಗೆದುಕೊಂಡ ಕಾರಣ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ...

news

ರಾಜಸ್ತಾನದ ನೂತನ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿಸುದ್ದಿ

ಜೈಪುರ : ರಾಜಸ್ಥಾನದ ನೂತನ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಚಾರದ ವೇಳೆ ನೀಡಿದ ಭರವಸೆಯನ್ನು ...

news

ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ಮಹಿಳೆಗೆ ಕಾಮುಕನೊಬ್ಬ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಪಬ್ ನಲ್ಲಿ ಪಾರ್ಟಿ ಮುಗಿಸಿ ಸ್ನೇಹಿತರ ಜೊತೆ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಕಾಮುಕನೊಬ್ಬ ...

news

ಫೇಸ್ಬುಕ್ ಸ್ನೇಹಿತನ ಬಣ್ಣದ ಮಾತಿಗೆ ಮರುಳಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ

ಮೀರತ್ : ಅಪ್ರಾಪ್ತೆಯೊಬ್ಬಳು ಫೇಸ್ಬುಕ್ ಸ್ನೇಹಿತನ ಮದುವೆ ಆಮಿಷಕ್ಕೆ ಮರುಳಾಗಿ ಸಾಮೂಹಿಕ ...