ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ನೀತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ವಾಷಿಂಗ್ಟನ್, ಬುಧವಾರ, 27 ಜೂನ್ 2018 (15:38 IST)

ವಾಷಿಂಗ್ಟನ್ : ಮುಸ್ಲಿಮರು ಬಹುಸಂಖ್ಯಾತರಾಗಿರುವ ಕೆಲವು ದೇಶಗಳಿಗೆ ಡೊನಾಲ್ಡ್ ಟ್ರಂಪ್ ಅವರು ಹೇರಿದ್ದ ಪ್ರವಾಸ ನಿಷೇಧ ತೀರ್ಮಾನವನ್ನು ಅಮೆರಿಕಾ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.


ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರನ್ನೊಳಗೊಂಡಿದ್ದ ಪೀಠ ಟ್ರಂಪ್ ಪ್ರವಾಸ ನಿರ್ಬಂಧ ಆದೇಶವನ್ನು ಎತ್ತಿ ಹಿಡಿದಿದ್ದು ಈ ನಿಷೇಧ ಕ್ರಮ ಧಾರ್ಮಿಕ ಕಾರಣಗಳಿಂದ ಪ್ರೇರಿತವಾಗಿದೆ ಎನ್ನುವ ವಾದವನ್ನು ತಳ್ಳಿ ಹಾಕಿದೆ. ಇಂತಹಾ ರಾಷ್ಟಗಳ ನಾಗರಿಕರು ಅಮೆರಿಕಾ ಪ್ರವೇಶ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿರುವ ಕಾರಣ ಅಧ್ಯಕ್ಷರು ನ್ಯಾಯವಾದದ್ದನ್ನೇ ಮಾಡಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.


ಇದು ಅಧ್ಯಕ್ಷ ಟ್ರಂಪ್ ಅವರ ಆಡಳಿತಕ್ಕೆ ದೊರೆತಿರುವ ಮಹತ್ವದ ಗೆಲುವಾಗಿದ್ದು, ನ್ಯಾಯಾಲಯದ ತೀರ್ಪು ಬಂದ ನಂತರ ಟ್ವೀಟ್ ಮಾಡಿ ಅವರು "ಸುಪ್ರೀಂ ಕೋರ್ಟ್ ಟ್ರಂಪ್ ವಲಸೆ ನೀತಿಯನ್ನು ಎತ್ತಿ ಹಿಡಿದಿದೆ ವಾವ್!' ಎಂದು ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ಅಂತಿದ್ದ ಹಾಗೇ ಸುಮ್ನಿರಯ್ಯಾ ಅಂದ್ರು ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಯಸ್ಸಿನ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆಂಬ ವಿಡಿಯೋ ...

news

ಸಿದ್ದರಾಮಯ್ಯ ಯಾಕಿಂಗಾಡ್ತಾರೋ ಗೊತ್ತಿಲ್ಲ ಅಂದ್ರು ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಗ್ಗೆ ಅಪಸ್ವರ ತೆಗೆಯುತ್ತಿರುವ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್ ಹಿರಿಯ ...

news

ಸಿದ್ದರಾಮಯ್ಯ ಬಾಯಿಗೆ ಹೇಗಾದ್ರೂ ಬೀಗ ಹಾಕಿ!

ಬೆಂಗಳೂರು: ಸಿದ್ದರಾಮಯ್ಯ ಕಿರಿಕ್ ಹೇಳಿಕೆಯಿಂದ ಕಾಂಗ್ರೆಸ್ ನಲ್ಲೇ ತಲ್ಲಣ ಶುರುವಾಗಿದೆಯಂತೆ! ಹೀಗಾಗಿ ...

news

ಸಮ್ಮಿಶ್ರ ಅಸಮಾಧಾನ: ರಾಜ್ಯ ನಾಯಕರಿಗೆ ಹೈಕಮಾಂಡ್ ಕೊಟ್ಟ ಸೂಚನೆ ಏನು ಗೊತ್ತಾ?

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ವೈಖರಿ ಬಗ್ಗೆ ಕಾಂಗ್ರೆಸ್ ನ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ ...

Widgets Magazine
Widgets Magazine