ಕಾಶ್ಮಿರ ಗಡಿಯೊಳಗೆ ನುಗ್ಗುತ್ತೇವೆ ಏನ್‌ ಮಾಡ್ತೀರಾ?: ಪ್ರಧಾನಿ ಮೋದಿಗೆ ಚೀನಾ ನೇರ ಎಚ್ಚರಿಕೆ

ಬೀಜಿಂಗ್, ಮಂಗಳವಾರ, 8 ಆಗಸ್ಟ್ 2017 (19:34 IST)

Widgets Magazine

ಡೊಕ್ಲಾಮ್‌ನಲ್ಲಿ ಎರಡು ಸೇನಾಪಡೆಗಳು ಒಂದೇ ಬಾರಿಗೆ ಹಿಂಪಡೆಯಬೇಕು ಎನ್ನುವ ಭಾರತದ ಮನವಿಯನ್ನು ತಿರಸ್ಕರಿಸಿದ ಚೀನಾ, ಗಡಿಯೊಳಗೆ ನುಗ್ಗುತ್ತೇವೆ ದೆಹಲಿ ಸರಕಾರ ಏನು ಮಾಡುತ್ತದೆ ಎಂದು ಚೀನಾ ತನ್ನ ಅಧಿಕಪ್ರಸಂಗತೆಯನ್ನು ಮೆರೆದಿದೆ. 
ಸಿಕ್ಕಿಂ ವಲಯದ ಡೋಕ್ಲಾಮ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳು ಪರಸ್ಪರ ಮುಖಾಮುಖಿಯಾಗಿವೆ. 50 ದಿನಗಳಿಂದ ಭಾರತೀಯ ಸೈನಿಕರು ಚೀನದ ಸೇನೆಯು ಈ ಪ್ರದೇಶದಲ್ಲಿ ರಸ್ತೆಯನ್ನು ನಿರ್ಮಿಸದಂತೆ ತಡೆದಿದ್ದಾರೆ.
 
ಚೀನಾ ದೇಶದ ಗಡಿಯೊಳಗೆ ಭಾರತ ರಸ್ತೆಯನ್ನು ನಿರ್ಮಿಸುತ್ತಿದೆ. ಕೂಡಲೇ ಭಾರತೀಯ ಸೇನೆ ವಿವಾದಿತ ಡೊಕ್ಲಾಮ್ ಪ್ರದೇಶದಿಂದ ನಿರ್ಗಮಿಸಬೇಕು ಎಂದು ಒತ್ತಾಯಿಸಿದೆ. ಡೊಕ್ಲಾಮ್ ಪ್ರದೇಶ ಭೂತಾನ್‌ಗೆ ಸೇರಿದೆ ಎಂದು ಭೂತಾನ್ ಸರಕಾರ ಹೇಳಿದೆ. ಆದರೆ, ಚೀನಾ ತನ್ನದೆಂದು ವಾದಿಸುತ್ತಿದೆ. ಚೀನಾದೊಂದಿಗೆ ನಮ್ಮದು ಯಾವುದೇ ವೈರತ್ವವಿಲ್ಲ ಎಂದು ತಿಳಿಸಿದೆ. 
 
 ಡೊಕ್ಲಾಮ್ ಗಡಿಯಲ್ಲಿ ಒಬ್ಬನೇ ಒಬ್ಬ ಭಾರತೀಯ ಸೈನಿಕ ಇದ್ದರೆ ಅದು ನಮ್ಮ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವ್ಯವಹಾರಗಳ ಉಪ ನಿರ್ದೇಶಕ ವಾಂಗ್ ವೆನ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎಐಸಿಸಿ ಕಚೇರಿಯಲ್ಲಿ ಸೋನಿಯಾ ನೇತೃತ್ವದಲ್ಲಿ ತುರ್ತುಸಭೆ

ನವದೆಹಲಿ: ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ತುರ್ತುಸಭೆ ...

news

ಇದು ಜಗತ್ತನ್ನೇ ಬೆಚ್ಚಿ ಬೀಳಿಸುವ ಸುದ್ದಿ ಸ್ಫೋಟ..!

ಜೆನಿಟಿಕಲ್ ವ್ಯತ್ಯಾಸದಿಂದ ಹುಟ್ಟುತ್ತಿರುವ ಮಕ್ಕಳಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಲಿಂಗ ...

news

ಕಂತೆ ಕಂತೆ ನೋಟುಗಳ ಮೇಲೆ ವರ ಮಹಾಲಕ್ಷ್ಮೀ ಪೂಜೆ

ವರ ಮಹಾಲಕ್ಷ್ಮೀ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಹಣವನ್ನ ದೇವರ ಮುಂದೆ ಇಟ್ಟು ಪೂಜೆ ಮಾಡುವುದು ...

news

ಉಪಮಾ ಬಾಕ್ಸ್‌ನಲ್ಲಿ ದುಬೈಗೆ 1.3 ಕೋಟಿ ವಿದೇಶಿ ಕರೆನ್ಸಿ ಸಾಗಾಣೆ: ಇಬ್ಬರು ಅರೆಸ್ಟ್

ನವದೆಹಲಿ: ಬಿಸಿಯಾಗಿಡುವ ಬಾಕ್ಸ್‌ನಲ್ಲಿ ಉಪ್ಪಿಟ್ಟು ತಿಂಡಿಯನ್ನು ಸಾಗಿಸುತ್ತಿರುವಾಗ ಕಸ್ಟಮ್ಸ್ ...

Widgets Magazine Widgets Magazine