915 ನಾಣ್ಯಗಳನ್ನು ನುಂಗಿದ ಬ್ಯಾಂಕ್‌ಗೆ ಶಸ್ತ್ರಚಿಕಿತ್ಸೆ

ಶ್ರೀರಚಾ, ಮಂಗಳವಾರ, 7 ಮಾರ್ಚ್ 2017 (18:14 IST)

Widgets Magazine

ಮಕ್ಕಳು ನಾಣ್ಯ ನುಂಗಿದ ಬಗ್ಗೆ ಕೇಳಿರುತ್ತೀರಾ. ಆದರೆ ಥೈಲ್ಯಾಂಡ್‌ನಲ್ಲೊಂದು ಸಮುದ್ರದ ಆಮೆ ಬರೊಬ್ಬರಿ 915 ನಾಣ್ಯಗಳನ್ನು ನುಂಗಿದೆ ಎಂದರೆ ನಂಬುತ್ತೀರಾ. ಆದರೆ ಇದು ಸತ್ಯ ಘಟನೆ. 
ಶ್ರೀರಚಾ ನಗರದಲ್ಲಿರುವ ಕೊಳದಲ್ಲಿ ವಾಸವಾಗಿದ್ದ 25 ರ ಪ್ರಾಯದ ಬ್ಯಾಂಕ್‌ ಹೆಸರಿನ ಆಮೆ ದೇಹದಿಂದ ಇತ್ತೀಚಿಗೆ ವೈದ್ಯರು 915 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
 
ಅಷ್ಟಕ್ಕೂ ಇಷ್ಟೊಂದು ನಾಣ್ಯಗಳು ಅದಕ್ಕೆ ಹೇಗೆ ಸಿಕ್ಕವು ಎಂಬ ಪ್ರಶ್ನೆ ನಿಮ್ಮನ್ನು ಕಾಡದಿರದು. ಭಾರತದಲ್ಲಿ ಪುಣ್ಯಸ್ಥಳಕ್ಕೆ ಹೋದಾಗ ಜನರು ಅಲ್ಲಿನ ನದಿಗಳಲ್ಲಿ, ಕೊಳಗಳಲ್ಲಿ ನಾಣ್ಯಗಳನ್ನೆಸೆಯುತ್ತಾರೆ. ಥೈಲ್ಯಾಂಡ್‌ನಲ್ಲೂ ಜನರು ಇಂತಹದೊಂದು ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಯಾತ್ರಾ ಸ್ಥಳವಾಗಿರುವ ಶ್ರೀರಚಾ ನಗರದಲ್ಲಿರುವ ಕೊಳದಲ್ಲಿ ನಾಣ್ಯ ಎಸೆದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಜನರು ನಾಣ್ಯಗಳನ್ನೆಸೆಯುತ್ತಾರೆ. ಅದನ್ನು ಆಹಾರವೆಂದುಕೊಂಡ ಆಮೆ ತನ್ನ ಹೆಸರಿಗೆ ತಕ್ಕಂತೆ ಆ ನಾಣ್ಯಗಳನ್ನು ತನ್ನ ಉದರದಲ್ಲಿ ಜಮಾವಣೆ ಮಾಡಿದೆ.
 
ಇದರಿಂದ ಅದರ ಉದರ 5 ಕೆಜಿ ಹೆಚ್ಚಾಗಿ ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ನಡೆಯಲು ಕಷ್ಟ ಪಡುತ್ತಿದ್ದ ಆಮೆಯನ್ನು ಪಶು ವೈದ್ಯರು ಪರೀಕ್ಷಿಸಿದಾಗ ನಾಣ್ಯಗಳನ್ನು ನುಂಗಿರುವುದು ಬೆಳಕಿಗೆ ಬಂದಿದ್ದು ಇತ್ತೀಚಿಗೆ ಸತತ ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅದರ ಉದರದಿಂದ ನಾಣ್ಯಗಳನ್ನು ಹೊರತೆಗೆಯಲಾಗಿದೆ.
 
ಸದ್ಯ ಆಮೆ ಚೇತರಿಸಿಕೊಳ್ಳುತ್ತಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
15 ನಾಣ್ಯ ಬ್ಯಾಂಕ್‌ ಶಸ್ತ್ರಚಿಕಿತ್ಸೆ 1 Vets Turtle's Stomach 000 'good Luck' Coin

Widgets Magazine

ಸುದ್ದಿಗಳು

news

ಉತ್ತರಪ್ರದೇಶದ ಲಕ್ನೋದಲ್ಲಿ ಶಂಕಿತ ಉಗ್ರನಿಂದ ಫೈರಿಂಗ್

ಲಕ್ನೋ: ಠಾಕೂರ್‌ಗಂಜ್‌ನಲ್ಲಿ ಶಂಕಿತ ಉಗ್ರ ಮತ್ತು ಭಯೋತ್ಪಾದನೆ ನಿಗ್ರಹ ದಳದ ಮಧ್ಯೆ ಗುಂಡಿನ ಚಕಮಕಿ ...

news

7 ಅಪ್ರಾಪ್ತ ಅನಾಥ ಬಾಲಕಿಯರ ಮೇಲೆ 2 ತಿಂಗಳು ಸಾಮೂಹಿಕ ಅತ್ಯಾಚಾರ

7 ಮಂದಿ ಅಪ್ರಾಪ್ತ ಬಾಲಕಿಯರ ಮೇಲೆ 2 ತಿಂಗಳು ಅತ್ಯಾಚಾರ ಎಸಗಿದ ಹೇಯ ಘಟನೆ ಕೇರಳದಲ್ಲಿ ನಡೆದಿದೆ.

news

ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ 8 ಕಾಮುಕರ ಬಂಧನ

ಹಳಿಯಾಳ: ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದ ಒಂಬತ್ತು ಕಾಮುಕರ ಪೈಕಿ ಎಂಟು ಕಾಮುಕರನ್ನು ಬಂಧಿಸಿ ನ್ಯಾಯಾಂಗದ ...

news

ಮಾಜಿ ಸಚಿವ, ಹಿರಿಯ ನಟ ಅಂಬರೀಶ್‌ಗೆ ಬಿಜೆಪಿ ಗಾಳ

ಬೆಂಗಳೂರು: ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರೊಂದಿಗೆ ಬಿಜೆಪಿ ಸೇರ್ಪಡೆ ಕುರಿತಂತೆ ಬಿಜೆಪಿ ಮುಖಂಡ ...

Widgets Magazine