ದಕ್ಷಿಣ ಕೋರಿಯಾದ ಸ್ಯಾಮ್ಸಂಗ್ ಕಂಪೆನಿ ತನ್ನ ನೌಕರರಲ್ಲಿ ಕ್ಷಮೆ ಕೇಳಿದ್ಯಾಕೆ?

ದಕ್ಷಿಣ ಕೋರಿಯಾ, ಬುಧವಾರ, 28 ನವೆಂಬರ್ 2018 (13:57 IST)

ದಕ್ಷಿಣ ಕೋರಿಯಾ : ದಕ್ಷಿಣ ಕೋರಿಯಾದ ಮೊಬೈಲ್ ತಯಾರಿಕಾ ಕಂಪನಿ ಹಾಗೂ ಚಿಪ್ ತಯಾರಕ ಕಂಪನಿ ಸ್ಯಾಮ್ಸಂಗ್ ಕೊನೆಗೂ ಕ್ಯಾನ್ಸರ್ ಪೀಡಿತ ನೌಕರರಿಗೆ ಪರಿಹಾರ ಘೋಷಣೆ ಮಾಡಿದೆ.


ಕಳೆದ ಕೆಲವು ವರ್ಷಗಳ ಹಿಂದೆ ಸ್ಯಾಮ್ಸಂಗ್ ಡಿಸ್ಪ್ಲೇ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ 240 ಕಾರ್ಮಿಕರು ಒಂದೇ ಬಾರಿ ಅನಾರೋಗ್ಯಕ್ಕೊಳಗಾಗಿದ್ದರು. ಅವರನ್ನು ಪರೀಕ್ಷೆ ಮಾಡಿದ ನಂತರ  ಕಾರ್ಮಿಕರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂಬ ಸಂಗತಿ ಹೊರ ಬಿದ್ದಿತ್ತು. ಆಗ ಕಾರ್ಮಿಕರು ಹಾಗೂ ಸಿಬ್ಬಂದಿ ಕಂಪನಿ ನಿರ್ಲಕ್ಷ್ಯದಿಂದ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಆರೋಪ ಮಾಡಿದ್ದರು. ಆದರೆ ಇದನ್ನು ಒಪ್ಪಿಕೊಳ್ಳಲು ಕಂಪೆನಿ ತಯಾರಿರಲಿಲ್ಲ.


ಆದರೆ ಇದೀಗ ಹೊರಬಿದ್ದ ತನಿಖಾ ವರದಿಯ ಪ್ರಕಾರ ಕಾರ್ಖಾನೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಅಪಾಯಕಾರಿ ವಿಕಿರಣಗಳು ನೌಕರರನ್ನು ಕ್ಯಾನ್ಸರ್ ಗೆ ನೂಕಿವೆ ಎಂಬುದು ಬಹಿರಂಗವಾಗಿತ್ತು. ಈಗಾಗಲೇ 80 ಮಂದಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಇದೀಗ ಕಂಪನಿ ಘಟನೆ ಬಗ್ಗೆ ತಪ್ಪೊಪ್ಪಿಕೊಂಡು, ಕ್ಷಮೆ ಕೇಳಿದೆ, ಅಲ್ಲದೇ ಕಾರ್ಮಿಕರಿಗೆ 94 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಗರಂ

ಹಾಸನ : ನಟ ವಿಷ್ಣುವರ್ಧನ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಷ್ಣುವರ್ಧನ್ ಅಳಿಯ ...

news

ಒಂದುವರೆ ತಿಂಗಳು ಅಪ್ರಾಪ್ತೆಯನ್ನು ರೇಪ್ ಮಾಡಿದ ಕಾಮುಕ ಅರೆಸ್ಟ್

ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನ ಬಂಧನ ...

news

ಆ ದೇವಿ ಆಶೀರ್ವಾದ ಮಾಡಿದ್ರೆ ಜಾನುವಾರುಗಳಿಗೆ ಯಾವುದೇ ರೋಗ ಬರೋದಿಲ್ಲ!

ಕಾರ್ತಿಕಮಾಸ ಪ್ರಯುಕ್ತ ಪಾರ್ವತಾಂಭ ಜಾತ್ರೆಯು ಭಕ್ತರ ಸಡಗರ ನಡುವೆ ನೆರವೇರಿತು.

news

ಅಂಬರೀಶ್ ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೆ ಕುಟುಂಬದವರಿಗೆ ಸಾಥ್ ನೀಡಿದ ರಾಕ್ ಲೈನ್, ದರ್ಶನ್

ಬೆಂಗಳೂರು: ಶನಿವಾರ ನಿಧನರಾದ ಹಿರಿಯ ನಟ ಅಂಬರೀಶ್ ಅಸ್ಥಿ ಸಂಗ್ರಹ, ಹಾಲು ತುಪ್ಪ ಬಿಡುವ ಕಾರ್ಯಕ್ರಮ ಇಂದು ...

Widgets Magazine
Widgets Magazine