ಅಮೆರಿಕಾದ 755 ರಾಯಭಾರಿಗಳಿಗೆ ದೇಶ ತೊರೆಯುವಂತೆ ರಷ್ಯಾ ಆದೇಶ

ಮಾಸ್ಕೊ, ಸೋಮವಾರ, 31 ಜುಲೈ 2017 (10:49 IST)

ಮಾಸ್ಕೋ: ರಷ್ಯಾದಲ್ಲಿರುವ ಸುಮಾರು 755 ಅಮೆರಿಕ ರಾಯಭಾರಿಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದೇಶ ತೊರೆಯುವಂತೆ ಆದೇಶ ನೀಡಿದ್ದಾರೆ.
 
ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಕಠಿಣಗೊಳಿಸುವ ವಿಧೇಯಕಕ್ಕೆ ಅಮೆರಿಕ ಸೆನೆಟ್ ಅನುಮೋದನೆ ನೀಡಿರುವ ಹಿನ್ನಲೆಯಲ್ಲಿ ಅಮೆರಿಕ ವಿರುದ್ಧ ಕೆಂಡಾಮಂಡಲವಾಗಿರುವ ವ್ಲಾಡಿಮಿರ್ ಪುಟಿನ್, ತಮ್ಮ ದೇಶದಲ್ಲಿರುವ 755 ಅಮೆರಿಕ  ರಾಜತಾಂತ್ರಿಕರನ್ನು ದೇಶದಿಂದ ಹೊರ ಹಾಕುವ ನಿರ್ಧಾರಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಮೆರಿಕ ರಾಯಭಾರಿಗಳು ತಕ್ಷಣ ರಷ್ಯಾದಿಂದ  ನಿರ್ಗಮಿಸಬೇಕೆಂದು ಪುಟಿನ್ ತಾಕೀತು ಮಾಡಿದ್ದಾರೆ.
 
ರಷ್ಯಾ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪ ಹಾಗೂ 2014ರಲ್ಲಿ ಕ್ರೀಮಿಯಾದ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಆ ದೇಶದ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರುವ ವಿಧೇಯಕವನ್ನು  ಅಮೆರಿಕ ಸೆನೆಟ್ ಗುರುವಾರ ಬಹುಮತದೊಂದಿಗೆ ಅಂಗೀಕರಿಸಿತ್ತು.
 ಇದರಲ್ಲಿ ಇನ್ನಷ್ಟು ಓದಿ :  
ರಷ್ಯಾ ಅಮೆರಿಕಾ ವ್ಲಾಡಿಮಿರ್ ಪುಟಿನ್ Move 755 Us Diplomats Vladimir Putin

ಸುದ್ದಿಗಳು

news

ಭ್ರಷ್ಟಾಚಾರ ತಡೆಗೆ ಮೋದಿ ಸರ್ಕಾರದ ಹೊಸ ಐಡಿಯಾ!

ನವದೆಹಲಿ: ನೋಟು ನಿಷೇಧ, ಜಿಎಸ್ ಟಿ ಸೇರಿದಂತೆ ಕಪ್ಪು ಹಣ, ಭ್ರಷ್ಟಾಚಾರ ನಿಗ್ರಹಕ್ಕೆ ಸಾಕಷ್ಟು ಕ್ರಮ ...

news

ಅಬ್ದುಲ್ ಕಲಾಂ ಸಮಾಧಿ ಬಳಿ ಭಗವದ್ಗೀತೆ ಪುಸ್ತಕ ವಿವಾದಕ್ಕೆ ಕಾರಣವಾಯ್ತು

ರಾಮೇಶ್ವರಂ: ದಿವಂಗತ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಬದುಕಿದ್ದಾಗ ಸರ್ವಧರ್ಮವೂ ...

news

ದೇಶದ ಈ 29 ನಗರಗಳಲ್ಲಿ ಯಾವಾಗ ಬೇಕಾದರೂ ಭೂಕಂಪವಾಗಬಹುದು..!

ದೆಹಲಿ ಮತ್ತು 9 ರಾಜ್ಯಗಳ ರಾಜಧಾನಿಗಳು ಸೇರಿ ದೇಶದ 29 ನಗರಗಳು ಮತ್ತು ಪಟ್ಟಣಗಳು ತೀವ್ರ ಮತ್ತು ಅತೀ ತೀವ್ರ ...

news

ಮತದಾನದವರೆಗೂ ಗುಜರಾತ್ ಶಾಸಕರು ಕರ್ನಾಟಕದಲ್ಲೇ?

ಬೆಂಗಳೂರು: ಗುಜರಾತ್ ನಲ್ಲಿ ರಾಜ್ಯ ಸಭೆ ಚುನಾವಣೆ ನಡೆಯುವವರೆಗೂ ಅಲ್ಲಿನ ಶಾಸಕರಿಗೆ ಬೆಂಗಳೂರೇ ...

Widgets Magazine