ಸಿಕ್ಕಿಂ ಗಡಿಯಲ್ಲಿ ಯುದ್ಧದ ವಾತಾವರಣ!

NewDelhi, ಸೋಮವಾರ, 3 ಜುಲೈ 2017 (08:15 IST)

Widgets Magazine

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಚೀನಾ ಪಡೆಗಳು ಪದೇ ಪದೇ ಖ್ಯಾತೆ ತೆಗೆಯುತ್ತಿರುವುದರಿಂದ ಕೆರಳಿರುವ ಭಾರತ ತನ್ನ ಯೋಧರನ್ನು ಯುದ್ಧ ಸನ್ನದ್ಧ ರೀತಿಯಲ್ಲಿ ಜಮಾವಣೆ ಮಾಡಿದೆ.


 
1962 ರ ನಂತರ ಈ ಗಡಿ ಭಾಗದಲ್ಲಿ ಭಾರತೀಯ ಸೈನಿಕರನ್ನು ಜಮಾವಣೆ ಮಾಡಿದ್ದು ಇದೇ ಮೊದಲಾಗಿದೆ. 55 ವರ್ಷಗಳ ಹಿಂದೆ ಈ ಗಡಿ ಭಾಗಕ್ಕಾಗಿ ಉಭಯ ದೇಶಗಳ ನಡುವೆ ಯುದ್ಧವೇ ನಡೆದಿತ್ತು. ಇದೀಗ ಮತ್ತೆ ಭಾರೀ ಸಂಖ್ಯೆಯಲ್ಲಿ ಇಲ್ಲಿ ಸೈನಿಕರ ಜಮಾವಣೆ ಮಾಡಲಾಗಿದೆ.
 
ಕಳೆದ ವಾರ ಚೀನಾ ಪಡೆಗಳು ಭಾರತೀಯ ಸೇನಾ ಬಂಕರ್ ನ್ನು ನಾಶ ಮಾಡಿದ ಮೇಲೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹೆಚ್ಚಿದೆ. ಅಲ್ಲದೆ ಇತ್ತೀಚೆಗೆ ಒನ್ ರೋಡ್, ಒನ್ ಬೆಲ್ಟ್ ಎಂಬ ಚೀನಾದ ಯೋಜನೆಗೆ ಭಾರತ ಕೈಜೋಡಿಸದೇ ಇರುವುದು, ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಗೆ ಭಾರತದ ನಕಾರಾತ್ಮಕ ಧೋರಣೆ ಆ ದೇಶವನ್ನು ಮತ್ತಷ್ಟು ಕೆರಳಿಸಿದೆ.
 
ಈ ಹಿನ್ನಲೆಯಲ್ಲಿ ಗಡಿಯಲ್ಲಿ ಮತ್ತಷ್ಟು ತಗಾದೆ ತೆಗೆಯುತ್ತಿದೆ. ಭಾರತ ಸೈನಿಕರನ್ನು ಜಮಾವಣೆ ಮಾಡಿದ ಬೆನ್ನಲ್ಲೇ ಚೀನಾ ಕೂಡಾ ಸಕಲ ಸನ್ನದ್ಧವಾಗಿದೆ ಎಂದು ಚೀನಾ ಮೂಲಗಳು ತಿಳಿಸಿವೆ. ಅಲ್ಲದೆ, ಭಾರತ ಮೊದಲು ತನ್ನ ಸೈನಿಕರನ್ನು ಹಿಂಪಡೆಯಲಿ. ಇಲ್ಲದಿದ್ದರೆ, ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಡಬಹುದು ಎಂದು ಚೀನಾ ಎಚ್ಚರಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಹಿಳಾ ಕೈದಿಯ ಗುಪ್ತಾಂಗದಲ್ಲಿ ಲಾಠಿ ತೂರಿದ ಜೈಲು ಸಿಬ್ಬಂದಿ

ಮುಂಬೈ: ಬೈಕುಲ್ಲಾ ಜೈಲಿನ ಅಧಿಕಾರಿಗಳು ಚಿತ್ರಹಿಂಸೆ ನೀಡಿದ್ದಲ್ಲದೇ ಗುಪ್ತಾಂಗದಲ್ಲಿ ಲಾಠಿ ತೂರಿದ ...

news

ವಿಮಾನ ನಿಲ್ದಾಣದ ಆವರಣದಲ್ಲಿಯೇ ಬಿಜೆಪಿ ಸಭೆ ನಡೆಸಿದ ಅಮಿತ್ ಶಾ

ಗೋವಾ: ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಮ್ಮುಖದಲ್ಲಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ವಿಮಾನ ...

news

ಪ್ರತಿಭಟನೆಯಿಂದ ವಿಚಲಿತನಾಗಿಲ್ಲ, ಪರಧರ್ಮ ದ್ವೇಷದ ಪರಮಾವಧಿ ಇದು : ಪೇಜಾವರ ಶ್ರೀ ಗುಡುಗು

ಉಡುಪಿ: ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆ ರಾಜ್ಯದಾದ್ಯಂತ ನಡೆಸುತ್ತಿರುವ ಪ್ರತಿಭಟನೆಯಿಂದ ...

news

ಟ್ರಾಫಿಕ್ ರೂಲ್ಸ್ ಬ್ರೇಕ್: ಬಿಜೆಪಿ ನಾಯಕನಿಗೆ ದಂಡ ವಿಧಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಎತ್ತಂಗಡಿ

ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ...

Widgets Magazine