ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಕೊಡಲಿರುವ ಉಡುಗೊರೆ ಏನು ಗೊತ್ತಾ...?

ಇಸ್ರೇಲ್, ಶುಕ್ರವಾರ, 5 ಜನವರಿ 2018 (11:32 IST)

ಇಸ್ರೇಲ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೆಲ್ ಪ್ರಧಾನಿ ಬೆಂಜಮಿನ್  ನೇತನ್ಯಾಹು  ಅವರು ನೀರಿನಲ್ಲಿರುವ ಉಪ್ಪಿನಾಂಶವನ್ನು ಬೇರ್ಪಡಿಸಿ ಶುದ್ಧಿಕರಿಸುವ ವಾಹನವೊಂದನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

 
ಕಳೆದ ಜುಲೈನಲ್ಲಿ  ಮೋದಿ ಅವರು ಇಸ್ರೆಲ್ ದೇಶಕ್ಕೆ ಭೇಟಿ ನೀಡಿದಾಗ ಓಲ್ಗಾ ಸಮುದ್ರ ತೀರದಲ್ಲಿ ಈ ವಾಹನದಲ್ಲೇ ಕುಳಿತು ಸಂಚರಿಸಿದ್ದು, ಇದನ್ನೆ ಉಡುಗೊರೆಯಾಗಿ ರಂದು ಭಾರತದ ಪ್ರವಾಸದ ವೇಳೆ ನೇತನ್ಯಾಹು ಅವರು ಮೋದಿಯವರಿಗೆ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 
ಇಸ್ರೆಲ್ ನ ಓಲ್ಗಾ ಸಮುದ್ರ ತೀರದಲ್ಲಿರುವ ನೀರಿನಿಂದ ಲವಣಾಂಶ ಬೇರ್ಪಡಿಸುವ ಘಟಕಕ್ಕೆ ಮೋದಿ ಅವರು ಭೇಟಿ ನೀಡಿದಾಗ ಪಡೆದ ಮಾಹಿತಿ ಪ್ರಕಾರ ಈ ವಾಹನದ ಬೆಲೆ ಸುಮಾರು ರೂ. 70ಲಕ್ಷ ಎಂಬುದಾಗಿ ತಿಳಿದಿದೆ. ಇದನ್ನು ಉತ್ತಮ ಗುಣಮಟ್ಟದ ಶುದ್ಧ ನೀರನ್ನು ಉತ್ಪಾದಿಸುವ ಉದ್ದೇಶದಿಂದ ತಯಾರಿಸಲಾಗಿದೆ. ಇದು ದಿನಕ್ಕೆ 20 ಸಾವಿರ ಲೀಟರ್ ಉಪ್ಪು ನೀರು ಹಾಗು 80 ಸಾವಿರ ಲೀಟರ್ ಕಲುಷಿತ ನೀರನ್ನು ಶುಚಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.


ಇದು ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳಾದ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಇಸ್ರೇಲ್ ಪ್ರಧಾನಿ ನರೇಂದ್ರ ಮೋದಿ ಉಡುಗೊರೆ ಜನವರಿ 14 ಪ್ರವಾಸ ಉಪ್ಪು ನೀರು ವಿಶೇಷ ಸುದ್ದಿಗಳು Gift Janavary 14 Tour News Salt Water Narendra Modi Isreal Prime Minister

ಸುದ್ದಿಗಳು

news

ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿ.ಎಂ ಸಿದ್ದರಾಮಯ್ಯ ಕಿಡಿಕಾರಿದ್ದು ಯಾಕೆ ಗೊತ್ತಾ…?

ಹಾಸನ : ಮಂಗಳೂರಿನ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್ ಹತ್ಯೆ ಪ್ರಕರಣದ ಹಿಂದೆ ಸಚಿವ ರಮಾನಾಥ ರೈ ಅವರ ...

news

ಕೊನೆಗೂ ದೀಪಕ್ ಹತ್ಯೆ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ

ಬೆಂಗಳೂರು: ಆಗಾಗ ಬಲಪಂಥೀಯರ ವಿರುದ್ಧ ಕಿಡಿ ಕಾರುವ ಪ್ರಕಾಶ್ ರೈ ಇದೀಗ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ...

news

ಅಂತಿಮ ದರ್ಶನಕ್ಕೆ ಬರದ ಶಾಸಕರ ಪರಿಹಾರ ಹಣವೂ ಬೇಡ ಎಂದ ದೀಪಕ್ ಕುಟುಂಬ

ಮಂಗಳೂರು: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಲು ಬಾರದ ...

news

ಸರ್ಕಾರಿ ಕಾರ್ಯಕ್ರಮ ಸ್ವಂತ ಹಣದಲ್ಲಿ ಮಾಡಬೇಕಾ- ಸಿದ್ದರಾಮಯ್ಯ ಪ್ರಶ್ನೆ

ಸರ್ಕಾರಿ ಕಾರ್ಯಕ್ರಮಗಳನ್ನು ಸರ್ಕಾರದ ಹಣದಲ್ಲಿ ಮಾಡದೇ, ಸ್ವಂತ ಹಣದಲ್ಲಿ ಮಾಡಬೇಕಾ ಎಂದು ಮುಖ್ಯಮಂತ್ರಿ ...

Widgets Magazine