ವಿಶ್ವ ಪಾರಂಪರಿಕ ನಗರ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ: ಯುನೆಸ್ಕೋ

ಯುನೆಸ್ಕೋ, ಭಾನುವಾರ, 9 ಜುಲೈ 2017 (17:34 IST)

ಅಹ್ಮದಾಬಾದ್:ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ಸಮಿತಿಯ 41ನೇ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ. 
 
2010ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು  ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದರು. ಸುದೀರ್ಘ ಸಭೆ ಮತ್ತು ಚರ್ಚೆಗಳ ಬಳಿಕ ಕೊನೆಗೂ ಅಹ್ಮದಾಬಾದ್ ಅನ್ನು ವಿಶ್ವ ಪರಂಪರೆ ನಗರ ಪಟ್ಟಿಗೆ  ಸೇರ್ಪಡೆಗೊಳಿಸಲಾಗಿದೆ ಎಂದು ಯುನೆಸ್ಕೋದ ಭಾರತ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ತಿಳಿಸಿದ್ದಾರೆ. ಅಹ್ಮದಾಬಾದ್ ನ ನಾಮನಿರ್ದೇಶನವನ್ನು 20 ದೇಶಗಳು ಬೆಂಬಲಿಸಿವೆ.
 
ಈ ಪಟ್ಟಿಯಲ್ಲಿ ಈಗಾಗಲೇ ಪ್ಯಾರಿಸ್, ವಿಯೆನ್ನಾ, ಕೈರೋ, ಬ್ರಸೆಲ್ಸ್, ರೋಮ್ ಮತ್ತು ಎಡಿನ್ಬರ್ಗ್ ನಗರ, ಎರಿಟ್ರಿಯಾ ರಾಜಧಾನಿ ಅಸ್ಮರಾ ನಗರ ಹಾಗೂ ನೇಪಾಳದ ಭಕ್ತಪುರ ಮತ್ತು ಶ್ರೀಲಂಕಾದ ಗಾಲೆ ಕೂಡ ವಿಶ್ವಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.  ಇದರಲ್ಲಿ ಇನ್ನಷ್ಟು ಓದಿ :  
ಅಹ್ಮದಾಬಾದ್ ವಿಶ್ವ ಪಾರಂಪರಿಕ ನಗರಿ ಯುನೆಸ್ಕೋ Unesco Declares Ahmedabad World Heritage City

ಸುದ್ದಿಗಳು

news

ಪತಿಯೇ ನಿಂತು ಪತ್ನಿಗೆ 2ನೇ ಮದುವೆ ಮಾಡಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್

ವಿಚ್ಚೇದಿತ ಪತ್ನಿಗೆ ಮಾಜಿ ಪತಿಯೇ ನಿಂತು ಮದುವೆ ಮಾಡಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ಗುರು ಮಹೋತ್ಸವ ಸಮಾರಂಭ: ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಸಿಎಂ

ಜಾರ್ಖಂಡ್‌ ಮುಖ್ಯಮಂತ್ರಿ ರಘುವರ್‌ ದಾಸ್‌ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ವಿಡಿಯೊ ಈಗ ಸಾಮಾಜಿಕ ...

news

ಮೊಮ್ಮಗ ಪ್ರಜ್ವಲ್`ಗೆ ದೇವೇಗೌಡರು ಹೇಳಿದ ಬುದ್ಧಿಮಾತು

ಪ್ರಜ್ವಲ್ ರೇವಣ್ಣರನ್ನ ಕರೆಯಿಸಿ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ...

news

ವಿಶ್ವದ ಅತಿ ಕಿರಿಯ ವಯಸ್ಸಿನ ಬೋಯಿಂಗ್ 777 ಕಮಾಂಡರ್ ಆದ ಆ್ಯನಿ

ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ...

Widgets Magazine