ನೋಡುಗರಲ್ಲಿ ಆಶ್ಚರ್ಯ ಮೂಡಿಸಿದೆ ಚೀನಾದಲ್ಲಿ ನಡೆದ ಈ ಅಪಘಾತ

ಬೀಜಿಂಗ್, ಶನಿವಾರ, 5 ಜನವರಿ 2019 (08:11 IST)

ಬೀಜಿಂಗ್ : ದಕ್ಷಿಣ ಚೀನಾದ ಶೆನ್ಝೆನ್ ಪಟ್ಟಣದಲ್ಲಿ ನಡೆದ ಕಾರು-ಸೈಕಲ್ ಅಪಘಾತವೊಂದು ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿದೆ.


ಹೌದು. ದಕ್ಷಿಣ ಚೀನಾದ ಶೆನ್ಝೆನ್ ಪಟ್ಟಣದಲ್ಲಿ ಕಾರು ಹಾಗೂ ಸೈಕಲ್ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದೆ. ಆದರೆ ಈ ಅಪಘಾತದಲ್ಲಿ ಸಹಜವಾಗಿ ಸೈಕಲ್ ನುಜ್ಜುಗುಜ್ಜಾಗಬೇಕಿತ್ತು, ಆದರೆ ವಿಪರ್ಯಾಸವೆಂದರೆ ಇಲ್ಲಿ ನುಜ್ಜುಗುಜ್ಜಾಗಿದ್ದು ಕಾರು. ಕಾರಿನ ಎದುರಿನ ಬೋನೆಟ್ ಸಂಪೂರ್ಣ ಹಾನಿಗೊಂಡಿದ್ದರೆ ಬೈಸಿಕಲ್ ಗೆ ಮಾತ್ರ ಏನೂ ಹಾನಿಯಾಗಿರಲಿಲ್ಲ. ಇದಕ್ಕೆ ಸಂಬಂಧಪಟ್ಟ ಪೋಟೊ ಇದೀಗ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಆದರೆ ಈ ಪೋಟೊ ಎಡಿಟ್ ಮಾಡಿದ್ದು  ಎಂದು ಹಲವರು ಹೇಳಿದ್ದಾರೆ. ಆದರೆ ಇದು ನಿಜ ಘಟನೆ ಎಂದು ಸ್ಥಳೀಯ ಪೊಲೀಸರು ಹೇಳಿರುವುದರ ಜೊತೆಗೆ ಘಟನೆಯ ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಘಟನೆಯಲ್ಲಿ ಸೈಕಲ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಪಾ ಮತ್ತು ಸೆಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಅರೆಸ್ಟ್

ಬೆಂಗಳೂರು : ಸ್ಪಾ ಮತ್ತು ಸೆಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗಾಲ್ಯಾಂಡ್ ನ ...

news

ಅಪ್ರಾಪ್ತೆಯನ್ನು ಬಲವಂತವಾಗಿ ಮದುವೆಯಾಗಿ ನಿರಂತರ ಅತ್ಯಾಚಾರ ಎಸಗಿದ ವ್ಯಕ್ತಿ ಅರೆಸ್ಟ್

ಚಂಡೀಗಢ : ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿದ್ದಲ್ಲದೇ ಸತತ ಎರಡು ತಿಂಗಳು ಕಾಲ ...

news

23 ವರ್ಷದ ಯುವತಿಯ ಮೇಲೆ ಫೇಸ್ ಬುಕ್ ಗೆಳೆಯನಿಂದ ಸಾಮೂಹಿಕ ಅತ್ಯಾಚಾರ

ಮುಜಾಫರ್ ನಗರ : ಫೇಸ್ ಬುಕ್ ಗೆಳೆಯನೊಬ್ಬ ತನ್ನ ಸೋದರನ ಜತೆಗೆ ಸೇರಿ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ...

news

ಮಲ್ಪೆ ಬಂದರಿನಿಂದ ಮೀನುಗಾರರು ನಾಪತ್ತೆ ಪ್ರಕರಣ; ಭಾನುವಾರ ಮೂರೂ ಜಿಲ್ಲೆಯ ಬಂದರುಗಳ ಬಂದ್ ಗೆ ಕರೆ

ಉಡುಪಿ : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಈ ಬಗ್ಗೆ ...