ತನ್ನ ಮುಂದೆ ಬೇರೊಬ್ಬಳನ್ನು ಹೊಗಳಿದಕ್ಕೆ "ಅದನ್ನೇ" ಕಚಕ್ ಎನ್ನಿಸಿದ ಪ್ರಿಯತಮೆ

Rajesh patil 

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (19:15 IST)

ಕಝಕಿಸ್ತಾನ್ : ತನ್ನ ಪ್ರೇಯಸಿಯ ಎದುರಲ್ಲಿ ಇನ್ನೊಬ್ಬ ಮಹಿಳೆಯನ್ನು ಹೊಗಳಲು ಹೋಗಿ ತನ್ನ ವೃಷಣವನ್ನು ಕಳೆದುಕೊಂಡ ಘಟನೆ ಕಝಕಿಸ್ತಾನ್‌ದಲ್ಲಿ ನಡೆದಿದೆ.
ಹೌದು ವೃತ್ತಿಯಿಂದ ಬ್ಯೂಟಿಶಿಯನ್ ಆಗಿರುವ ಆರೋಪಿಯಾದ 36 ವರ್ಷದ ಝನ್ನಾ ನರ್ಝಾನೊವಾ, ತನ್ನ ತನ್ನ ಸಹೋದರಿಯ ಮೊಬೈಲ್‌ಗೆ ಬೇರೊಬ್ಬ ಮಹಿಳೆಯ ಫೋಟೋವನ್ನು ಕಳುಹಿಸಿ ಅವಳು ನೋಡಲು ಆಕರ್ಷಕವಾಗಿದ್ದಾಳೆ ಎಂದು ಕಾಮೆಂಟ್ ಮಾಡಿರುವುದು ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
 
ಇದರಿಂದ ಕೋಪಗೊಂಡಿರುವ ಆಕೆ ತನ್ನ ಪ್ರಿಯಕರನನ್ನು ಶೃಂಗಾರಕ್ಕೆ ಪ್ರಲೋಭಿಸಿ ಮೊದಲಿಗೆ ಆತನಿಗೆ ನಿದ್ದೆ ಮಾತ್ರೆ ನಂತರ ಅರಿವಳಿಕೆಯ ಚುಚ್ಚುಮದ್ದು ನೀಡಿ ಅವನ ವೃಷಣಗಳನ್ನು ಕತ್ತರಿಸಿದ್ದಾಳೆ ನಂತರ ಹತ್ತಿರವಿರುವ ಆಸ್ಪತ್ರೆಯಲ್ಲಿ ಆತನನ್ನು ದಾಖಲಿಸಿದ್ದು ಇದನ್ನು ಪರೀಕ್ಷಿಸಿದ ವೈದ್ಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಅಷ್ಟೇ ಅಲ್ಲ ಹಾನಿಗೊಳಗಾದ ವ್ಯಕ್ತಿಯ ಆ ಭಾಗವನ್ನು ಮರುಜೋಡಿಸಲು ವೈದ್ಯರು ಹಲವಾರು ಪ್ರಯತ್ನಗಳ ನಂತರವೂ ಗಂಭೀರವಾದ ಗಾಯಗಳಾಗಿರುವ ಕಾರಣ ಅದು ವಿಫಲವಾಗಿದೆ. ವೈದ್ಯರ ಪ್ರಕಾರ ಶಿಶ್ನಕ್ಕೆ ಯಾವುದೇ ಹಾನಿ ಆಗಿಲ್ಲ ಆದ್ದರಿಂದ ಅವರು ಸಂಭೋಗ ನಡೆಸಬಹುದಾಗಿದ್ದು, ವೃಷಣಗಳು ಗಂಭೀರವಾಗಿ ಹಾನಿಗೊಳಗಾಗಿರುವ ಕಾರಣ ಮಕ್ಕಳನ್ನು ಪಡೆಯಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಯ ಅಪರಾಧ ಸಾಬೀತಾದ ಪಕ್ಷದಲ್ಲಿ, ಕನಿಷ್ಟ 3 ರಿಂದ 6 ವರ್ಷಗಳ ಸೆರೆವಾಸ ಆಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಅಸೂಯೆಯಿಂದ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ ಎಂದೇ ಹೇಳಬಹುದು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಾತ್ಮಗಾಂಧಿ ಕನಸು ನನಸಾಗಿಸಿ ಮೋದಿ– ಸಂಸದ

ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತ ಕನಸನ್ನು ನರೇಂದ್ರ ಮೋದಿ ಸರ್ಕಾರ ಮೂರೂವರೆ ವರ್ಷಗಳಲ್ಲಿ ನನಸು ಮಾಡಿದೆ ...

news

ಚುನಾವಣೆ ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಅಗ್ನಿ ಪರೀಕ್ಷೆ– ಅನಿಲ್ ಲಾಡ್

ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೂ ಅಗ್ನಿ ಪರೀಕ್ಷೆಯಾಗಿದೆ ಎಂದು ...

news

ಡಿಕೆ ಶಿವಕುಮಾರ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ– ಸುರೇಶಬಾಬು

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗಿಮಿಕ್ ರಾಜಕಾರಣ ಮಾಡುತ್ತಿದ್ದು, ಅವರು ಮಾನಸಿಕ ಸ್ಥಿಮಿತತೆ ...

news

ನಟಿ ರಮ್ಯಾಗೆ ಸಿಎಂ ಸಿದ್ದರಾಮಯ್ಯ ಪರೋಕ್ಷ ಟಾಂಗ್!

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ...

Widgets Magazine
Widgets Magazine