ಯುವತಿಗೆ ಹೀಯಾಳಿಸಿದ್ದಕ್ಕೆ 15 ವರ್ಷ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?

ನ್ಯೂಯಾರ್ಕ್, ಸೋಮವಾರ, 17 ಡಿಸೆಂಬರ್ 2018 (07:18 IST)

ನ್ಯೂಯಾರ್ಕ್ : ವ್ಯಕ್ತಿಯೊಬ್ಬ ಯುವತಿಗೆ ಸಲಿಂಗಿ ಎಂದು ಹೀಯಾಳಿಸಿದ ಕಾರಣಕ್ಕೆ 15 ವರ್ಷ ಜೈಲುವಾಸ ಅನುಭವಿಸುವಂತಾದ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

54 ವರ್ಷದ ಅಲಾಶೀದ್ ಅಲ್ಲಾಹ ಎಂಬಾತ ಸಬ್ ವೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಹ ಪ್ರಯಾಣಿಕರಾದ ಭಾರತೀಯ ಮೂಲದ ಅವನೀತ್ ಕೌರ್ ಎಂಬ 20 ರ ಹರೆಯದ ಯುವತಿ ನೀನು ಸಲಿಂಗಿ ಎಂದು ಹೀಯಾಳಿಸಿದ್ದಾನೆ. ಅಲ್ಲದೇ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.

 

ಈ ಕಾರಣದಿಂದ ಆಕೆ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ದೇಶದಲ್ಲಿ ಯಾವುದೇ ಕಾರಣಕ್ಕೂ ಅಸಹಿಷ್ಣುತೆ ಹಾಗೂ ಲೈಂಗಿಕ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಪ್ರಶ್ನೆಯೇ ಇಲ್ಲ ಎಂದು ಅಲಾಶೀದ್ ಅಲ್ಲಾಹ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸಿಎಂ

ನವದೆಹಲಿ : ಇಂದು ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸಿಎಂ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಈ ಸಮಾರಂಭ ...

news

ಮಾವನಿಂದ ಅತ್ಯಾಚಾರಕ್ಕೆ ಒಳಗಾದ ನವವಿವಾಹಿತೆ ಆತ್ಮಹತ್ಯೆಗೆ ಶರಣು

ಭೋಪಾಲ್ : ಮದುವೆಯಾಗಿ ಗಂಡನ ಜೊತೆ ಸುಖಸಂಸಾರ ಶುರುಮಾಡಬೇಕಾಗಿದ್ದ 20 ವರ್ಷದ ಮಹಿಳೆ ಮಾವನಿಂದ ...

news

ಅತ್ತೆ 20 ಜನ ಮಹಿಳೆಯರ ಜೊತೆ ಸೇರಿ ಸೊಸೆಗೆ ಮಾಡಿದ್ದೇನು ಗೊತ್ತಾ?

ನವದೆಹಲಿ : ಒಂದು ಮನೆಯಲ್ಲಿ ಅತ್ತೆ ಸೊಸೆಯ ಜಗಳ ಸರ್ವೆ ಸಾಮಾನ್ಯ. ಆದರೆ ಅತ್ತೆಯೊಬ್ಬಳು 20 ಜನ ಮಹಿಳೆಯರ ...

news

ತೋಟದ ಮಾಲಿಕನಿಗೆ ಹೆದರಿಸಲು ಮಾಡಿದ್ದೇನು ಗೊತ್ತಾ?

ತೋಟದ ಮಾಲಿಕನೊಬ್ಬನಿಗೆ ಹೆದರಿಸಲು ದುಷ್ಕರ್ಮಿಗಳು ತೋಟದ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇಟ್ಟಿರುವ ...