ಐಸಿಸ್ ಉಗ್ರರ ನೆಲೆಗಳ ಮೇಲೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ

ನಂಗರ್‌ಹಾರ್(ಅಫ್ಘಾನಿಸ್ತಾನ್), ಶುಕ್ರವಾರ, 14 ಏಪ್ರಿಲ್ 2017 (11:49 IST)

ಐಸಿಸ್ ಉಗ್ರರ ನೆಲೆಗಳ ಮೇಲೆ ಅಮೆರಿಕದ ವಾಯುಸೇನೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ ನಡೆಸಿದ್ದು, ಉಗ್ರರ ಮಾರಣಹೋಮ ನಡೆದಿದೆ ಎಂದು ಮೂಲಗಳು ತಿಳಿಸಿವೆ.
 
ಐಸಿಸ್ ಉಗ್ರರು ದಾಳಿ ನಡೆಸಿ ಪರಾರಿಯಾಗಲು ಸುರಂಗ ಮಾರ್ಗಗಳನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಸೇನೆ, ಮದರ್ ಆಫ್ ಆಲ್ ಬಾಂಬ್ಸ್ ಎನ್ನುವ ಜಿಬಿಯು-45 ಬಾಂಬ್ ದಾಳಿ ನಡೆಸಿದೆ.
 
ಐಸಿಸ್ ಉಗ್ರರು ಮತ್ತು ತಾಲಿಬಾನ್ ಉಗ್ರರು ಜಂಟಿಯಾಗಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ವಿರುದ್ಧ ನಡೆಸುತ್ತಿದ್ದ ದಾಳಿಗಳಿಂದ ಆಕ್ರೋಶಗೊಂಡ ಅಮೆರಿಕ ಇದೀಗ ಭಾರಿ ವಿನಾಶಕಾರಿ ಬಾಂಬ್ ದಾಳಿ ನಡೆಸಿದೆ.
 
ಐಸಿಸ್ ಉಗ್ರರು ಶರಣಾಗದಿದ್ದಲ್ಲಿ ಸಿರಿಯಾ ಸೇರಿದಂತೆ ಭೀಕರ ದಾಳಿ ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ನಿರಾಕರಣೆ

ಡೆಹರಾಡೂನ್: ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದು ತಿಂಗಳವರೆಗೆ ವಂದೇ ಮಾತರಂ ಹಾಡುವುದಿಲ್ಲ ಏನು ...

news

ಏನೇ ಆಗಲಿ ವಂದೇ ಮಾತರಂ ಹಾಡಲ್ಲ ಎಂದ ಉತ್ತರಾಖಂಡ್ ಕಾಂಗ್ರೆಸ್!

ಡೆಹ್ರಾಡೂನ್: ಏನೇ ಆಗಲಿ, ಯಾರು ಏನೇ ಹೇಳಲಿ ಯಾವುದೇ ಕಾರಣಕ್ಕೂ ವಂದೇ ಮಾತರಂ ಹಾಡಲ್ಲ ಎಂದು ಉತ್ತರಾಖಂಡ್ ...

news

ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆ: ದೆಹಲಿಗೆ ಆಕಾಂಕ್ಷಿಗಳ ದಂಡು

ಬೆಂಗಳೂರು: ಉಪಚುನಾವಣೆಯ ಭರ್ಜರಿ ಗೆಲುವಿನಿಂದ ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ, ಇಂದು ಸಂಜೆ ದೆಹಲಿಗೆ ...

news

ಬಾಂಬ್‌ನಾಗನ ಮನೆಯಲ್ಲಿ ಕೋಟ್ಯಂತರ ರೂ ಹಣ ಪತ್ತೆ

ಬೆಂಗಳೂರು: ಶ್ರೀರಾಂಪುರದಲ್ಲಿರುವ ಬಾಂಬ್ ನಾಗನ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರು ಕೋಟ್ಯಂತರ ರೂಪಾಯಿ ಹಣ ...

Widgets Magazine