ಕಿಮ್ ಜಾಂಗ್-ಉನ್ ಜೊತೆ ಚರ್ಚೆ ನಡೆಸುವ ಕುರಿತು ಈಗಲೂ ಎದುರು ನೋಡುತ್ತಿದ್ದೇವೆ - ಟ್ರಂಪ್

ಅಮೆರಿಕಾ, ಸೋಮವಾರ, 28 ಮೇ 2018 (17:57 IST)

ಅಮೇರಿಕಾ : ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಐತಿಹಾಸಿಕ ಶೃಂಗಸಭೆ ಮಾತುಕತೆ ಜೂನ್ 12ಕ್ಕೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಜೂನ್ 12ರಂದೇ ಸಿಂಗಪುರ್‍ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಜೊತೆ ಚರ್ಚೆ ನಡೆಸುವ ಸಾಧ್ಯತೆಯನ್ನು ತಾವು ಈಗಲೂ ಎದುರು ನೋಡುತ್ತಿರುವುದಾಗಿ ಅಮೇರಿಕಾದ ಟ್ರಂಪ್ ಅವರು ಹೇಳಿದ್ದಾರೆ.


ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್ ಅವರು,’ ಇದು ಆಶಾದಾಯಕ ಬೆಳವಣಿಗೆಯಾಗಿದೆ. ಸಿಂಗಪುರ್‍ನಲ್ಲಿ ಜೂನ್ 12ರತ್ತ ನಾವು ಎದುರು ನೋಡುತ್ತಿದ್ದೇವೆ. ಅದು ಬದಲಾವಣೆಯಾಗುವುದಿಲ್ಲ. ಈ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಮುಂದೆ ಏನಾಗುತ್ತದೋ ನೋಡೋಣ’ ಎಂದು ಹೇಳಿದ್ದಾರೆ.


‘ಉತ್ತರ ಕೊರಿಯಾ ಜೊತೆ ಚಾರಿತ್ರಿಕ ಶೃಂಗಸಭೆ ವಿಷಯದಲ್ಲಿ ನಾವು ಉತ್ತಮವಾದುದನ್ನೇ ಮಾಡುತ್ತಿದ್ದೇವೆ. ಅದು ನಿರೀಕ್ಷಿತ ರೀತಿಯಲ್ಲಿ ಪ್ರಗತಿಯಲ್ಲಿದೆ. ಉತ್ತರ ಕೊರಿಯಾ ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣವಾಗಬೇಕು ಎಂಬುದನ್ನು ನಾವು ಬಯಸುತ್ತೇವೆ. ಅದು ಸಫಲವಾದರೆ ಅದು ಆ ದೇಶಕ್ಕೂ ಒಳ್ಳೆಯದು, ನೆರೆಹೊರೆ ರಾಷ್ಟ್ರಗಳ ಹಿತಾಸಕ್ತಿಗೂ ಪೂರಕ’ ಎಂದು ಟ್ರಂಪ್ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಬಂದ್‌ಗೆ ಜೆಡಿಎಸ್‌ನಿಂದ ಗುಲಾಬಿ ಕೊಡುಗೆ

ಮೈಸೂರು: ಬಿಜೆಪಿ ನೀಡಿದ್ದ ಬಂದ್ ಕರೆಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ವ್ಯಾಪಾರಸ್ಥರಿಗೆ ...

news

ಸಿಎಂ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು-ಆರ್. ಅಶೋಕ್

ಬೆಂಗಳೂರು : ನಾನು ರಾಜ್ಯದ ಜನತೆ ಮುಲಾಜಿನಲ್ಲಿ ಇಲ್ಲ, ಬದಲಿಗೆ ಕಾಂಗ್ರೆಸ್ ನ ಮುಲಾಜಿನಲ್ಲಿದ್ದೇನೆ ಎಂಬ ...

news

ಖಾತೆ ಹಂಚಿಕೆಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಕಿತ್ತಾಟ

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಬಹುಮತದೊಂದಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ...

news

ಖಾತೆ ಹಂಚಿಕೆ ತಡವಾಗುತ್ತಿರುವುದರ ನಿಜ ಕಾರಣ ಏನು ಗೊತ್ತಾ?!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಇಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ...

Widgets Magazine