ತನ್ನ ರೂಮ್ ಮೇಟ್ ನ್ನು ಚೂರಿಯಿಂದ ಇರಿದು ಕೊಂದ ವ್ಯಕ್ತಿ. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

ಬುಧವಾರ, 12 ಸೆಪ್ಟಂಬರ್ 2018 (11:59 IST)

ದುಬೈ : ತನ್ನ ರೂಮ್ ಮೇಟ್ ಮೊಬೈಲ್ ಫೋನಿನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ ಎಂಬ ಕ್ಷುಲ್ಲಕ ಕಾರಣದಿಂದ ವ್ಯಕ್ತಿಯೊಬ್ಬ ಆತನನ್ನು ಕೊಲೆ ಮಾಡಿದ ಘಟನೆ ದುಬೈನಲ್ಲಿ ನಡೆದಿದೆ.


ಸಂತ್ರಸ್ತನಿಗೆಂದು ಆಯೋಜಿಸಲಾಗಿದ್ದ ವಿದಾಯ ಪಾರ್ಟಿಯಲ್ಲಿ ಆತ ದೊಡ್ಡ ಧ್ವನಿಯಲ್ಲಿ ಫೋನಿನಲ್ಲಿ ಯಾರ ಜೊತೆಗೆ ಮಾತನಾಡುತ್ತಿರುವುದನ್ನು ಕಂಡು ತಾಳ್ಮೆ ಕಳೆದುಕೊಂಡ ಆರೋಪಿ ಹಾಸಿಗೆಯ ಅಡಿಯಲ್ಲಿದ್ದ ಚೂರಿಯನ್ನು ತೆಗೆದು ಆತನ ಹೊಟ್ಟೆಗೆ ಇರಿದಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಈ ಘಟನೆ ಮಾರ್ಚ್ 30ರಂದು ಅಲ್ ಖುವಾಸಿಸ್ ಎಂಬಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇತನಿಗೆ 37 ವರ್ಷ ವಯಸ್ಸಾಗಿದ್ದು, ದುಬೈನಲ್ಲಿ ಭಾರತೀಯ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದ ಎಂಬುದಾಗಿ ತಿಳಿದುಬಂದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ದುಬೈ ಅಕ್ಟೋಬರ್ 7ಕ್ಕೆ ನಿಗದಿ ಪಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 

ಏಳು ವರ್ಷದ ಹಿಂದೆ ನಾಪತ್ತೆಯಾದ ಬಾಲಕನನ್ನು ಹುಡುಕಿಕೊಟ್ಟ ಫೇಸ್ ಬುಕ್!

ಮುಂಬೈ : ಹೈದರಾಬಾದ್‌ನಲ್ಲಿ 2011ರಲ್ಲಿ ನಾಪತ್ತೆಯಾಗಿದ್ದ 15ವರ್ಷದ ಬಾಲಕ ಮತ್ತೆ ತನ್ನ ಮನೆಯವರನ್ನು ...

ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ: ರಮೇಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ತಮ್ಮಿಂದಾಗಿ ಕಂಟಕ ಎದುರಾಗಿದೆ ಎಂಬ ಸುದ್ದಿಗಳನ್ನು ರಮೇಶ್ ...

ಪ್ರಿಯತಮೆ ಜೊತೆಗಿದ್ದ ಯುವಕನ ಮುಂಗೈ ಕತ್ತರಿಸಿದ ದುಷ್ಕರ್ಮಿಗಳು

ಬೆಂಗಳೂರು : ಪ್ರಿಯತಮೆ ಜೊತೆಗೆ ಪ್ರವಾಸದಲ್ಲಿದ್ದ ಯುವಕನೊಬ್ಬನ ಮುಂಗೈಯನ್ನು ದುಷ್ಕರ್ಮಿಗಳು ಕತ್ತರಿಸಿದ ...

ಕಾಮದಾಟವಾಡಲು ಕರೆದು ಈ ಮಾಜಿ ಪ್ರೇಯಸಿ ಮಾಡಿದ್ದೇನು?

ನೋಯ್ಡಾ: ಹಳೇ ಲವ್ವರ್ ಗೆ ಲೈಂಗಿಕ ಆಸೆ ತೋರಿಸಿ ಈ ಯುವತಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿದರೆ ಮಹಿಳೆ ...