ಸಿರಿಯಾ ವಿರುದ್ಧ ಯುದ್ಧ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

ಅಮೇರಿಕಾ, ಭಾನುವಾರ, 15 ಏಪ್ರಿಲ್ 2018 (13:15 IST)

ಅಮೇರಿಕಾ : ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ತ್ರಿವಳಿ ರಾಷ್ಟ್ರಗಳು ಮಿಲಿಟರಿ ದಾಳಿ ನಡೆಸುವುದಾಗಿ ಹೇಳಿದ  ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇದೀಗ ಸಿರಿಯಾ ವಿರುದ್ಧ ಯುದ್ಧ ಘೋಷಿಸಿದ್ದಾರೆ.


ಅಧ್ಯಕ್ಷ ಬಶರ್ ಅಸಾದ್ ಸಿರಿಯಾದ ಮುಗ್ಧ ಜನರ ಮೇಲೆ ರಾಸಾಯನಿಕ ದಾಳಿ ನಡೆಸಿದ್ದ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಈ ಕೈಗೊಡಿದ್ದಾರೆ. ಸಿರಿಯಾದಲ್ಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಯಾವಾಗ ಬೇಕಾದರೂ ದಾಳಿ ನಡೆಸಲಾಗುವುದು. ಇನ್ನು ಈ ದಾಳಿ ಆದಷ್ಟು ಬೇಗ ಅಥವಾ ಇನ್ನಷ್ಟು ತಡವಾಗಬಹುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಹಾಗೇ ಅಮೆರಿಕ ಸಿರಿಯಾದತ್ತ 12 ಬೃಹತ್ ಯುದ್ಧನೌಕೆಗಳನ್ನು ಟ್ರಂಪ್ ಕಳುಹಿಸಿದ್ದಾರೆ. ಯುಎಸ್‌ಎಸ್ ಹ್ಯಾರಿ ಎಸ್ ಟ್ರೂಮನ್ ಎಂಬ ಅಣ್ವಸ್ತ್ರ ಸಜ್ಜಿತ ಬೃಹತ್ ಹಡಗನ್ನು ಐದು ಇತರ ಹಡಗುಗಳೊಂದಿಗೆ ಯುರೋಪ್ ಹಾಗೂ ಮಧ್ಯ ಪ್ರಾಚ್ಯದತ್ತ ಕಳುಹಿಸಲು ಅಮೆರಿಕದ ನೌಕಾಪಡೆ ಸರ್ವ ಸಿದ್ಧತೆ ನಡೆಸಿದೆ.


ಇದೇ ವೇಳೆ ರಷ್ಯಾ ಮತ್ತು ಇರಾನ್ ರಾಷ್ಟ್ರಗಳ ಮೈತ್ರಿ ಬಗ್ಗೆ ಮಾತನಾಡಿದ ಟ್ರಂಪ್ ಅವರು ಶಾಂತಿ ಮತ್ತು ಸ್ಥಿರತೆ ಕಾಪಾಡಲು ರಷ್ಯಾ ನಾಗರಿಕ ರಾಷ್ಟ್ರಗಳೊಂದಿಗೆ ಕೈ ಜೋಡಿಸುತ್ತದೆಯೋ ಅಥವಾ ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸುತ್ತದೆಯೋ ಶೀಘ್ರ ತೀರ್ಮಾನಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಶ್ ಮತದಾರರಿಗೆ ನೀಡಿದ ಸಲಹೆ ಏನು ಗೊತ್ತಾ…?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ರಾಕಿಂಗ್ ಸ್ಟಾರ್ ಯಶ್ ...

news

ಸಿದ್ದರಾಮಯ್ಯ ಅವರು ಸೋಲುವ ಭಯದಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ- ಹೆಚ್.ಡಿ.ಕುಮಾರಸ್ವಾಮಿ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ...

news

ದೆಹಲಿ ತಲುಪಿದ ಯಡಿಯೂರಪ್ಪ, ಇಂದು ರಾತ್ರಿ ಮತ್ತೊಂದು ಪಟ್ಟಿ ಪ್ರಕಟ!

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ರಾತ್ರಿಯೇ ...

news

ಚುನಾವಣೆಗೆ ಮೊದಲು ರಾಜ್ಯ ಕಾಂಗ್ರೆಸ್ ಗೆ ಬಿಗ್ ಶಾಕ್!

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ಮೊದಲು ಕಾಂಗ್ರೆಸ್ ನಲ್ಲಿ ಆಂತರಿಕ ...

Widgets Magazine
Widgets Magazine