ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರು

ನ್ಯೂಯಾರ್ಕ್, ಶುಕ್ರವಾರ, 13 ಜುಲೈ 2018 (11:54 IST)

ನ್ಯೂಯಾರ್ಕ್ : ಪೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆಗೊಳಿಸಿದ ಸ್ವಂತ ಪರಿಶ್ರಮದಿಂದ ಉದ್ದಿಮೆ ಸ್ಥಾಪಿಸಿದ ಅಮೆರಿಕದ 60  ಮಂದಿ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೂಲದ ಮಹಿಳೆಯರಿಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.

ಲಂಡನ್‌ನಲ್ಲಿ ಹುಟ್ಟಿ ಭಾರತದಲ್ಲಿ ಬೆಳೆದು 2008ರಿಂದ ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ಸಂಸ್ಥೆಯಾದ ಅರಿಸ್ಟಾ ನೆಟ್‌ವರ್ಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಜಯಶ್ರೀ ಅವರು 8 ಸಾವಿರದ 900 ಕೋಟಿ ಆಸ್ತಿ ಹೊಂದುವುದರ ಮೂಲಕ 18ನೇ ಸ್ಥಾನ ಪಡೆದಿದ್ದಾರೆ. ಹಾಗೇ ಐಟಿ ಕನ್ಸಲ್ಟಿಂಗ್‌ ಹಾಗೂ ಔಟ್‌ಸೋರ್ಸಿಂಗ್‌ ಕಂಪನಿಯಾದ ಸಿಂಟೆಲ್‌ ಕಂಪನಿಯ ಉಪಾಧ್ಯಕ್ಷರಾಗಿರುವ ನೀರಜ್‌ ಸೇಥಿ ಅವರು 6 ಸಾವಿರದ 800 ಕೋಟಿ ಆಸ್ತಿ ಹೊಂದಿದ್ದು,21ನೇ ಸ್ಥಾನ ಪಡೆದಿದ್ದಾರೆ.

 

'ಅಮೆರಿಕದಲ್ಲಿರುವ ಮಹಿಳಾ ಉದ್ಯಮಿಗಳು ತಮ್ಮ ಸಾಧನೆ ಮೂಲಕ ಎತ್ತರಕ್ಕೆ ಏರುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು, ಸಿಮೆಂಟ್‌ ಕಂಪನಿಗಳ ತನಕ ಅತ್ಯಂತ ಕಡಿಮೆ ಅವಧಿಯಲ್ಲಿ ಕಂಪನಿ ಸ್ಥಾಪಿಸುವುದರಲ್ಲಿ ಹಿಂದಿಗಿಂತಲೂ ಹೆಚ್ಚಾಗುತ್ತದೆ. ಈ ರೀತಿಯ ಬೆಳವಣಿಗೆಗಳು ದೇಶದ ಬೆಳವಣಿಗೆಗೂ ಸಹಕಾರಿಯಾಗಿದ್ದು, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಂತರಾಗಿ ಹೊರಹೊಮ್ಮುತ್ತಿದ್ದಾರೆ' ಎಂದು ಪೋರ್ಬ್ಸ್‌ ವಿವರಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ನ್ಯೂಯಾರ್ಕ್ ಅಮೆರಿಕ ಶ್ರೀಮಂತ ಮಹಿಳೆ ಲಂಡನ್‌ ಭಾರತ ನೆಟ್‌ವರ್ಕಿಂಗ್‌ America London India Networking Rich Women New York

ಸುದ್ದಿಗಳು

news

ವಿಪತ್ತು ನಿರ್ವಹಣೆ ತರಬೇತಿ ನೀಡಲು ವಿದ್ಯಾರ್ಥಿಯನ್ನು ಕಟ್ಟಡದಿಂದ ತಳ್ಳಿದ ತರಬೇತುದಾರ. ಆಮೇಲೆ ಆಗಿದ್ದೇನು?

ಕೊಯಮತ್ತೂರು : ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳನ್ನು ತಿಳಿಸಲು ಹೋಗಿ ತರಬೇತುದಾರ ...

news

ಸಿದ್ದರಾಮಯ್ಯನವರ ಬಂಗಲೆ ಇದೀಗ ಕೆಜೆ ಜಾರ್ಜ್ ಗೆ

ಬೆಂಗಳೂರು: ಸಿಎಂ ಆಗಿದ್ದಾಗ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ಯನ್ನು ಇದೀಗ ಸಿದ್ದರಾಮಯ್ಯ ತಮ್ಮ ...

news

ಸ್ವಕ್ಷೇತ್ರ ಬಾದಾಮಿಯಲ್ಲಿ ಸಿದ್ದರಾಮಯ್ಯ ಟೂರ್

ಬೆಂಗಳೂರು: ಬಾದಾಮಿ ಕ್ಷೇತ್ರದಲ್ಲಿ ಜನ ತಮ್ಮನ್ನು ಗೆಲ್ಲಿಸಿದ ಖುಷಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಆ ...

news

‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ

ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂದು ...

Widgets Magazine